ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ ಅಗ್ರಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಸುಧಾರಿತ ಶೇಖರಣ ರಚನೆ ಹಾಗೂ ದ೦ಶಕಗಳ ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶೇಖರಣ ಸಮಯದಲ್ಲಿ ಧಾನ್ಯಗಳನ್ನು ಅನುಪಯುಕ್ತಗೊಳಿಸುವ ಕೀಟಗಳ ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇದರಿಂದಾಗಿ ಅಧಿಕ ನಷ್ಟ ಉಂಟಾಗುತ್ತದೆ ಎಂದು ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಶಿವರಾಯನಾವಿ ಅವರು ತಿಳಿಸಿದರು.ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ ಅಗ್ರಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಸುಧಾರಿತ ಶೇಖರಣ ರಚನೆ ಹಾಗೂ ದ೦ಶಕಗಳ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಬೆಳೆಯ ಬೆಳವಣಿಗೆಯ ನಂತರ ಕಟಾವು ಮಾಡಿದ ಧಾನ್ಯಗಳನ್ನು ಶೇಖರಣೆ ಮಾಡುವುದು ಹಿಂದಿನಿಂದ ನಡೆದು ಬಂದ ಪದ್ಧತಿಯಾಗಿದ್ದು ಧಾನ್ಯಗಳನ್ನು ಮುಂದಿನ ಬಿತ್ತನೆಗಾಗಿ ಬಳಸುವುದು ವಾಡಿಕೆಯಲ್ಲಿದೆ. ಹಾಗಾಗಿ ನಮ್ಮ ಪೀಳಿಗೆಯಂತೆ ಧಾನ್ಯಗಳನ್ನು ಉತ್ತಮ ರೀತಿಯಲ್ಲಿ ಶೇಖರಿಸಿ ಡುವುದು ರೈತರ ಜವಾಬ್ದಾರಿಯೂ ಕೂಡ. ಧಾನ್ಯಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಶೇಖರಿಸಿರುವುದು. ನೈಸರ್ಗಿಕವಾಗಿ ಮನೆಯಲ್ಲಿ ಸಿಗುವ ಉಪ್ಪು ,ಬೇವಿನ ಎಲೆ ಮುಂತಾದ ವಸ್ತುಗಳನ್ನು ಬಳಸಿಕೊಂಡು ಶೇಖರಣ ಕೀಟಗಳನ್ನು ನಿರ್ವಹಣೆ ಮಾಡಬಹುದು ಹಾಗೂ ಹಲವು ರಾಸಾಯನಿಕಗಳನ್ನು ಬಳಸಿಕೊಂಡು ದಂಶಕಗಳು ಅಂದರೆ ಇಲಿ, ಹೆಗ್ಗಣ ಮುಂತಾದವನ್ನು ನಿರ್ವಹಣೆ ಮಾಡಬಹುದು ಎಂದರು.ವಿವಿಧ ಶೇಖರಣಾ ವಸ್ತುಗಳು ಹಾಗೂ ಶೇಖರಿಸುವ ಪದ್ಧತಿ ಕುರಿತು ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಾದ ಅಶೋಕ್, ದೀಕ್ಷಿತ್ , ಭರತ್ ಇವರು ರೈತರಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಬ್ಬಹಳ್ಳಿಯ ರೈತರು ಹಾಗೂ ರೈತ ಮಹಿಳೆಯರು, ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.