ಮಣ್ಣಗುಡ್ಡದ ಸೆಂಟ್ರಲ್ ವೇರ್‌ಹೌಸ್ ರಸ್ತೆ ಬಳಿ ಸುಸಜ್ಜಿತವಾಗಿ ತಲೆಎತ್ತಿದ ‘ಎಂ. ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ರೆಡಿಮೇಡ್’ ಸಂಸ್ಥೆಯ ಹೊಸದಾಗಿ ನಿರ್ಮಾಣಗೊಂಡ ಕುಟುಂಬ ಪ್ರದರ್ಶನ ಮಳಿಗೆಯ ಉದ್ಘಾಟನೆ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಮಂಗಳೂರು: ಮಂಗಳೂರಿನ ಮಣ್ಣಗುಡ್ಡದ ಸೆಂಟ್ರಲ್ ವೇರ್‌ಹೌಸ್ ರಸ್ತೆ ಬಳಿ ಸುಸಜ್ಜಿತವಾಗಿ ತಲೆಎತ್ತಿದ ‘ಎಂ. ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ರೆಡಿಮೇಡ್’ ಸಂಸ್ಥೆಯ ಹೊಸದಾಗಿ ನಿರ್ಮಾಣಗೊಂಡ ಕುಟುಂಬ ಪ್ರದರ್ಶನ ಮಳಿಗೆಯ ಉದ್ಘಾಟನೆ ಭಾನುವಾರ ಅದ್ದೂರಿಯಾಗಿ ನೆರವೇರಿತು. ನೂತನ ಮಳಿಗೆಯ ಕಟ್ಟಡವನ್ನು ಖ್ಯಾತ ಚಿತ್ರನಟಿ ಸುಧಾರಾಣಿ ಉದ್ಘಾಟಿಸಿ ಮಾತನಾಡಿ, ಎಂ. ಸಂಜೀವ ಶೆಟ್ಟಿ ಕುಟುಂಬಸ್ಥರು ಬಹಳಷ್ಟು ವರ್ಷಗಳಿಂದ ಒಗ್ಗಟ್ಟಿನ ಮಂತ್ರದಲ್ಲಿ ಬೃಹತ್ ಸಂಸ್ಥೆಯಾಗಿ ಬೆಳೆಸಿ ಈಗ ಮಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದಾರೆ. ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಳೆದು ಬಂದು ಗ್ರಾಹಕರಿಗೆ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ, ಮುಂದೆಯೂ ಈ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.ಸಂಸ್ಥೆಯ ವ್ಯವಸ್ಥಾಪಕರಾದ ಮುರಳೀಧರ ಎಂ., ಅವರ ಪುತ್ರ, ಮಾಲೀಕ ಮಹೇಂದ್ರ, ಪತ್ನಿ ಅಶ್ವಿತಾ, ಗಿರಿಧರ ಶೆಟ್ಟಿ, ಮನೋಹರ ಶೆಟ್ಟಿ, ಶಿವಶಂಕರ ಶೆಟ್ಟಿ ಮತ್ತಿತರರು ಸಂಸ್ಥೆಯ ನೂತನ ಲೋಗೋ ಅನಾವರಣಗೊಳಿಸಿದರು. ನೂತನ ಮಳಿಗೆಯನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮತ್ತು ಉಷಾ ಪ್ರಭಾ ನಾಯಕ್ ಉದ್ಘಾಟಿಸಿದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ನಾಗರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್.ಪೂಜಾರಿ, ಖ್ಯಾತ ತುಳು ಚಲನಚಿತ್ರ ನಟ ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್, ಅರವಿಂದ ಬೋಳಾರ್, ಬಿರುವೆರ್ ಕುಡ್ಲದ ಉದಯ ಕುಮಾರ್, ಲೋಟಸ್ ಸಂಸ್ಥೆಯ ಸಂಪತ್ ಶೆಟ್ಟಿ, ಪ್ರಮುಖರಾದ ಬಾಲಕೃಷ್ಣ ಶಾನುಭಾಗ್, ದೀಪಕ್, ಚಂದ್ರಶೇಖರ್ ಶೆಟ್ಟಿ ಮತ್ತಿತರರು ಆಗಮಿಸಿ ಶುಭ ಕೋರಿದರು. ಶಾಹಿಲ್ ರೈ ನಿರೂಪಿಸಿದರು.ನಾಲ್ಕು ಮಹಡಿಗಳ ಬೃಹತ್ ವಸ್ತ್ರ ಮಳಿಗೆನೂತನ ಮಳಿಗೆ ನಾಲ್ಕು ಮಹಡಿಗಳಲ್ಲಿ ಕಾರ್ಯಾರಂಭಿಸಿದ್ದು, ಎಲ್ಲ ವರ್ಗದ ಜನರಿಗೂ ಅನ್ವಯವಾಗುವಂತೆ, ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಎಲ್ಲ ರೀತಿಯ ಬಟ್ಟೆ ಬರೆಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ನೆಲ ಅಂತಸ್ತಿನಲ್ಲಿ ಕ್ಯಾಷ್ ಬಿಲ್ಲಿಂಗ್ ಕೌಂಟರ್ ಜೊತೆ ಧೋತಿ, ಶಾಲ್ ನಂತಹ ಸಾಂಪ್ರದಾಯಿಕ ವಸ್ತ್ರಸರಣಿ, ಫ್ಯಾನ್ಸಿ ಸೀರೆ, ಡೈಲಿ ವೇರ್ ನಿಂದ ತೊಡಗಿ ಫಂಕ್ಷನ್ ಸೀರೆಗಳ ವರೆಗಿನ ಶ್ರೇಣಿ ಇರಲಿದೆ. ಮೊದಲ ಮಹಡಿ ಪೂರ್ಣವಾಗಿ ಸೀರೆಗೆ ಮೀಸಲು. ಇಲ್ಲಿ ಪ್ರೀಮಿಯಂ ವೆಡ್ಡಿಂಗ್ ಸೀರೆಗಳ ಸಹಿತ ವಿವಿಧ ನಮೂನೆಯ ಬಟ್ಟೆಗಳು ಲಭ್ಯ. ಎರಡನೇ ಮಹಡಿಯೂ ಪೂರ್ಣವಾಗಿ ಮಹಿಳೆಯರ ವೈವಿಧ್ಯಮಯವಾದ ಬಟ್ಟೆಬರೆಗಳು, ಫ್ಯಾಶನ್ ವಸ್ತ್ರವೈವಿಧ್ಯ ಹೊಂದಿರಲಿದೆ. ಮೂರನೇ ಮಹಡಿಯಲ್ಲಿ ಮಕ್ಕಳ ವಿಭಾಗ ಇರಲಿದ್ದು, ಬಾಲಕ-ಬಾಲಕಿಯರಿಗೆ ಬೇಕಾದ ರೆಡಿವೇರ್, ಡೈಲಿವೇರ್, ಪ್ರೀಮಿಯಂ ಬಟ್ಟೆಬರೆಗಳ ಸಂಗ್ರಹವಿದೆ. ನಾಲ್ಕನೇ ಮಹಡಿಯನ್ನು ಪುರುಷರಿಗೆ ಮೀಸಲಾಗಿ ಇರಿಸಲಾಗಿದೆ. ಇಲ್ಲಿ ವೆಡ್ಡಿಂಗ್ ಶ್ರೇಣಿ, ಶೇರ್ವಾನಿಯಂತಹ ದಿರಿಸುಗಳೊಂದಿಗೆ ಬ್ರ್ಯಾಂಡೆಡ್, ನಾನ್ ಬ್ರ್ಯಾಂಡೆಡ್ ಶರ್ಟ್, ಪ್ಯಾಂಟ್, ಜೀನ್ಸ್, ಟಿಶರ್ಟ್ ಇತ್ಯಾದಿ ವಸ್ತ್ರಗಳು ಲಭ್ಯವಿದೆ.
ಆಂಧ್ರಪ್ರದೇಶ, ತಮಿಳುನಾಡಿನಿಂದ ಖ್ಯಾತ ರೇಷ್ಮೆ ಸೀರೆಗಳು, ಉತ್ತರ ಭಾರತದ ಪ್ರಮುಖ ಮಿಲ್‌ಗಳಿಂದ ಇತರ ಜವಳಿಯನ್ನು ತರಿಸಿಕೊಂಡು ಗುಣಮಟ್ಟ ಕಾಯ್ದುಕೊಂಡು ಗ್ರಾಹಕರಿಗೆ ಒದಗಿಸುವುದು ಸಂಜೀವ ಶೆಟ್ಟಿ ಸಂಸ್ಥೆಯ ಹೆಗ್ಗಳಿಕೆ.ವಿಶಾಲ ಮಳಿಗೆ, ವಿಸ್ತೃತ ಪಾರ್ಕಿಂಗ್:ಸಂಜೀವ ಶೆಟ್ಟಿ ಸಿಲ್ಕ್ಸ್ ಮಳಿಗೆಯು ವಿಶಾಲವಾಗಿದ್ದು ಗ್ರಾಹಕರಿಗೆ ಶಾಪಿಂಗ್‌ನ್ನು ಉಲ್ಲಾಸಗೊಳಿಸಲಿದೆ. ಅಲ್ಲದೆ ಆಗಮಿಸುವವರ ವಾಹನಗಳಿಗೆ ವಿಶಾಲ ಪಾರ್ಕಿಂಗ್, ವ್ಯಾಲೆಟ್ ಪಾರ್ಕಿಂಗ್ ಕೂಡಾ ಇದೆ. ನಗರದ ಹೃದಯಭಾಗದಲ್ಲಿರುವ ಮಳಿಗೆಯು ಗ್ರಾಹಕರಿಗೆ ಸುಲಭವಾಗಿ ತಲುಪುವಂತಿದೆ.