ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮಠ-ಮಾನ್ಯಗಳ ದಾಸೋಹ, ಶಿಕ್ಷಣ ಪರಂಪರೆಯನ್ನು ಗ್ರಾಮ ವಿದ್ಯೋದಯ ಸಂಘ ಅಳವಡಿಸಿಕೊಂಡು ಮುನ್ನಡೆಯುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಸುತ್ತೂರು ವೀರ ಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಎಂ.ಸಿ. ಶಿವಾನಂದ ಶರ್ಮ ಸ್ಮಾರಕ ಪ್ರವೇಶ ದ್ವಾರ, ದಾಸೋಹ ಭವನ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಬಯಲು ರಂಗಮಂದಿರ ಹಾಗೂ ನಿಸ್ವಾರ್ಥಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅವರು, ತಮ್ಮ ಜೀವಿತಾವಧಿಯ ಸುಮಾರು 36 ವರ್ಷಗಳನ್ನು ತ್ಯಾಗ, ಸೇವೆಗಾಗಿಯೇ ನೀಡಿದ್ದಾರೆ. ಸಂಸ್ಥೆಯ ಸ್ಥಾಪಕ ಶಿವಾನಂದ ಶರ್ಮ ಅವರು ಕಂಡಿದ್ದ ಕನಸನ್ನು ನನಸು ಮಾಡುವತ್ತ ಮಹದೇವಸ್ವಾಮಿ ಅವರು ಸಾಗಿದ್ದಾರೆ, ಅವರ ಕನಸು ನನಸಾಗಲಿ, ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.ಸಂಸ್ಥೆಯ ಸಂಸ್ಥಾಪಕ ಎಂ.ಸಿ. ಶಿವಾನಂದ ಶರ್ಮ ಅವರು 1940 ರಲ್ಲಿ ಬೆಂಗಳೂರಿನಲ್ಲಿ 1946 ರಲ್ಲಿ ಟಿ. ನರಸೀಪುರದಲ್ಲಿ ಗ್ರಾಮ ವಿದ್ಯೋದಯ ಸಂಘ ಸ್ಥಾಪನೆ ಮಾಡಿದ್ದು, ಅವರ ಉದಾರ ಚಿಂತನೆಯ ಫಲವಾಗಿದೆ. ವಿದ್ಯಾರ್ಥಿಗಳ ಹೆಚ್ಚಾದಾಗ 1951ರಲ್ಲಿ ವಿಶಾಲವಾದ ಕಟ್ಟಡ ಸ್ಥಾಪಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕಲ್ಪಿಸಿ ಕೊಟ್ಟಿದ್ದ ಶರ್ಮರ ಕನಸನ್ನು ಸಾಕಾರಗೊಳಿಸುವಲ್ಲಿ ಟಿ.ಪಿ.ಬೋರಯ್ಯ ಸಹ ಒಬ್ಬರಾಗಿದ್ದಾರೆ. ನಂತರದಲ್ಲಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಕೆ.ಪಿ. ಮಹದೇವಸ್ವಾಮಿ ಅವರು 36 ವರ್ಷಗಳ ಕಾಲ ಅವಿರತವಾದ ಶ್ರಮದಿಂದ ಸಂಸ್ಥೆಯನ್ನು ಶ್ರೇಯಸ್ಸಿನಪಥದತ್ತ ಮುನ್ನಡೆಸಿಕೊಂಡು ಬಂದಿದ್ದಾರೆ. ಸಂಸ್ಥೆಯ ಅಭಿವೃದ್ಧಿಗಾಗಿ ಕೆಲವೊಮ್ಮೆ ಅವರು ಕಠಿಣವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಸ್ಥೆಗೆ ಅನುಕೂಲವಾಗುವ ಕೆಲಸ ಮಾಡುವಲ್ಲಿ ಅವರು ಅದ್ಯಾವುದೇ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ವಿದ್ಯೋದಯ ಶಿಕ್ಷಣ ಸಂಸ್ಥೆ ಇಂದು ಆರ್ಥಿಕವಾಗಿ ಮುನ್ನಡೆದಿದೆ ಎಂದರೆ ಅದಕ್ಕೆ ಮಹದೇವಸ್ವಾಮಿ ಅವರ ದಿಟ್ಟವಾದ ನಿರ್ಧಾರ ಕಾರಣವಾಗಿದೆ. ಸಂಸ್ಥೆಗೆ ಬಂದ ಯಾವುದೇ ಸಂಪತ್ತನ್ನು ಮಹದೇವಸ್ವಾಮಿಯವರು ತಮ್ಮ ಜೇಬಿಗೆ ಇಳಿಸಿಕೊಂಡಿಲ್ಲ, ಆ ಕಾರಣಕ್ಕಾಗಿಯೇ ಇಂದು ಅವರಿಗೆ ಅಭಿನಂದನೆ ಸಲ್ಲಿಸಲು ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ ಎಂದರು.
ಗೌರವ ಕಾರ್ಯದರ್ಶಿಯಾದ ಮಹದೇವಸ್ವಾಮಿ ಅವರನ್ನು ಕೆಲವರು ಕಟುಕತನ ಹಾಗೂ ಸಿಟ್ಟಿನಮನುಷ್ಯ ಎನ್ಬುತ್ತಾರೆ, ಅದಕ್ಕೆ ಅಪವಾದ ಎನ್ನುವಂತೆ ಅವರ ಕಟುಕತನ ಬಿಗಿಯಾದ ಆಡಳಿತವೇ ಜನರ ಪ್ರೀತಿ ಗಳಿಸಿದೆ ಎಂಬುದಕ್ಕೆ ಇಂದು ಇಲ್ಲಿ ನೆರೆದಿರುವ ಅಭಿಮಾನಿ ಬಳಗವೇ ಸಾಕ್ಷಿಯಾಗಿದೆ, ಯಾರು ಒಳ್ಳೆಯ ಕೆಲಸ ಮಾಡುತ್ತಾರೆ ಅವರನ್ನು ಜನರು ಅವರನ್ನು ಗುರುತಿಸುತ್ತಾರೆ ಎಂಬುದಕ್ಕೆ ಇಂದಿನ ಅಭಿಮಾನದ ಅಭಿನಂದನೆಯ ಕಾರ್ಯಕ್ರಮವೇ ಸಾಕ್ಷಿ ಎಂದರು.ಮುಂದುವರೆದು ಮಾತನಾಡಿದ ಶ್ರೀಗಳು ಶಿವಾನಂದ ಶರ್ಮರು ಸಂಸ್ಥೆ ಕಟ್ಟಿದಾಗ ಸಂಸ್ಥೆಗೆ ತಮ್ಮ ಮನೆತನದ ಅಥವಾ ತಮ್ಮ ಊರಿನ ಹೆಸರಿಡಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಬೆಂಗಳೂರು ಸಂಸ್ಥೆಗೆ ರಾಷ್ಟ್ರೀಯ ವಿದ್ಯಾಲಯ ಹಾಗೂ ನರಸೀಪುರ ಸಂಸ್ಥೆಗೆ ಗ್ರಾಮ ವಿದ್ಯೋದಯ ಸಂಘ ಎಂಬ ಹೆಸರಿಟ್ಟರು. ಶರ್ಮರಿಗೆ ರಾಷ್ಟ್ರ ಮುಖ್ಯವಾಗಿತ್ತೇ ಹೊರತು, ಅವರ ವೈಯಕ್ತಿಕ ಹೆಸರು ಮುಖ್ಯವಾಗಿರಲಿಲ್ಲ, ಶರ್ಮರು ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಇಂತಹ ಸಂಸ್ಥೆಯನ್ನು ಕೊಟ್ಟಿದ್ದರಿಂದ ಇಂದಿಗೂ ಕೂಡ ಅವರು ಸ್ಮರಣೀಯರಾಗಿದ್ದಾರೆ ಎಂದರು.
ಕೆ.ಪಿ. ಮಹದೇವಸ್ವಾಮಿ ಅವರು ಕೇವಲ ಶಿಕ್ಷಣಕ್ಕೆ ಮಾತ್ರವೇ ಪ್ರಾಮುಖ್ಯತೆ ನೀಡುತ್ತಿಲ್ಲ, ಸಂಸ್ಥೆಗೆ ಸಂಪತ್ತು , ಆದಾಯದಲ್ಲಿ ಮಠ ಮಾನ್ಯಗಳು, ದೇವಸ್ಥಾನಗಳು, ದಾಸೋಹಕ್ಕೆ ಲಕ್ಷಾಂತರ ಹಣ ನೀಡುವ ಮೂಲಕ ಉದಾರವಾದ ಕಾಣಿಕೆ ನೀಡುತ್ತಿದ್ದು, ಭಗವಂತ ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು ಮತ್ತಷ್ಟು ಸಮಾಜ ಮುಖಿ ಕೆಲಸ ಮಾಡುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ಆರ್.ವಿ) ಸ್ಥಾಪಿಸಿದ ಶರ್ಮ ಅವರು, ಹುಟ್ಟೂರಿನ ಋಣ ತೀರಿಸಲು ನರಸೀಪುರದಲ್ಲಿ ಗ್ರಾಮ ವಿದ್ಯೋದಯ ಸಂಘ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರು. ಅಂದೇ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಜಾರಿಗೆ ತಂದರು. ಅವರು ದೂರ ದೃಷ್ಟಿ ಇಟ್ಟುಕೊಂಡು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಕೆ.ಪಿ. ಮಹದೇವಸ್ವಾಮಿ ಅವರು ಶಿವಾನಂದ ಶರ್ಮ ಅವರ ಹುಟ್ಟೂರಾದ ಮಾಡ್ರಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಅಲ್ಲಿನ ಮಕ್ಕಳಿಗೆ ಉಚಿತವಾದ ಗುಣ ಮಟ್ಟದ ಶಿಕ್ಷಣ ನೀಡುವ ಯೋಜನೆಗೆ ಜೊತೆಗೆ ಹನೂರಿನಲ್ಲಿ ಸಿಬಿಎಸ್ ಶಾಲೆ ತೆರೆಯಲು ಚಿಂತನೆ ನಡೆಸಿದ್ದು, ಅವರ ಯೋಜನೆ ತ್ವರಿತವಾಗಿ ಕಾರ್ಯ ರೂಪಕ್ಕೆ ಬರುವಂತಾಗಲಿ, ಗ್ರಾಮೀಣ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದರು.
ಅಂದು ಶಿವಾನಂದ ಶರ್ಮ 1946ರಲ್ಲಿ ಕಟ್ಟಿದ ಸಂಸ್ಥೆಗೆ ಒಂದಿನಿತೂ ಚ್ಯುತಿ ಬಾರದಂತೆ ಮಹದೇವಸ್ವಾಮಿ ಅವರು ಆಡಳಿತ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ, ಇವರ ಸಮಾಜ ಸೇವೆ, ಶಿಕ್ಷಣ ಕ್ಷೇತ್ರದ ಸೇವೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಅವರು ಆಶಿಸಿದರು.ಸಮಾಜಕ್ಕೆ ಉತ್ತಮವಾದ ಕೊಡುಗೆ
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿದ್ಯೋದಯ ಶಿಕ್ಷಣ ಸಂಸ್ಥೆಯು ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಗ್ರಾಮ ವಿದ್ಯೋದಯ ಸಂಘ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿದ್ದ ಸಂಸ್ಥೆ, ಸ್ವಾತಂತ್ರ್ಯ ಬಂದಾಗ ನಮ್ಮ ದೇಶ ದುಸ್ತಿತಿಯಲ್ಲಿತ್ತು. ಸಾಕ್ಷರತೆ ಪ್ರಮಾಣ ಕೇವಲ ಶೇ. 12ರಷ್ಟಿತ್ತು. ಆ ವೇಳೆ ದಾನಿಗಳ ಕೊರತೆ ಇತ್ತು. ಬಡತನ, ಹಸಿವಿವಿಂದ ಬಲಳುವ ಪರಿಸ್ಥಿತಿಯಲ್ಲಿದ್ದೆವು. ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಶಿವಾನಂದ ಶರ್ಮರು ವಿದ್ಯಾಸಂಸ್ಥೆ ಕಟ್ಟಿ ಸಾವಿರಾರು ಬಡ ಮಕ್ಕಳ ಶಿಕ್ಷಣದ ಬದುಕಿಗೆ ದಾರಿ ದೀಪವಾದರು. ಇವತ್ತು ದೇಶ ಸುಶಿಕ್ಷಿತ ವಾಗಬೇಕಾದರೆ ವಿದ್ಯೋದಯ ಸಂಸ್ಥೆಯಂತಹ ಸಾವಿರಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕು, ಆದರೆ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ, ಇಲ್ಲಿನ ಗೌರವ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿಯವರು ಶಿಕ್ಷಣ ಸಂಸ್ಥೆ ಯನ್ನು ಚೆನ್ನಾಗಿ ಕಟ್ಟಿ ಬೆಳೆಸಿದ್ದಾರೆ. ಅವರ ಶ್ರಮ ಶ್ಲಾಘನೆಗೆ ಪಾತ್ರವಾಗಿದ್ದು, ಯಾವುದೇ ರಾಜಕಾರಣಿಗಳು ಇಂತಹ ಸಂಘ ಸಂಸ್ಥೆಗಳಿಗೆ ಸಹಕಾರ ನೀಡುವ ಕೆಲಸ ಮಾಡಬೇಕು ಎಂದರು.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಮಠಗಳ ಮಠಾಧೀಶರು ಕೆ.ಪಿ. ಮಹದೇವಸ್ವಾಮಿ ಹಾಗೂ ಅವರ ಪತ್ನಿ ಸುಜಾತಾ ಅವರನ್ನು ಅಭಿನಂದಿಸಿದರು.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಹೊಸದುರ್ಗ ಶ್ರೀ ಭಗೀರಥ ಮಹಾಸಂಸ್ಥಾನ ಮಠದ ಡಾ. ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ, ಕೂಡಲಸಂಗಮ-ಬೆಂಗಳೂರು ಬಸವಧರ್ಮ ಪೀಠದ ಶ್ರೀಮಾತೆ ಗಂಗಾದೇವಿ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ ಮಾತನಾಡಿದರು.--ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಜಗದ್ಗುರುಗಳು, ಹರಗುರು ಚರ ಮೂರ್ತಿಗಳು ಭಾಗವಹಿಸಿ ನನಗೆ ಮತ್ತು ನನ್ನಕುಟುಂಬಕ್ಕೆ ಆಶೀರ್ವದಿಸಿದ್ದಾರೆ. ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಶಿವಾನಂದ ಶರ್ಮರು ಸಂಸ್ಥೆ ಸ್ಥಾಪನೆ ಮಾಡದಿದ್ದರೆ ಸಂಸ್ಥೆಯ ಕಾರ್ಯದರ್ಶಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಇಂದಿನ ಶ್ರೇಯಸ್ಸು, ಕೀರ್ತಿ ಶರ್ಮರಿಗೆ ಸಲ್ಲಬೇಕಿದೆ. 36 ವರ್ಷಗಳಲ್ಲಿ ಶರ್ಮರ ಆದರ್ಶಕ್ಕೆ ಚ್ಯುತಿ ಬಾರದಂತೆ ಸಂಸ್ಥೆಯ ಆರ್ಥಿಕ ಇತಿ ಮಿತಿಗಳಿಗೆ ಒಳಪಟ್ಟು ಅಭಿವೃದ್ಧಿ ಕಾರ್ಯ ಮಾಡಿಕೊಂಡು ಬಂದಿದ್ದೇನೆ.ನನ್ನವಿದ್ಯಾಭ್ಯಾಸದ ವೇಳೆ ಶರ್ಮರು ನನ್ನನ್ನು ನಿಜಲಿಂಗಪ್ಪ ಎಂದು ಕರೆದಿದ್ದಿದೆ. ಅಂದಿನಕಾಲದಲ್ಲಿಯೇ ಶರ್ಮರು ಮುಂದೆ ನೀನು, ಈ ಸಂಸ್ಥೆಯನ್ನು ಮುನ್ನಡೆಸುತ್ತೀಯ ಎಂದು ಭವಿಷ್ಯ ನುಡಿದಿದ್ದರು. ಅವರ ಹಾರೈಕೆಯ ಫಲವಾಗಿ 1989 ರಲ್ಲಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸಂಸ್ಥೆಯ ಬೆಳವಣಿಗೆಗೆ ಅಹರ್ನಿಶಿ ದುಡಿಯುತ್ತಾ ಬಂದಿದ್ದೇನೆ. ವರ್ಷವೊಂದಕ್ಕೆ 280 ಕ್ವಿಂಟಲ್ ಅಕ್ಕಿಯನ್ನು ಮಠ ಮಾನ್ಯಗಳು, ವಿದ್ಯಾರ್ಥಿನಿಲಯಗಳ ದಾಸೋಹಕ್ಕೆ ನೀಡುತ್ತಾ ಬರಲಾಗುತ್ತಿದೆ. ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ನನ್ನ ಮೇಲಿದ್ದು, ನನ್ನೆಲ್ಲಾ ಶ್ರೇಯಸ್ಸು ಸಿದ್ದಗಂಗ ಮಠ ಹಾಗೂ ಶಿವಾನಂದ ಶರ್ಮರಿಗೆ ಸೇರುತ್ತದೆ.
ಹರಿಹರ ವಾಲ್ಮೀಕಿ ಮಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕುಂತೂರು ಮಠದ ಶ್ರೀ ಶಿವಪ್ರಭು ಸ್ವಾಮೀಜಿ, ಮುಡುಕುತೊರೆ ಕಲ್ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ಬೆಂಗಳೂರು ಮಹಾಬೋಧಿ ಸೊಸೈಟಿಯ ಆನಂದ ಭಂತೇಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಸಂಸ್ಥೆ ಆಡಳಿತಾಧಿಕಾರಿ ಕೆ.ಪಿ. ಉದಯಕುಮಾರ್, ಕೆ.ಪಿ. ಮಹದೇವಸ್ವಾಮಿ ಅವರ ಪುತ್ರಿ ಪ್ರಿಯಾಂಕಾ, ಅಭಿನಂದನಾ ಗ್ರಂಥದ ಸಂಪಾದಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಮಲ್ಲಪ್ಪ, ವಿದ್ಯೋದಯ ಸಂಸ್ಥೆ ಪ್ರಾಂಶುಪಾಲ ಎಚ್.ಎಸ್. ಮಾನಸ, ಎನ್. ಕಲ್ಪನಾ, ಉಪನ್ಯಾಸಕರಾದ ಟಿ.ಎಸ್. ಬಸವಣ್ಣಸ್ವಾಮಿ, ರವಿಕುಮಾರ್, ಮೂಗೂರು ಕುಮಾರಸ್ವಾಮಿ, ಆಕಾಶವಾಣಿ ಕಲಾವಿದೆ ಸವಿತಾ ಶಿವಕುಮಾರ್ ಇದ್ದರು.-- ಬಾಕ್ಸ್-- -- ಇಂದು ನನ್ನ ಜೀವಮಾನದ ಸೌಭಾಗ್ಯ-- ಗ್ರಾಮ ವಿದ್ಯೋದಯ ಸಂಘದ ಗೌರವ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ ಮಾತನಾಡಿ, ನಾನು ಯಾವತ್ತೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಈಗಲೂ ಬೇಡ ಎಂದು ಸುತ್ತೂರು ಶ್ರೀಗಳ ಬಳಿ ಹೇಳಿದಾಗ ಅವರ ಆದೇಶದ ಮೇರೆಗೆ ಒಪ್ಪಿಕೊಂಡೆ, ಆ ಕಾರಣದಿಂದ ಹಿತೈಷಿಗಳು, ಆಡಳಿತ ಮಂಡಳಿಯವರು ಸೇರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇದು ನನ್ನಜೀವ ಮಾನದ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))