ಸಾರಾಂಶ
ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ರೈತ ತಂದು ದೂರು ಸಲ್ಲಿಸಿದ್ದರು. ರೈತನ ದೂರಿನ ಮೇಲೆ ಆ.12ರಂದು ದಾಳಿ ನಡೆಸಿ ಗ್ರಾಮ ಲೆಕ್ಕಿಗನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ದುದ್ದುಣಗಿ ಗ್ರಾಮದ ರೈತರಾದ ರಮೇಶ ಜೇವರ್ಗಿ ಅವರ 1.33 ಎಕರೆ ಜಮೀನು ಅದೇ ಗ್ರಾಮದ ಸೈಫನಸಾಬ್ ಅಜೀಜ್ ನಾಕೇದಾರ ಎನ್ನುವವರು ಖರೀದಿ ಮಾಡಿದ್ದರು. ಖರೀದಿಯ ಬಳಿಕ ಕಂದಾಯ ಇಲಾಖೆಯ ಭೂಮಿ ಶಾಖೆಯಲ್ಲಿನ ಇಲಾಖಾ ಕೆಲಸಕ್ಕಾಗಿ ರೈತರಿಂದ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಿಗ ಸಿದ್ದರಾಮ ಪಡಶೆಟ್ಟಿ ಎನ್ನುವವರನ್ನು ಲಂಚ ಪಡೆಯುವಾಗಲೇ ಲೋಕಾ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.ದುದ್ದುಣಗಿ ಗ್ರಾಮದ ಪ್ರಭಾರಿ ಗ್ರಾಮ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದ ಸಿದ್ದರಾಮ ಪಡಶೆಟ್ಟಿ ಎನ್ನುವವರು ರೈತ ಸೈಫನಸಾಬ್ ಅವರಿಂದ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ರೈತ ತಂದು ದೂರು ಸಲ್ಲಿಸಿದ್ದರು. ರೈತನ ದೂರಿನ ಮೇಲೆ ಆ.12ರಂದು ದಾಳಿ ನಡೆಸಿ ಗ್ರಾಮ ಲೆಕ್ಕಿಗನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಮಂಜುನಾಥ ಗಂಗಲ, ಧೃವತಾರೆ, ಶರಣು, ಮಸೂದ, ಹಣಮಂತಪ್ಪ,ರಾಜೀವ, ಕನ್ನಯ್ಯ ಲಾಲ್, ಮಂಜುನಾಥ, ಪ್ರಮೋದ ಇದ್ದರು.