ಕಾಯಂ ಪಿಡಿಒ ನೇಮಕಾತಿಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ

| Published : Sep 28 2024, 01:19 AM IST

ಕಾಯಂ ಪಿಡಿಒ ನೇಮಕಾತಿಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಟ್ಟಿಗೆಹಾರ: ತರುವೆ ಗ್ರಾ‌ಮ ಪಂಚಾಯ್ತಿಗೆ ಕಾಯಂ ಪಿಡಿಒ ನೇಮಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಅವರು ಶುಕ್ರವಾರ ಪಂಚಾಯ್ತಿ ಕಚೇರಿ ಎದುರು ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಕೊಟ್ಟಿಗೆಹಾರ: ತರುವೆ ಗ್ರಾ‌ಮ ಪಂಚಾಯ್ತಿಗೆ ಕಾಯಂ ಪಿಡಿಒ ನೇಮಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಅವರು ಶುಕ್ರವಾರ ಪಂಚಾಯ್ತಿ ಕಚೇರಿ ಎದುರು ಕುಳಿತು ಮೌನ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಜಯ್‌ಗೌಡ, ಪಿಡಿಒ ಇಲ್ಲದೆ ಗ್ರಾಮದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ತಾತ್ಕಾಲಿಕ ಪಿಡಿಒ ನೇಮಕದಿಂದ ಎರಡೆರಡು ಪಂಚಾಯ್ತಿ ಕೆಲಸಗಳು ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆಗಳಿವೆ. ಪ್ರತಿ ಯೊಂದು ಕೆಲಸ ಮಾಡಬೇಕಾದರೂ ಪಿಡಿಒ ಲಾಗಿನ್ ಬೇಕಾಗುತ್ತದೆ ಎಂದರು.

18ನೇ ಹಣಕಾಸು ಆಯೋಗದ ಹಣ ಸದ್ಬಳಕೆಯಾಗದೇ ನೌಕರರಿಗೆ ಸಮಸ್ಯೆಯಾಗಿದೆ. ಸರ್ಕಾರ ಕೂಡಲೇ ತರುವೆ ಗ್ರಾಮ ಪಂಚಾಯಿತಿಗೆ ಕಾಯಂ ಪಿಡಿಒ ನೇಮಕಾತಿ ಮಾಡಬೇಕು, 18 ನೇ ಆಯೋಗದ ಹಣ ಬಿಡುಗಡೆಗೊಳಿಸಬೇಕು, ಇಲ್ಲದಿದ್ದರೆ ಏಕಾಂಗಿ ಹೋರಾಟ ಮುಂದುವರಿ ಸಲಾಗುವುದು ಎಂದು ಎಚ್ಚರಿಕೆ ನೀಡಿದರು.

27 ಕೆಸಿಕೆಎಂ 2ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯ್ತಿಗೆ ಖಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿ ಸಂಜಯ್‌ಗೌಡ ಶುಕ್ರವಾರ ಪಂಚಾಯ್ತಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.