ಪುರಸಭೆ ವತಿಯಿಂದ ವಾರದ ಸಂತೆ, ಹಸಿ ತರಕಾರಿ, ಖಾಸಗಿ ಬಸ್ ನಿಲ್ದಾಣ ಕರ ವಸೂಲಿ ಕುರಿತಂತೆ ಪಟ್ಟಣದ ಕುಡಿಯುವ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ಶನಿವಾರ ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ ಸಮ್ಮುಖದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆದಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮೊತ್ತಕ್ಕೆ ಕೆಲವೊಂದು ಬಾಬುಗಳು ಹರಾಜು ಆಗಿವೆ.

- ಕಡಿಮೆ ಬಾಬುಗಳಿಗೆ ಮರುಹರಾಜಿಗೆ ಚಿಂತನೆ: ಮುಖ್ಯಾಧಿಕಾರಿ

- - -

- ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಉಪಸ್ಥಿತಿ

- ಆಡಳಿತಾಧಿಕಾರಿಗಳ ನೇಮಕ ಎಫೆಕ್ಟ್‌: ಪುರಸಭೆಗೆ ನಿರೀಕ್ಷಿತ ಆದಾಯ ಕಡಿಮೆ ಆತಂಕ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪುರಸಭೆ ವತಿಯಿಂದ ವಾರದ ಸಂತೆ, ಹಸಿ ತರಕಾರಿ, ಖಾಸಗಿ ಬಸ್ ನಿಲ್ದಾಣ ಕರ ವಸೂಲಿ ಕುರಿತಂತೆ ಪಟ್ಟಣದ ಕುಡಿಯುವ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ಶನಿವಾರ ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ ಸಮ್ಮುಖದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆದಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮೊತ್ತಕ್ಕೆ ಕೆಲವೊಂದು ಬಾಬುಗಳು ಹರಾಜು ಆಗಿವೆ.

ಪುರಸಭೆ ನಡೆಸಿದ ಹರಾಜುಗಳಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಬಿಡ್ ಆಗಿವೆ. ಇದರಿಂದ ಪುರಸಭೆಗೆ ನಿರೀಕ್ಷಿತ ಆದಾಯ ಕಡಿಮೆಯಾಗಲಿದೆ. ಕಡಿಮೆ ಬಿಡ್ ಆಗಿರುವ ಬಾಬುಗಳಿಗೆ ಪುನಃ ಬಿಡ್ ಕರೆಯುವ ಬಗ್ಗೆ ಪುರಸಭೆ ಆಡಳಿತಾಧಿಕಾರಿ ಹಾಗೂ ತಾವು ಸೇರಿ ಸೂಕ್ತವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಯಾವ್ಯಾವ ಬಿಡ್‌, ಯಾರ್ಯಾರಿಗೆ?:

ಹರಾಜು ಪ್ರಕ್ರಿಯೆಯಲ್ಲಿ ಮೊದಲು ವಾರದ ಸಂತೆ ಬಗ್ಗೆ ಹರಾಜು ಕರೆಯಲಾಯಿತು. ಕಳೆದ ವರ್ಷ ₹12.61 ಲಕ್ಷಕ್ಕೆ ಬಿಡ್ ಆಗಿದ್ದರೆ, ಈ ಬಾರಿ ₹9.10 ಲಕ್ಷಕ್ಕೆ ಅಂತಿಮ ಬಿಡ್ ಆಗಿದೆ. ಕುಮಾರ್ ಎಂಬವರಿಗೆ ವಾರದ ಸಂತೆ ಬಿಡ್ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಸುಮಾರು ₹3.51 ಲಕ್ಷದಷ್ಟು ಕಡಿಮೆ ಬಿಡ್ ನಡೆದಿರುವುದು ವಿಶೇಷ.

ಖಾಸಗಿ ಬಸ್ ನಿಲ್ದಾಣದ ಶುಲ್ಕ ವಸೂಲಿ ಬಾಬ್ತು ಹರಾಜು ಕಳೆದ ವರ್ಷ ₹4.01 ಲಕ್ಷಕ್ಕೆ ಬಿಡ್ ಆಗಿತ್ತು. ಈ ಬಾರಿ ₹4 ಲಕ್ಷಕ್ಕೆ ಸಚೀತ ಎನ್ನುವವರಿಗೆ ಅಂತಿಮ ಬಿಡ್ ಆಗಿದೆ. ಕಳೆದ ವರ್ಷಕ್ಕಿಂತ ಕೇವಲ ₹1 ಸಾವಿರ ಮಾತ್ರ ಕಡಿಮೆ ಬಿಡ್ ಆಗಿದೆ.

ಹಸಿ ತರಕಾರಿ ಮಾರಾಟ ಶುಲ್ಕದ ಬಾಬ್ತು ಹರಾಜು ನಡೆದಿದ್ದು, ಕಳೆದ ವರ್ಷ ₹16.73 ಲಕ್ಷಕ್ಕೆ ಆಗಿದ್ದ ಹರಾಜು ಈ ಬಾರಿ ₹12.80 ಲಕ್ಷಕ್ಕೆಅಂತಿವಾಗಿದೆ. ಗಿರೀಶ್ ಎನ್ನುವವರಿಗೆ ಅಂತಿಮ ಬಿಡ್ ಆಗಿದ್ದು, ಕಳೆದ ವರ್ಷಕ್ಕಿಂತ ₹3.93 ಲಕ್ಷ ಕಡಿಮೆಗೆ ಬಿಡ್ ನಡೆದಿದೆ.

ಇನ್ನು ಮಾಂಸ ಮಾರಾಟ ಮಳಿಗೆ ನಂ.1 ಕಳೆದ ವರ್ಷ ₹3.07 ಲಕ್ಷಕ್ಕೆ ಬಿಡ್ ಆಗಿದ್ದರೆ, ಈ ಬಾರಿ ₹3.70 ಲಕ್ಷಕ್ಕೆ ಬಿಡ್ ನಡೆದಿದೆ. ಇದೊಂದು ಮಾತ್ರ ಸುಮಾರು ₹63 ಸಾವಿರ ಹೆಚ್ಚಿಗೆ ಬಿಡ್ ಆಗಿದ್ದು ಸುರೇಶ್ ಅವರು ಅಂತಿಮ ಬಿಡ್ ದಾರರಾಗಿದ್ದಾರೆ.

ಮಾಂಸ ಮಾರಾಟ ಮಳಿಗೆ ಸಂಖ್ಯೆ 2 ಹರಾಜು ಪ್ರಕ್ರಿಯೆಯು ಕಳೆದ ವರ್ಷ ₹5.01 ಲಕ್ಷಕ್ಕೆ ಬಿಡ್ ಆಗಿತ್ತು. ಈ ಮಳಿಗೆ ಈ ಬಾರಿ ₹3 ಲಕ್ಷಕ್ಕೆ ಅಂತಿಮ ಬಿಡ್ ಆಗಿದ್ದು, ವಸಂತ್ ಬಿಡ್‌ ಪಡೆದವರಾಗಿದ್ದಾರೆ. ಇದು ಕೂಡ ಕಳೆದ ಬಾರಿಗಿಂತ ₹2.01 ಲಕ್ಷ ಕಡಿಮೆ ದರಕ್ಕೆ ಬಿಡ್ ಆಗಿದೆ.

- - -

-23ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದ ಕುಡಿಯುವ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ವಾರದ ಸಂತೆ ಸೇರಿದಂತೆ ವಿವಿಧ ಬಾಬುಗಳ ಬಗ್ಗೆ ಹರಾಜು ಪ್ರಕ್ರಿಯೆ ನಡೆಯಿತು. ಪುರಸಭೆ ಅಡಳಿತಾಧಿಕಾರಿಯೂ ಆಗಿರುವ ಎಸಿ ಎಚ್.ಬಿ.ಚನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಎಂಜಿನಿಯರ್ ದೇವರಾಜ್, ಸಿಬ್ಬಂದಿ, ಬಿಡ್‌ದಾರರು ಇದ್ದರು.