ಸಾರಾಂಶ
ಸೋಮಣ್ಣನನ್ನು ಮುಗಿಸಿಬಿಟ್ಟೆವು ಎನ್ನುತ್ತಿದ್ದರು. ಆದರೆ, ಮಲೆ ಮಹದೇಶ್ವರ ಹಾಗೂ ನಾನು ನಂಬಿದ ನಾಯಕರು ನನ್ನನ್ನು ಕೈ ಬಿಡಲಿಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವ ವಿ.ಸೋಮಣ್ಣ ಭಾವುಕರಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹನೂರು
ಸೋಮಣ್ಣನನ್ನು ಮುಗಿಸಿಬಿಟ್ಟೆವು ಎನ್ನುತ್ತಿದ್ದರು. ಆದರೆ, ಮಲೆ ಮಹದೇಶ್ವರ ಹಾಗೂ ನಾನು ನಂಬಿದ ನಾಯಕರು ನನ್ನನ್ನು ಕೈ ಬಿಡಲಿಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವ ವಿ.ಸೋಮಣ್ಣ ಭಾವುಕರಾಗಿ ಮಾತನಾಡಿದರು.ಮನೆ ದೇವರು, ಇಷ್ಟ ದೇವರಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಭೇಟಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕೆಲಸಗಾರನಿಗೆ ಭಗವಂತ ಕೈ ಬಿಡಲಿಲ್ಲ, ನಂಬಿದ ನಾಯಕರು ಕೈ ಬಿಡಲಿಲ್ಲ, ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಸೋಮಣ್ಣನನ್ನು ಮುಗಿಸಿಬಿಟ್ಟರು ಎಂಬ ಮಾತುಗಳಿದ್ದವು. ಆದರೆ, ಭಗವಂತ, ಅಜ್ಜ ಕೆಲಸಗಾರನ ಕೈ ಬಿಡಲಿಲ್ಲ ಎಂದರು. ವಿ.ಸೋಮಣ್ಣ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಬಡವರಿಗೆ ಸೀರೆ ಮತ್ತು ರಗ್ಗು ವಿತರಿಸಿದರು. ಮುಂಗಾರು ಆರ್ಭಟಕ್ಕೆ ಸಂತಸ ವ್ಯಕ್ತಪಡಿಸಿ, ನಾವಾದರೂ ನಮ್ಮ ಕೆಲಸ ಮರೆಯಬಹುದು ಆದರೆ ಪ್ರಕೃತಿ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿರುತ್ತದೆ ಎಂದು ಉತ್ತಮ ಮಳೆ ಆಗುತ್ತಿರುವ ಬಗ್ಗೆ ಹೇಳಿದರು.
ಮೈಸೂರಿನ ಎಸ್.ಎಂ.ಪಿ ಡೆವಲಪರ್ ಶಿವಪ್ರಕಾಶ್, ಉಮೇಶ್, ಮಂಗಲ ಶಿವಕುಮಾರ್, ಸಿ.ಗುರುಸ್ವಾಮಿ, ನಟರಾಜಗೌಡ, ಪುಟ್ಟಣ್ಣ ಮಾಸ್ಟರ್, ಶಾಂತರಾಜು, ಪ್ರಜೇಶ್ ಇತರರು ಇದ್ದರು.