- ಜನರ ಕೆಲಸಗಳಿಗೆ ಸಕಾಲಕ್ಕೆ ಸ್ಪಂದಿಸಲು ಅಧಿಕಾರಿ, ಸಿಬ್ಬಂದಿಗೆ ತಾಕೀತು
- - -ಹೊನ್ನಾಳಿ: ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲ್ಙಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಪುರಸಭೆಗೆ ಭೇಟಿ ನೀಡಿ, ಕಂದಾಯ ಹಾಗೂ ವಿವಿಧ ಶಾಖೆಗಳ ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ಮಾತನಾಡಿ, ಅಧಿಕಾರಿಗಳಾದ ನೀವು ಸಕಾಲಕ್ಕೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಟ್ಟರೆ ಸಾರ್ವಜನಿಕರು ಲೋಕಾಯುಕ್ತ ಮೆಟ್ಟಿಲು ಹತ್ತುವುದಿಲ್ಲ. ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸಿದಾಗ ಮಾತ್ರ ಅವರು ನಮ್ಮ ಬಳಿ ಬರುತ್ತಾರೆ. ನೀವು ತೆಗೆದುಕೊಳ್ಳುವ ಸಂಬಳಕ್ಕಾದರೂ ನಿಯತ್ತಾಗಿ ಸಾರ್ವಜನಿಕರಿಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡಿ. ಸುಖಾಸುಮ್ಮನೆ ಅಲೆದಾಡಿಸಬೇಡಿ ಎಂದು ತರಾಟೆ ತೆಗೆದುಕೊಂಡರು.ಮಧ್ಯವರ್ತಿಗಳ ಮೂಲಕವೇ ಸಾರ್ವಜನಿಕರ ಕೆಲಸಗಳು ಆಗಬೇಕು, ಸಾರ್ವಜನಿಕರು ನೇರ ಹೋಗಿ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬ ವಿಷಯವಾಗಿ ದೂರುಗಳು ಬಂದಿದ್ದರು. ಇಂಥ ದೂರುಗಳು ಮತ್ತೆ ಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪುರಸಬೆ ಅಧಿಕಾರಿಗಳಿಗೆ ಲೋಕಾಯುಕ್ತಾ ಎಸ್ಪಿ ಎಂ.ಎಸ್.ಕೌಲ್ಙಾಪುರೆ ಎಚ್ಚರಿಗೆ ನೀಡಿದರು.
ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸ ಆಗಲಿಲ್ಲ ಎಂದು ನೊಂದು ಹೋದರೆ ನಿಮಗೆ ಒಳ್ಳೆಯದಾಗುವುದಿಲ್ಲ. ಒಬ್ಬ ವಿದ್ಯಾರ್ಥಿಗೆ ಶಾಲಾ ದಾಖಲಾತಿ ಹೊಂದಿಸುವಾಗ ಯಾವುದಾರೂ ತುರ್ತು ಪ್ರಮಾಣಪತ್ರ ನಿಮ್ಮ ಕಚೇರಿಯಿಂದ ಬೇಕಿರುತ್ತದೆ ಅಥವಾ ನಿವಾಸಿ ದೃಢೀಕರಣ ಅಗತ್ಯವಾಗಿ ಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಅಲೆದಾಡಿಸುವುದು ನಿಮಗೆ ಸರಿ ಎನ್ನಿಸುತ್ತದಾ? ಒಮ್ಮೆ ನಿಮಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿಬ್ಬಂದಿಗೆ ಪ್ರಾ,ಮಾಣಿಕ ಸೇವೆಯ ಪಾಠ ಮಾಡಿದರು.
ಡಿವೈಎಸ್ಪಿ ಕಲಾವತಿ, ಪೊಲಿಸ್ ಇನ್‌ಸ್ಪೆಕ್ಟರ್‌ಗಳಾದ ಸರಳ, ಪ್ರಭು ಸೂರಿನ್, ಶ್ರೀದೇವಿ ಪಾಟೀಲ್, ದಾದಾಹುಲಿ ಇತರ ಸಿಬ್ಬಂದಿ ಪುರಸಭೆಯಲ್ಲಿನ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಎಂಜಿನಿಯರ್ ದೇವರಾಜ್, ಕಂದಾಯ ನಿರೀಕ್ಷಕರ ಶಿವಕುಮಾರ್ ಉಪಸ್ಥಿತರಿದ್ದರು.- - -
-16ಎಚ್.ಎಲ್.ಐ1:ಹೊನ್ನಾಳಿ ಪುರಸಭೆಗೆ ಲೋಕಾಯುಕ್ತ ಎಸ್ಪಿ ಕೌಲ್ಙಾಪುರೆ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ, ದಾಖಲೆಗಳ ಪರಿಶೀಲಿಸಿದರು.