ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ನಿಮಿತ್ತ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ವೆಂಕಟರಮಣ ಗೋವಿಂದ ಗೋವಿಂದ ಎಂಬ ಜಯಘೋಷಗಳೊಂದಿಗೆ ನಡೆದ ರಥೋತ್ಸವದಲ್ಲಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂವು ಅರ್ಪಣೆ ಮಾಡಿ, ತೆಂಗಿನಕಾಯಿ ಒಡೆದು, ಕರ್ಪೂರ ಹಚ್ಚಿ, ಊದುಬತ್ತಿ ಬೆಳಗಿದರು. ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಮತ್ತು ಪುರಾಣ ಮಂಗಲ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
ಜ್ಞಾನೇಶ್ವರ ಮಠದ ಪೀಠಾದಿಕಾರಿ ಬ್ರಹ್ಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಅರ್ಚಕ ಬಿ.ಎಲ್. ಬಬಲಾದಿ ನೇತೃತ್ವ ವಹಿಸಿದ್ದರು.ಬಿ.ಡಿ. ಚಿನಗುಂಡಿ, ಗುರುರಾಜ ಜೋಶಿ, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ಗುರುರಾಜ ಉದಪುಡಿ, ವಿನೋದ ಘೋರ್ಪಡೆ, ಕಿರಣ ದೇಸಾಯಿ, ವಿಜಯಕಾಂತ ದೇಸಾಯಿ, ಆನಂದಚಾರ್ಯ ಜಂಬಗಿ, ರಾಘವೇಂದ್ರಚಾರ್ಯ ಬಬಲಾದಿ, ಭೀಮಣ್ಣಾ ಜೋಶಿ, ವಿರೇಂದ್ರ ಪಾಟೀಲ, ಕೆ.ವಿ. ಕುಲಕರ್ಣಿ, ವಸಂತರಾವ ಕುಲಕರ್ಣಿ, ಪ್ರಲ್ಹಾದ ಜೋಶಿ, ರಾಘವೇಂದ್ರ ಮುರಗೋಡ, ತುಷಾರ ಜೋಶಿ, ಪ್ರವೀಣ ಸೋಮಾಪುರ, ನಾಗರಾಜ ಕುಲಕರ್ಣಿ, ಸಂತೋಷ ದೇಶಪಾಂಡೆ, ಅಪ್ಪಾರಾವ್ ದೇಶಪಾಂಡೆ, ಗಿರೀಶ ಹುಕುಮನವರ, ವಿಠ್ಠಲ ಹೂಗಾರ, ಹರೀಶ ಹುಕುಮನವರ, ಹೊಳಬಸು ಕಾಜಗಾರ, ಯಮನಪ್ಪ ಹೊರಟ್ಟಿ, ವೆಂಕಟಾಪೂರ, ಲಕ್ಷಾನಟ್ಟಿ, ಅರಳಿಕಟ್ಟಿ, ಜಾಲಿಕಟ್ಟಿ, ನಾಗಣಾಪುರ ವಿವಿಧ ಗ್ರಾಮದ ಭಕ್ತರು ಇದ್ದರು.