ತರೀಕೆರೆಸಮಾಜ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಮಾಚಿದೇವರ ಬದುಕು ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಆದರ್ಶವಾಗಬೇಕು ಎಂದು ಮಡಿವಾಳ ಸಮಾಜ ಅಧ್ಯಕ್ಷ ಎಂ.ಚಂದ್ರು ಹೇಳಿದರು.

- ತರೀಕೆರೆಯಲ್ಲಿ ಶರಣ ಮಡಿವಾಳ ಮಾಚಿದೇವರ ಸ್ಮರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮಾಜ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಮಾಚಿದೇವರ ಬದುಕು ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಆದರ್ಶವಾಗಬೇಕು ಎಂದು ಮಡಿವಾಳ ಸಮಾಜ ಅಧ್ಯಕ್ಷ ಎಂ.ಚಂದ್ರು ಹೇಳಿದರು.ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತು, ಮಡಿವಾಳ ಸಮಾಜದಿಂದ ನಡೆದ ಶರಣ ಮಡಿವಾಳ ಮಾಚಿದೇವರ ಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಶುದ್ಧ ಚಿತ್ತ ಕಾಯಕದಿಂದ ಶರಣ ಮಡಿವಾಳ ಮಾಚಿದೇವರು ಶ್ರೇಷ್ಠ ಶರಣ ಎನಿಸಿದ್ದಾರೆ ಎಂದು ಪುರಸಭೆ ಸದಸ್ಯೆ ದಿವ್ಯಾ ರವಿ ಹೇಳಿದರು.

ಶಿಕ್ಷಕ ಚೇತನ್ ಗೌಡ ಉಪನ್ಯಾಸ ನೀಡಿ ವೀರ ಗಣಾಧಾರಿ ವಚನ ಸಂರಕ್ಷಕ 12ನೇ ಶತಮಾನದ ಮಹಾನ್ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆ, ಮನೆ ಮನೆ, ಮನಗಳಲ್ಲಿ ವಚನ ಸಾಹಿತ್ಯದ ಸುಧೆಯನ್ನು, ಶರಣರ ವಿಚಾರಗಳನ್ನು ಪ್ರಚಾರ ಮಾಡುವ ಕೈಂಕರ್ಯದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ ಎಂದು ಹೇಳಿದರು. 12ನೇ ಶತಮಾನದ ಅನುಭವ ಮಂಟಪ ಯಾವುದೇ ಹೊಸ ಸದಸ್ಯರನ್ನು ಅನುಭವ ಮಂಟಪಕ್ಕೆ ಪರೀಕ್ಷೆಗೆ ಒಳಪಡಿಸಿ ಆಯ್ಕೆ ಮಾಡುವ ಕಾಯಕ ಮಾಡುತ್ತಿದ್ದ ಮಡಿವಾಳ ಮಾಚಿದೇವರು ಶರಣರ ತೊಡುಗೆಗಳನ್ನು ನಿಷ್ಕಲ್ಮಶ ಮನದಿಂದ ಸ್ವಚ್ಛ ಗೊಳಿಸುತ್ತಿದ್ದರು ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ ಮಡಿವಾಳ ಮಾಚಿದೇವರು ಇಲ್ಲದೆ ಅನುಭವ ಮಂಟಪ ವಿರಲಿಲ್ಲ, ವಚನಗಳ ರಕ್ಷಣೆಯಲ್ಲಿ ಮಾಚಿದೇವರ ಶ್ರಮ, ಶರಣ ಚಳುವಳಿ ಮರೆಯಲು ಸಾಧ್ಯವಿಲ್ಲ, ಮಡಿವಾಳ ಸಮಾಜದ ಅನ್ಯೋನ್ಯತೆ ಪ್ರಶಂಸನೀಯ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಟಿ. ಎಸ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಶರಣರ ಸ್ಮರಣೆ ಪ್ರಸ್ತುತತೆ ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಟಿ. ಜಿ. ಸದಾನಂದ ವಚನಗಳನ್ನು ಹೇಳಿದರು. ಶಿಕ್ಷಕ ಕಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು,-2ಕೆಟಿಆರ್.ಕೆ.26ಃ

ತರೀಕೆರೆಯಲ್ಲಿ ನಡೆದ ಶರಣ ಮಡಿವಾಳ ಮಾಚಿದೇವರ ಸ್ಮರಣೆಯಲ್ಲಿ ಪುರಸಭೆ ಸದಸ್ಯೆ ದಿವ್ಯಾ ರವಿ, ಮಡಿವಾಳ ಸಮಾಜ ಅಧ್ಯಕ್ಷ ಎಂ.ಚಂದ್ರು, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಶಿಕ್ಷಕ ಚೇತನ್ ಗೌಡ ಮತ್ತಿತರರು ಭಾಗವಹಿಸಿದ್ದರು.