ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಹನುಮ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಕೋಟೆ ಆಂಜನೇಯಸ್ವಾಮಿ,ಶ್ರೀ ಶನೇಶ್ವರಸ್ವಾಮಿ,ಶ್ರೀ ವೇಣುಗೋಪಾಲಸ್ವಾಮಿ, ಅಮ್ಮ ಚೌಡೇಶ್ವರಿ, ಚಾಮುಂಡೇಶ್ವರಿ , ಮಾರಮ್ಮ ಹಾಗೂ ಸೇರಿ ತಾಲೂಕಿನ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ತಾಲೂಕಿನ ಗುಂಡ್ಲಹಳ್ಳಿ ಆಂಜನೇಯಸ್ವಾಮಿ ದೇಗುಲ ಸೇರಿ ನಗರದ ಶ್ರೀ ಶನಿಮಹಾತ್ಮಸ್ವಾಮಿ,ಕಿರ್ಲಾಲಹಳ್ಳಿ ಆಂಜನೇಯಸ್ವಾಮಿ ಹಾಗೂ ಪಟ್ಟಣದ ವೇಣುಗೋಪಾಲಸ್ವಾಮಿ ಹಾಗೂ ಪಳವಳ್ಳಿ, ವೈ.ಎನ್.ಹಳ್ಳಿ ಬಯಲಾಂಜನೇಯಸ್ವಾಮಿ, ದೊಡ್ಡಹಳ್ಳಿ, ವಡ್ರೇವು, ಕೋಟಗುಡ್ಡ ರಸ್ತೆ ಪಕ್ಕದ ಆಂಜನೇಯಸ್ವಾಮಿ,ಓಬಳಾಪುರದ ಬಂಡೆ ಆಂಜನೇಯಸ್ವಾಮಿ ಹಾಗೂ ಟೋಲ್‌ಗೇಟ್ ಬಳಿಯ ಅಮ್ಮ ಚೌಡೇಶ್ವರಿ,ಪಳವಳ್ಳಿ ಶ್ರೀ ಚಾಮುಂಡೇಶ್ವರಿ ಹಾಗೂ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜಾ ಕೆಂಕೈರ್ಯ ನೆರೆವೇರಿಸಿದ್ದು ಅಪಾರ ಸಂಖ್ಯೆಯ ಭಕ್ತರು ದೇಗುಲಗಳಿಗೆ ತೆರಳಿ ಶ್ರದ್ದಾಭಕ್ತಿಯ ಪೂಜೆ ನೆರೆವೇರಿಸಿದರು.
ತಾಲೂಕಿನ ಓಬಳಾಪುರ ಹೊರವಲಯದ ಶ್ರೀ ಬಂಡೆ ಆಂಜನೇಯಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವರ ದಿಕ್ಕಿನ ವಡ್ರೇವು ಶ್ರೀ ಆಂಜನೇಯಸ್ವಾಮಿ,ಯಲ್ಲಪ್ಪನಾಯಕಹಳ್ಳಿಯ ಶ್ರೀ ಬಯಲಾಂಜನೇಯಸ್ವಾಮಿ ದೇಗುಲಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ಪೂಜೆ ಕೆಂಕೈರ್ಯ ನೆರೆವೇರಿಸಿದರು.ಇಲ್ಲಿನ ಕಣಿವೇನಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ,ಅಯ್ಯಪ್ಪಸ್ವಾಮಿ ಹಾಗೂ ರಂಗಸಮುದ್ರದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಹಾಗೂ ಪತಂಜಲಿ ನಗರದ ಶ್ರೀ ರಾಘವೇಂದ್ರಸ್ವಾಮಿ,ಶಿರಡಿಸಾಯಿಬಾಬಾ ದೇಗುಲಗಳಲ್ಲಿ ವಿವಿಧ ರೀತಿಯ ಪೂಜೆ ಹಾಗೂ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಸ್ವಚ್ಚತೆ,ಬಾಳೇ ಕಂದು ಹಾಗೂ ಮಾವಿನ ಎಲೆ ತೋರಣ,ವಿಳ್ಯದೆಲೆ ಸೇರಿದಂತೆ ಬಗೆಬಗೆಯ ಹೂವಿನ ಅಲಂಕಾರದಿಂದ ದೇವರ ವಿಗ್ರಹ ಹಾಗೂ ದೇಗುಲಗಳನ್ನು ಶೃಂಗಾರಗೊಳಿಸಿದ್ದು ಭಕ್ತರ ಗಮನ ಹೆಚ್ಚು ಸೆಳೆದಿದ್ದು ವಿಶೇಷವಾಗಿತ್ತು.
ಗುಬ್ಬಿ ಪಟ್ಟಣದಲ್ಲಿ ಹನುಮ ಜಯಂತಿ ಸಂಭ್ರಮಕನ್ನಡ ಪ್ರಭ ವಾರ್ತೆ ಗುಬ್ಬಿ ಪಟ್ಟಣ ಹಾಗೂ ತಾಲೂಕಿನ ಹಲವಾರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಶ್ರೀರಾಮದೂತ ಆಂಜನೇಯನಿಗೆ ವಿಶೇಷ ಪೂಜೆ ,ಅಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ ,ನವಗ್ರಹ ಹೋಮ ,ರಾಮ ತಾರಕ ಹೋಮ ಹೀಗೆ ಹಲವಾರು ಧಾರ್ಮಿಕ ಪೂಜೆಯೊಂದಿಗೆ ಭಕ್ತಾದಿಗಳು ಆಚರಿಸಿದ ಆಚರಿಸಿದರು. ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬೈಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದ ವಿಶೇಷ ಪೂಜೆಯೊಂದಿಗೆ ಭಕ್ತಾದಿಗಳ ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೀಡಿದರು.ಪಟ್ಟಣದ ಬೆಲ್ಲದ ಪೇಟೆಯ ಶ್ರೀ ವೀರಾಂಜನೇಯ ಸ್ವಾಮಿ ವೀರಾಂಜನೇಯ ಸ್ವಾಮಿ ದೇವಾಲಯ, ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಕಾರ್ ಸ್ಟ್ಯಾಂಡ್ ಆವರಣದಲ್ಲಿ ನಿರ್ಮಿಸಿರುವ ಶ್ರೀ ಭಕ್ತಾಂಜನೇಯ ಸ್ವಾಮಿ ದೇವಾಲಯ, ಸಂತೆ ಮೈದಾನದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ಹನುಮ ಜಯಂತಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ಬಂದ ಮಹಾ ಮಂಗಳಾರತಿ ನಂತರ ಭಕ್ತಾದೆಗಳಿಗೆ ಪ್ರಸಾದ ನೀಡಲಾಯಿತು.