ಸಾರಾಂಶ
ಜಿಲ್ಲಾ ಲೋಕಾಯುಕ್ತ ಎಸ್‌ಪಿ ಧನಂಜಯ ನೇತೃತ್ವದ ಲೋಕಾಯುಕ್ತ ತಂಡ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಏಕ ಕಾಲಕ್ಕೆ ಸುರೇಶ್ ಬಾಬು ಅವರ ಎರಡು ಮನೆ ಮೇಲೆ ದಾಳಿ ನಡೆಸಿದರು.
ಮಾಲೂರು: ತಾಲೂಕಿನ ನಿಡಘಟ್ಟ ಗ್ರಾಮದಲ್ಲಿರುವ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲಿ ಜಿಲ್ಲಾ ಸರ್ವೆ ಸೂಪರ್ ವೈಸರ್ ಸುರೇಶ್ ಬಾಬು ಅವರ ಗ್ರಾಮದ ಮನೆ ಹಾಗೂ ಮಾಲೂರು ಪಟ್ಟಣದ ಮನೆ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಕೋಲಾರ ಲೋಕಾಯುಕ್ತ ರ ಧಾಳಿ ನಡೆದಿದೆ.ಜಿಲ್ಲಾ ಲೋಕಾಯುಕ್ತ ಎಸ್‌ಪಿ ಧನಂಜಯ ನೇತೃತ್ವದ ಲೋಕಾಯುಕ್ತ ತಂಡ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಏಕ ಕಾಲಕ್ಕೆ ಸುರೇಶ್ ಬಾಬು ಅವರ ಎರಡು ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿಸಿದರು. ಅಕ್ರಮವಾಗಿ ಸರ್ಕಾರಿ ದಾಖಲೆ ತಿದ್ದಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಆರೋಪ ಜತೆಯಲ್ಲಿ ಕೋಟ್ಯಾಂತರ ರುಪಾಯಿಗಳ ಅಕ್ರಮ ಆಸ್ತಿ ಮಾಡಿರುವ ದೂರಿನ ಅನ್ವಯ ಜಿಲ್ಲೆಯ 6 ಕಡೆ ದಾಳಿ ನಡೆದಿದೆ. ದಾಳಿ ವೇಳೆಯಲ್ಲಿ ಸುರೇಶ್ ಬಾಬು ಅವರ ಗ್ರಾಮದ ಮನೆಯಲ್ಲಿದ್ದರು ಎನ್ನಲಾಗಿದೆ. ದಾಳಿಯ ಫಲಿತಾಂಶದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ ಬಹಳಷ್ಟು ಚಿನ್ನದ ಒಡವೆ ಹಾಗೂ ಲಕ್ಷಕ್ಕೂ ಹೆಚ್ಚು ನಗದು ಹಾಗೂ ಕೆಲವು ಭೂ ದಾಖಲೆ ಸಿಕ್ಕಿದೆ ಎನ್ನಲಾಗಿದೆ.