ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಮೋಘ ಗೆಲುವು ದಾಖಲಿಸಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀವ್ರ ಮುಖಭಂಗ ಅನುಭವಿಸಿವೆ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಮೋಘ ಗೆಲುವು ದಾಖಲಿಸಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀವ್ರ ಮುಖಭಂಗ ಅನುಭವಿಸಿವೆ.

ಒಟ್ಟು 19 ವಾರ್ಡುಗಳಲ್ಲಿ ಬಿಜೆಪಿ 14, ಕಾಂಗ್ರೆಸ್‌ 3, ಜೆಡಿಎಸ್‌ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದೆ.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಎಲ್ಲ ಸ್ಥಾನಗಳಿಗೆ ಕಳೆದ ಭಾನುವಾರ ಶೇ.81ರಷ್ಟು ಮತದಾನ ನಡೆದಿತ್ತು. ಫಲಿತಾಂಶದತ್ತ ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಜಿದ್ದಾಜಿದ್ದಿನ ಪೈಪೋಟಿ ಎಂದೇ ನಿರೀಕ್ಷಿಸಲಾಗಿದ್ದ ಹಣಾಹಣೆಯಲ್ಲಿ ಹಾಲಿ ಶಾಸಕರ ಚುನಾವಣಾ ತಂತ್ರ ಫಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನಪರ ಆಡಳಿತಕ್ಕೆ ದೊರೆತ ವಿಜಯ: ಶಾಸಕ ಧೀರಜ್‌

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಧೀರಜ್‌ ಮುನಿರಾಜ್‌, ಇದು ಜನಪರ ಆಡಳಿತಕ್ಕೆ ಸಂದ ಜಯ. ದ್ವೇಷ ಮತ್ತು ಸುಳ್ಳಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಬಾಶೆಟ್ಟಿಹಳ್ಳಿಯ ಮತದಾರರು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿರುವುದು ಈ ಫಲಿತಾಂಶದಿಂದ ವ್ಯಕ್ತವಾಗಿದೆ. ಪೊಳ್ಳು ಭರವಸೆಗಳ ಬಗ್ಗೆ ಜನರು ತಲೆಕೆಡಿಸಿಕೊಂಡಿಲ್ಲ. ಅವರು ಭವಿಷ್ಯದ ಹಿತದೃಷ್ಟಿಯಿಂದ ಉತ್ತಮರನ್ನು ಆಯ್ದುಕೊಂಡಿದ್ದಾರೆ. ಚುನಾವಣೆ ವೇಳೆ ತಾವು ಮನೆಮನೆಗೆ ತೆರಳಿ ಮತ ಭಿಕ್ಷೆ ಕೇಳಿದ್ದು, ಜನತೆ ವಿಶ್ವಾಸವಿಟ್ಟು ಬೆಂಬಲ ನೀಡಿದ್ದಾರೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ನಿಷ್ಠಾವಂತ ಕಾರ್ಯಕರ್ತರ ಗೆಲುವು ಇದಾಗಿದೆ ಎಂದರು.

ಬಿಜೆಪಿ ವಿಜಯೋತ್ಸವ:

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಶಾಸಕ ಧೀರಜ್‌ ಮುನಿರಾಜ್ ಅವರೊಂದಿಗೆ ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಬಾಕ್ಸ್‌................

ವಾರ್ಡುವಾರು ಫಲಿತಾಂಶ

1ನೇ ವಾರ್ಡ್: ಶ್ವೇತ ಮುರಳೀಧರ್- ಬಿಜೆಪಿ(391), ಮಾಲಾಶ್ರೀ.ವಿ- ಜೆಡಿಎಸ್(240).

2ನೇ ವಾರ್ಡ್: ಎಸ್‌.ಪ್ರೇಮ್‌ಕುಮಾರ್- ಬಿಜೆಪಿ(391), ರಾಮಾಂಜಿನಪ್ಪ- ಕಾಂಗ್ರೆಸ್‌(315).

3ನೇ ವಾರ್ಡ್: ವೇಣುಗೋಪಾಲ- ಬಿಜೆಪಿ(166), ಮನು.ಆರ್.ವಿ- ಕಾಂಗ್ರೆಸ್(139).

4ನೇ ವಾರ್ಡ್: ಶ್ರೀನಿವಾಸರೆಡ್ಡಿ- ಪಕ್ಷೇತರ(218), ಎನ್.ರಾಮಾಂಜಿನಪ್ಪ(165).

5ನೇ ವಾರ್ಡ್: ಕೆ.ರಾಮಮೂರ್ತಿ- ಬಿಜೆಪಿ(140), ಸಿ.ಮುನೀಂದ್ರ- ಪಕ್ಷೇತರ(106).

6ನೇ ವಾರ್ಡ್: ಭಾಗ್ಯಮ್ಮ- ಬಿಜೆಪಿ(290), ನಯನ- ಪಕ್ಷೇತರ(264).

7ನೇ ವಾರ್ಡ್: ಆರ್.ಮಧುಕುಮಾರ್- ಬಿಜೆಪಿ(220), ಎ.ಒ.ಅಂಬರೀಶ್- ಪಕ್ಷೇತರ(193).

8ನೇ ವಾರ್ಡ್: ಮುನಿಶಂಕರ್- ಬಿಜೆಪಿ(284), ಬಿ.ಎನ್.ನರಸಿಂಹಮೂರ್ತಿ- ಕಾಂಗ್ರೆಸ್(89).

9ನೇ ವಾರ್ಡ್: ಎನ್.ಚಂದನ-ಜೆಡಿಎಸ್(254), ವೈ.ಆರ್.ಮೇಘನ-ಕಾಂಗ್ರೆಸ್(177).

10ನೇ ವಾರ್ಡ್: ಎಂ.ಅರುಣ್‌ಕುಮಾರ್‌-ಕಾಂಗ್ರೆಸ್(374), ಆರ್.ಅನಿಲ್‌ಕುಮಾರ್-ಬಿಜೆಪಿ(167).

11ನೇ ವಾರ್ಡ್: ಬಿ.ಕೃಷ್ಣಪ್ಪ- ಬಿಜೆಪಿ(295), ಬಿ.ಕೃಷ್ಣಮೂರ್ತಿ- ಕಾಂಗ್ರೆಸ್(232).

12ನೇ ವಾರ್ಡ್: ಸಿ.ನಾರಾಯಣಸ್ವಾಮಿ- ಬಿಜೆಪಿ(258), ಬಸವರಾಜು- ಕಾಂಗ್ರೆಸ್(113).

13ನೇ ವಾರ್ಡ್: ಲೀಲಾ ಮಹೇಶ್- ಬಿಜೆಪಿ(403), ರೇಣುಕಮ್ಮ ರಾಜಣ್ಣ- ಕಾಂಗ್ರೆಸ್(148).

14ನೇ ವಾರ್ಡ್: ಎಸ್.ಪ್ರೇಮ್‌ಕುಮಾರ್- ಬಿಜೆಪಿ(158), ಬಿ.ಕೆ.ಸೊಣ್ಣೇಗೌಡ- ಕಾಂಗ್ರೆಸ್(152).

15ನೇ ವಾರ್ಡ್: ಅಂಬುಜಾಕ್ಷಿ- ಬಿಜೆಪಿ(253), ಜಗದಾಂಬ- ಕಾಂಗ್ರೆಸ್(150).

16ನೇ ವಾರ್ಡ್: ಎಲ್.ಪುಷ್ಪ- ಕಾಂಗ್ರೆಸ್(382), ಮಂಜುಳಾ ಮುನಿಯಪ್ಪ- ಬಿಜೆಪಿ(255).

17ನೇ ವಾರ್ಡ್: ಕೆ.ನೇತ್ರಾ ಮಧುಕುಮಾರ್- ಬಿಜೆಪಿ(170), ವೀಣಾ ಶಿವಕುಮಾರ್- ಜೆಡಿಎಸ್(114).

18ನೇ ವಾರ್ಡ್: ರಾಧಾಮಣಿ- ಬಿಜೆಪಿ(311), ಎನ್.ಜ್ಯೋತಿ- ಕಾಂಗ್ರೆಸ್(189).

19ನೇ ವಾರ್ಡ್: ದಾಕ್ಷಾಯಿಣಿ- ಕಾಂಗ್ರೆಸ್(293), ಪಿ.ಆರ್.ಕಲ್ಪನ(261).

24ಕೆಡಿಬಿಪಿ1-

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಮೋಘ ಗೆಲುವು ದಾಖಲಿಸಿದ ಬಳಿಕ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರ ವಿಜಯೋತ್ಸವ.