ಜನರ ಅಹವಾಲು ಆಲಿಸಿದ ಲೋಕಾಯುಕ್ತ ಎಸ್‌ಪಿ

| Published : Feb 16 2024, 01:47 AM IST

ಸಾರಾಂಶ

ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಯಾದಗಿರಿ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್ ಜೆಕೆ ಸುರಪುರ ತಾಲೂಕಿನ ಜನತೆಯಿಂದ ಅಹವಾಲು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಯಾದಗಿರಿ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್ ಜೆ. ಕೆ. ಅವರು ಸುರಪುರ ತಾಲೂಕಿನ ಜನತೆಯಿಂದ ಅಹವಾಲು ಸ್ವೀಕರಿಸಿದರು.

ರಾಜನಕೊಳ್ಳೂರು ಜಮೀನಿನಲ್ಲಿ ಹದ್ದುಬಸ್ತು ಮಾಡಿಕೊಡುವಂತೆ ವೆಂಕನಗೌಡ ಇದುವರೆಗೂ ಕಾರ್ಯವಾಗದ ಕುರಿತು ಲೋಕಾಯುಕ್ತ ಎಸ್‌ಪಿಗೆ ದೂರು ಸಲ್ಲಿಸಿದರು. ಗುಂಡಗುರ್ತಿಯ ಭಗವಂತರಾಯ ರಾಜ ಅವರು ಮಳೆಗಾಲದಲ್ಲಿ ಅಲೆಮಾರಿ ಜನರ ಮನೆ ಬಿದ್ದು ಹಾನಿಯಾಗಿದ್ದುಪರಿಹಾರ ದೊರಕಿಸಿಕೊಡುವಂತೆ ದೂರು ನೀಡಿದರು. 2023ರಲ್ಲಿ ಕಕ್ಕೇರಾ, ಹುಣಸಗಿಯಲ್ಲಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಕೊಡುವುದಕ್ಕೆ ನಿಗದಿಗಿಂತ ಹೆಚ್ಚಿನ ಹಣ ಪಡೆಯುತ್ತಿದ್ದ ಏಜೆನ್ಸಿಯವರ ವಿರುದ್ಧ ಕ್ರಮಕೈಗೊಳ್ಳುವಂತೆ ತಳವಾರಗೇರಾದ ಶರಣಪ್ಪ ಅವರು ದೂರು ಸಲ್ಲಿಸಿದರು.

ಕಕ್ಕೇರಾ ರೈತ ಹೊನ್ನಪ್ಪ ಅವರಿಗೆ ಪಹಣಿ ಮಾಡಿಕೊಡದಿರುವ ಅಧಿಕಾರ ಬಗ್ಗೆ ದೂರು ಸಲ್ಲಿಸಿದರು. ನೀರು, ಪಹಣಿ-ತಿದ್ದುಪಡಿ, ಕಾಲುವೆ ಮೂಲಕ ನೀರು ಹರಿಸುವುದು, ಮಳೆಗೆ ಮನೆ ಬಿದ್ದಿರುವುದಕ್ಕೆ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ಎಲ್ಲ ಸಮಸ್ಯೆಗಳನ್ನು ಆಲಿಸಿ ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್ ಜೆಕೆ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಚರ್ಚಿಸಿ ಸ್ಥಳದಲ್ಲೇ ಪರಿಹರಿಸಿದರು.

ಲೋಕಾಯುಕ್ತ ಡಿವೈಎಸ್ಪಿ ಹಣಮಂತ್ರಾಯ, ಇನ್ಸಪೆಕ್ಟರ್‌ ಹಣಮಂತ ಸಣ್ಣಮನಿ, ತಹಸೀಲ್ದಾರ್ ಕೆ.ವಿಜಯಕುಮಾರ, ಪಿಐ ಆನಂದ ವಾಗ್ಮೋರೆ ಇದ್ದರು. ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯವರು ಇದ್ದರು.