ಕೋಲಾರ ನಗರ ಸಾರಿಗೆಗೆ ನಷ್ಟ: ಮುಚ್ಚುವ ಆತಂಕ

| Published : Oct 21 2025, 01:00 AM IST

ಸಾರಾಂಶ

ಕೋಲಾರ ನಗರ ಸಾರಿಗೆ ಎನ್ನುವುದಕ್ಕಿಮತ ನಗರ-ಗ್ರಾಮಾಂತರ ಸಾರಿಗೆ ವ್ಯವಸ್ಥೆಯಿಂದ ಹಣ ಗಳಿಕೆಯಾಗುತ್ತಿದೆ. ಆದರೂ ನಗರ ಸಾರಿಗೆ ನಷ್ಠದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಕಿಮೀಗೆ ಸಾರಿಗೆ ಸಂಚಾರಕ್ಕೆ ೫೦ ರು.ಗಳ ವೆಚ್ಚವಾಗುತ್ತಿದೆ. ಆದಾಗ್ಯೂ, ಹೆಚ್ಚಿನ ನಷ್ಟ ಉಂಟಾದಲ್ಲಿ ನಗರ ಸಾರಿಗೆ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರ ಸಾರಿಗೆ ಪ್ರಾರಂಭಿಸಿ ಈಗ ಮೂರು ತಿಂಗಳು ಕಳೆದಿದೆ, ನಗರ ಸಾರಿಗೆ ಸೇವೆಯು ಪ್ರಾರಂಭವಾದ ದಿನದಿಂದಲೇ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರತಿ ದಿನ ನಾಲ್ಕು ಮಾರ್ಗಗಳಲ್ಲಿ ೯೦ ರಿಂದ ೧೦೦ ಪ್ರಯಾಣಗಳನ್ನು (ಟ್ರಿಪ್‌ಗಳನ್ನು) ನಡೆಸಲಾಗುತ್ತಿದೆ.ನಗರ ಬಸ್ ನಿಲ್ದಾಣದಿಂದ ಸಂಗೊಂಡನಹಳ್ಳಿ, ಹಸಾಳ ಗೇಟ್, ವಡಗೂರು ಗೇಟ್ ಮತ್ತು ಬೆಗ್ಲಿಹೊಸಹಳ್ಳಿ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾರ್ವಜನಿಕರು ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ನಗರ ಸಾರಿಗೆ ಬಸ್ ಸಂಚರಿಸುವ ವೇಳಾಪಟ್ಟಿಯನ್ನೆ ಹಾಕಿಲ್ಲ.ಸೇವೆ ಬಂದ್‌ ಆಗುವ ಆತಂಕ

ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಇದು ನಗರ ಸಾರಿಗೆ ಎನ್ನುವುದಕ್ಕಿಮತ ನಗರ-ಗ್ರಾಮಾಂತರ ಸಾರಿಗೆ ವ್ಯವಸ್ಥೆಯಿಂದ ಹಣ ಗಳಿಕೆಯಾಗುತ್ತಿದೆ. ಆದರೂ ನಗರ ಸಾರಿಗೆ ನಷ್ಠದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಕಿಮೀಗೆ ಸಾರಿಗೆ ಸಂಚಾರಕ್ಕೆ ೫೦ ರು.ಗಳ ವೆಚ್ಚವಾಗುತ್ತಿದೆ. ಆದಾಗ್ಯೂ, ಹೆಚ್ಚಿನ ನಷ್ಟ ಉಂಟಾದಲ್ಲಿ ನಗರ ಸಾರಿಗೆ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂಬ ಆತಂಕ ವ್ಯಕ್ತವಾಗಿದೆ.ಹಿಂದಿನ ವರ್ಷಗಳಲ್ಲಿಯೂ ಕೋಲಾರದಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಯಿತು, ಆದರೆ ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ಕಾರಣದಿಂದ ಬಸ್ ಸಂಚಾರ ಅನೇಕ ಬಾರಿ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಜನಸ್ಪಂದನೆ ಉತ್ತಮವಾಗಿದ್ದರೂ ನಷ್ಟದ ದಾರಿ ಹಿಡಿದಿದೆ ಎನ್ನಲಾಗಿದೆ. ನಗರ ಸಾರಿಗೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರ- ಗ್ರಾಮಾಂತರ ಸಾರಿಗೆ

ನಗರದಲ್ಲಿ ನಗರ ಸಾರಿಗೆ ವ್ಯವಸ್ಥೆ ಆರಂಭಿಸುವಂತೆ ಹೋರಾಟ ನಡೆಸಿದ ಪರಿಣಾಮವಾಗಿ ನಗರ ಸಾರಿಗೆ ಆರಂಭಿಸಲಾಯಿತು. ಆದರೆ ಸಾರಿಗೆ ಗ್ರಾಮಾಂತರ ಜತೆ ಸೇರಿಸಲಾಗಿದೆ.ಇಲಾಖೆಯು ನಗರ ಸಾರಿಗೆಯನ್ನು ಪ್ರತ್ಯೇಕಗೊಳಿಸದೆ ಗ್ರಾಮಾಂತರ ಸಾರಿಗೆ ಜತೆ ಒಗ್ಗೂಡಿಸಿದೆ. ನಗರದ ವಿಸ್ತೀರ್ಣ ಇರುವುದೇ ೨ ಕಿ.ಮೀ. ಈ ಕಾರಣದಿಂದಾಗಿ ನಗರ ಸಾರಿಗೆಯನ್ನು ಗ್ರಾಮಾಂತರ ಸಾರಿಗೆ ಜತೆ ಸೇರಿಸಲಾಗಿದೆ.

ವರ್ತುಲ ರಸ್ತೆ ಸಂಚಾರ ಆರಂಭಿಸಲಿ

ಆದರೆ ನಗರದಲ್ಲಿ ಆಟೋಗಳಲ್ಲಿ ಕನಿಷ್ಠ ೪೦ ರು.ದರ ನಿಗದಿ ಮಾಡಲಾಗಿದೆ. ಮೀಟರ್ ಸಹ ಇಲ್ಲ. ಅದರೆ ಸಾರಿಗೆ ಸಂಚಾರದಲ್ಲಿ ಪ್ರತಿ ಕಿ.ಮೀಗೆ ೬ ರೂ. ತಗಲುತ್ತದೆ. ನಮಗೆ ನಗರದ ೩೫ ವಾರ್ಡುಗಳಿಗೆ ಸಾರಿಗೆ ಸಂಚಾರ ವ್ಯವಸ್ಥೆ ಇರಬೇಕು, ನಗರದ ಸುತ್ತ ವರ್ತುಲ ರಸ್ತೆ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಮಾರ್ಗಗಳಲ್ಲಿ ಬಸ್ ಸಂಚಾರ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.