ಸಾರಾಂಶ
ಸುಹಾಸಂ ವತಿಯಿಂದ ಕಿದಿಯೂರು ಹೋಟೆಲಿನ ಅನಂತಶಯನ ಹಾಲ್‍ನಲ್ಲಿ ಶನಿವಾರ ದಿನೇಶ್ ಉಪ್ಪೂರ ಅವರ ಪ್ರವಾಸ ಕಥನ (ಪ್ರವಾಸಾನುಭವಗಳ ಪುಸ್ತಕ) ಬಿಡುಗಡೆ ಕಾರ್ಯಕ್ರಮ ನಡೆಯಿತು. ಹೊನ್ನಾವರದ ನಾಗರಿಕ ಪತ್ರಿಕೆ ಸಂಪಾದಕ ಡಾ. ಕೃಷ್ಣಮೂರ್ತಿ ಹೆಬ್ಬಾರ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉತ್ತಮ ಪುಸ್ತಕಗಳು ಮನುಷ್ಯನಿಗೆ ಪ್ರೀತಿಯ ಜೊತೆಗೆ ಚೆನ್ನಾಗಿ ಬದುಕುವುದನ್ನು ಕಲಿಸುತ್ತವೆ ಎಂದು ಹೊನ್ನಾವರದ ನಾಗರಿಕ ಪತ್ರಿಕೆ ಸಂಪಾದಕ ಡಾ. ಕೃಷ್ಣಮೂರ್ತಿ ಹೆಬ್ಬಾರ್ ಹೇಳಿದ್ದಾರೆ.ಅವರು ಸುಹಾಸಂ ವತಿಯಿಂದ ಕಿದಿಯೂರು ಹೋಟೆಲಿನ ಅನಂತಶಯನ ಹಾಲ್‍ನಲ್ಲಿ ಶನಿವಾರ ದಿನೇಶ್ ಉಪ್ಪೂರ ಅವರ ಪ್ರವಾಸ ಕಥನ (ಪ್ರವಾಸಾನುಭವಗಳ ಪುಸ್ತಕ) ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪುಸ್ತಕ ಓದುವ ಸಂಸ್ಕೃತಿ ಹವ್ಯಾಸ, ಇಂದು ಮೊಬೈಲ್, ಆನ್‍ಲೈನಿಗೆ ವರ್ಗವಾಗಿದೆ. ಉತ್ತಮ ಓದಿನಿಂದ ಮನಸ್ಸು ಹಗುರ, ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.ನಿವೃತ್ತ ಉಪನ್ಯಾಸಕ ಡಾ. ಶ್ರೀಕಾಂತ ರಾವ್ ಸಿದ್ಧಾಪುರ ಕೃತಿ ಬಿಡುಗಡೆ ಮಾಡಿ, ನಿವೃತ್ತಿ ಬಳಿಕ ಖಿನ್ನತೆಗೆ ಜಾರದಂತೆ ಪ್ರವಾಸ, ಓದು, ಬರವಣಿಗೆ, ಸಂಗೀತದಲ್ಲಿ ತೊಡಗಿಸಬೇಕು. ಮನಸ್ಸಿನ ಆನಂದಕ್ಕೆ ಹಣವೊಂದೇ ಸಾಧನವಲ್ಲ. ವ್ಯಕ್ತಿ ವ್ಯಕ್ತಿಯ ನಡುವೆ ಮಾತುಕತೆ, ಪುಸ್ತಕ ಓದಿನ ಆಸಕ್ತಿ ಕಡಿಮೆಯಾದರೂ ಬರೆವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಪ್ರಾರ್ಥಿಸಿದರು. ಎಚ್. ಗೋಪಾಲ ಭಟ್ಟ(ಕು. ಗೋ.) ಸ್ವಾಗತಿಸಿದರು. ಸಂಧ್ಯಾ ಶೆಣೈ ನಿರೂಪಿಸಿದರು.