ಸಾರಾಂಶ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆಯ ಎಂ.ಸಿ.ರಂಗಸ್ವಾಮಿ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 1955ರಲ್ಲಿ ಎಂ.ಜೆ.ತಿಮ್ಮೇಗೌಡ ಹಾಗೂ ಲಕ್ಷ್ಮಮ್ಮ ದಂಪತಿ ಮಗನಾಗಿ ಜನಿಸಿದ ಇವರದ್ದು ಮೂಲತ: ಕೃಷಿಕ ಕುಟುಂಬ. ಆ ಹಿನ್ನೆಲೆಯಲ್ಲೇ ಪ್ರಗತಿಪರ ಕೃಷಿಯನ್ನು ಕೈಗೊಂಡು ಯಶಸ್ಸು ಕಂಡವರು. ಬಯಲು ಸೀಮೆಯಲ್ಲಿ ಅದ್ಭುತವಾಗಿ ಮೆಣಸು ಮತ್ತು ಏಲಕ್ಕಿ ಬೆಳೆ ಬೆಳೆದು ಸೈ ಎನಿಸಿಕೊಂಡವರು. ಹೈನುಗಾರಿಕೆಯಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಸ್ರೇಲ್ ಮಾದರಿ ಹೈನುಗಾರಿಕೆ ಅಳವಡಿಸಿಕೊಂಡಿರುವ ಜಿಲ್ಲೆಯ ಮೊದಲ ಕೃಷಿಕ ಇವರು. 10 ಎಕರೆಯಲ್ಲಿ ಶೆಡ್ ನಿರ್ಮಿಸಿ 1000ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದಾರೆ. ಪ್ರತಿನಿತ್ಯ 8 ಸಾವಿರ ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ದೊಡ್ಡಮಗ್ಗೆಯಲ್ಲಿರುವ ಇವರ ತೋಟದಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. ಅಡಿಕೆ ಜತೆಗೆ ಸಾಂಬಾರು ಬೆಳೆಗಳನ್ನು ಬೆಳೆದಿದ್ದಾರೆ.ಅರಣ್ಯ ಕೃಷಿಯನ್ನೂ ಅಳವಡಿಸಿಕೊಂಡಿರುವ ಇವರು 150 ಎಕರೆಯಲ್ಲಿ 1 ಲಕ್ಷ ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ. ಹೈನುಗಾರಿಕೆ ಜತೆಗೆ ಕುರಿ ಸಾಕಣೆ, ಕೋಳಿ, ಮೀನು, ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))