ಸಾರಾಂಶ
- “ಮನೆ ಮನೆಗಳಲ್ಲಿ ವೇದ ಪಾರಾಯಣ” ಎಂಬ ಹೊಸ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ
- ಈಗಾಗಲೇ 123 ಮನೆಗಳಲ್ಲಿ ಋಗ್ವದ ಸಂಹಿತಾ ಪಾರಾಯಣ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಬಿ.ಎಚ್. ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಫೆ.21ರಿಂದ 28ರವರೆಗೆ ಲೋಕಕಲ್ಯಾಣಾರ್ಥ ಶ್ರೀ ಶಾಕಲ ಋಕ್ಸಂಹಿತಾ ಯಾಗವನ್ನು ಏರ್ಪಡಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ 4 ವೇದಗಳ ಸಂಹಿತಾ ಯಾಗವನ್ನು ಎರಡು ಆವೃತ್ತಿಗಳಲ್ಲಿ ಪೂರೈಸಲಾಗಿದೆ ಎಂದರು.ಈ ವರ್ಷ ಆಚರಿಸಲಿರುವ ಶಾಕಲ ಋಕ್ಸಂಹಿತಾ ಯಾಗಕ್ಕೆ ಪೂರ್ವಭಾವಿಯಾಗಿ “ಮನೆ ಮನೆಗಳಲ್ಲಿ ವೇದ ಪಾರಾಯಣ” ಎಂಬ ಹೊಸ ಪರಿಕಲ್ಪನೆಯೊಂದಿಗೆ 123 ಮನೆಗಳಲ್ಲಿ ಋಗ್ವದ ಸಂಹಿತಾ ಪಾರಾಯಣವನ್ನು ಮಾಡಿಸಲಾಗಿದೆ. ಫೆ.21ರಂದು ಬೆಳಗ್ಗೆ 7ಕ್ಕೆ ಪೂಜಾ ಕಾರ್ಯಕ್ರಮಗಳೊಂದಿಗೆ ಯಾಗ ಆರಂಭವಾಗಲಿದೆ. ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಇರುತ್ತದೆ ಎಂದರು.
ಫೆ.23ರಂದು ಸಂಜೆ 6 ಗಂಟೆಗೆ ಆಗಮಿಸಲಿರುವ ಶ್ರೀಮದ್ ಉತ್ತರಾದಿ ಮಠದ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಅನುಗ್ರಹ ಆಶೀರ್ವಚನ ಹಾಗೂ “ಮನೆ ಮನೆಗಳಲ್ಲಿ ವೇದ ಪಾರಾಯಣ ಮಾಡಿಸಲು ಸಹಕಾರ ನೀಡಿದ ಕುಟುಂಬದವರಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಫೆ.25ರಂದು ಮಧ್ಯಾಹ್ನ 12 ಗಂಟೆಗೆ ಕೃಷ್ಣರಾಜನಗರದ ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿ, 123 ಮನೆಗಳಲ್ಲಿ ವೇದಪಾರಾಯಣ ಮಾಡಿಕೊಟ್ಟ ವೇದಾಧ್ಯಾಯಿಗಳನ್ನು ಪುರಸ್ಕರಿಸಿ, ಆಶೀರ್ವದಿಸಲಿದ್ದಾರೆ. ಅನುಗ್ರಹ ಆಶೀರ್ವಚನ ಮಾಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಲಿದ್ದಾರೆ ಎಂದರು.ಫೆ.28ರಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಕಲ ಋಕ್ಸಂಹಿತಾ ಯಾಗದ ಮಹಾ ಪೂರ್ಣಾಹುತಿ ನಡೆಯಲಿದೆ ಮತ್ತು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ನಿಸ್ವಾರ್ಥ ಸೇವೆ ಮಹನೀಯರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಫೆ.21ರಿಂದ 27ರವರೆಗೆ ಪ್ರತಿದಿನ ಸಂಜೆ 6ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಹಾಗೂ ಸಂಜೆ 6.45 ರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಫೆ.21ರಂದು ವೇದಗಳಲ್ಲಿ ಪಂಚಾಕ್ಷರಿ ಮಂತ್ರ ಚಿಂತನೆ, ಫೆ.22ರಂದು ಧರ್ಮಶಾಸ್ತ್ರಗಳಲ್ಲಿ ವರ್ಣಾಶ್ರಮಗಳು, ಫೆ.24ರಂದು ಮೋಕ್ಷ ಸಾಧನೆಗೆ ಹತ್ತು ಸೋಪಾನಗಳು, 25ರಂದು ವೇದ ಪುರಾಣಗಳಲ್ಲಿ ಭಕ್ತಿ, ಫೆ.26ರಂದು ವೇದಗಳ ಮಹತ್ವ, ಫೆ.27ರಂದು ಮೋಕ್ಷ ಸಾಧನೆಗೆ ಹತ್ತು ಸೋಪಾನಗಳು ವಿಷಯ ಕುರಿತು ಉಪನ್ಯಾಸಕರು ಉಪನ್ಯಾಸ ನೀಡಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಕೆ. ವೆಂಕಟೇಶ್‍ಮೂರ್ತಿ, ಶಂಕರ ನಾರಾಯಣ, ಸೂರ್ಯನಾರಾಯಣ ರಾವ್, ಕೇಶವಮೂರ್ತಿ, ಡಾ.ನಾಗಮಣಿ, ಸರಳ, ಡಾ.ರವಿಕಿರಣ್, ಕುಮಾರ ಶಾಸ್ತ್ರಿ ಉಪಸ್ಥಿತರಿದ್ದರು.
- - - -(ಸಾಂದರ್ಭಿಕ ಚಿತ್ರ: ಯಾಗ.ಜೆಪಿಜಿ)