ಬೆಂಗಳೂರು-ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಹುನಗುಂದ ಪುರಸಭೆಗೆ ಲೋಕಾಯುಕ್ತ ತಂಡ ಭೇಟಿ ನೀಡಿ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಪರಿಶೀಲನೆ ಗುರವಾರ ನಡೆಸಿತು.

ಕನ್ನಡಪ್ರಭ ವಾರ್ತೆ ಹುನಗುಂದ

ಬೆಂಗಳೂರು-ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಹುನಗುಂದ ಪುರಸಭೆಗೆ ಲೋಕಾಯುಕ್ತ ತಂಡ ಭೇಟಿ ನೀಡಿ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಪರಿಶೀಲನೆ ಗುರವಾರ ನಡೆಸಿತು.

ಇ-ಸ್ವತ್ತು, ಎನ್‌ಓಸಿ ಮತ್ತು ಕಟ್ಟಡ ಕಟ್ಟಲು ಅನುಮತಿ, ಖಾತೆ ಬದಲಾವಣೆ, ಕಂಪ್ಯೂಟರ್ ಉತಾರ ನೀಡುವುದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಬೇಡಿಕೆ ಇಡುತ್ತಿದ್ದಾರೆಂಬ ಹಾಗೂ ಸಾರ್ವಜನಿಕರಿಗೆ ಕೆಲಸ ಮಾಡಲು ವಿಳಂಬ ಮಾಡಿ ತೊಂದರೆ ಮಾಡುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಪಿಡಿಒಗೆ ತಾಕೀತು ಮಾಡಿದರು. ಸಾರ್ವಜನಿಕರ ಅವಾಲು ಸ್ಥಳದಲ್ಲಿಯೇ ಸ್ವೀಕರಿಸಿ ನಾಲ್ಕು ಜನರಿಗೆ ಉತಾರ ಕೊಡಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದರು. ಈ ದಿಢೀರ್ ಭೇಟಿ ಪುರಸಭೆ ಹಾಗೂ ತಾಲೂಕು ಕಚೇರಿ ವಲಯದಲ್ಲಿ ಸಂಚಲನ ಮೂಡಿಸಿತ್ತು. ಡಿವೈಎಸ್ಪಿ ಸುರೇಶ ರೆಡ್ಡಿ, ಇನ್ ಪೆಕ್ಟರ್ ಬೀಮನಗೌಡ ಬಿರಾದರ, ಮಲ್ಲಿಕಾರ್ಜುನ ಬಿರಾದರ, ಎನ್.ಎ. ಕಿಲ್ಲಾರಿ ಹಾಗೂ ಸಿಬ್ಬಂದಿ ಇದ್ದರು.