ಸಾರಾಂಶ
ಹನುಮಸಾಗರ: ಸ್ತ್ರೀ, ಪುರುಷ ಜಾತಿ ಭೇದವಿಲ್ಲದೆ ನ್ಯಾಯ ಒದಗಿಸುವುದರ ಜೊತೆಗೆ ಮಾನವ ಜನಾಂಗವನ್ನು ಸಮಾನವಾಗಿ ಕಂಡವರು ಮಡಿವಾಳ ಮಾಚಿದೇವ ಶರಣರು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಗ್ರಾಮದ ಮಾಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ಶನಿವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರು.ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿದವರು. ಸಮಾಜದ ನಮಗೆ ಎನು ಮಾಡಿದೆ ಎಂಬುದು ಮುಖ್ಯವಲ್ಲ ನಾವು ಸಮಾಜಕ್ಕಾಗಿ ಏನು ಕೊಡುಗೆ ನೀಡಿದ್ದೆವೆ ಎಂಬುದು ಮುಖ್ಯ. ಸಮಾಜದ ಕೆಲಸದ ಜೊತೆಗೆ ನಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.ರಾಮಚಂದ್ರ ಬಡಿಗೇರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಡಿವಾಳ ಮಾಚಿದೇವ ಕಾಯಕದಲ್ಲಿ ಶ್ರೇಷ್ಠರಾಗಿದ್ದರು. ನಡೆ ನುಡಿಯಲ್ಲಿ ಶುದ್ಧವಾಗಿ ನಡೆಯುತ್ತಿದ್ದರು. ಜಗತ್ತು ಜ್ಞಾನಕ್ಕಾಗಿ ಕೈಮುಗಿಯುತ್ತದೆ. ನಮ್ಮ ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಬೇಕು ಎಂದರು.ನೀಲಕಂಠ ಸ್ವಾಮಿಗಳು ಮಾತನಾಡಿ, ಶರಣರ ಬಟ್ಟೆಗಳನ್ನು ಮಾತ್ರ ಸ್ವಚ್ಛತೆ ಮಾಡುತ್ತಿದ್ದರು. ಬೇರೆಯವರ ಬಟ್ಟೆಗಳನ್ನು ನಿರಾಕರಿಸುತ್ತಿದ್ದರು. ಮಡಿವಾಳರು ಲಿಂಗವಂತರು ಎಲ್ಲರೂ ಲಿಂಗಧಾರಿಗಳಾಗಿ, ಲಿಂಗ ಇಲ್ಲದವರು ಗುರುಗಳ ಮಾರ್ಗದರ್ಶದಲ್ಲಿ ಲಿಂಗವಂತರಾಗಿ ಎಂದರು.ಬಸವ ಮಾಚಿದೇವ ದೇವಸ್ವಾಮಿ ಮಾತನಾಡಿ, ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಅರಿಯಬೇಕು. ಸ್ಪಾರ್ಥಕ್ಕಾಗಿ ಬದುಕುವದು ಸಾಮಾನ್ಯ. ಸಮಾಜಕ್ಕಾಗಿ ಬದುಕಬೇಕು. ಲಿಂಗ ಜಾತಿವಾದಕ ಪದವಲ್ಲ. ಲಿಂಗದಿಂದ ತಮ್ಮನ್ನು ತಾವು ಅರಿತುಕೊಂಡು ಜೀವನದಲ್ಲಿ ಸಫಲತೆ ಹೊಂದಿದ್ದಾರೆ ಎಂದರು.ವಿಜಯ ಮಹಾಂತ ಸ್ವಾಮಿಗಳು, ಹಜರತ್ ಸೈಯದ್ ಪಾಶಾ ಅಬ್ದುಲ್ ಖಾದರ್ ಹುಸೇನ್ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ 6 ಜೋಡಿಗಳ ಉಚಿತ ಸಾಮೂಹಿಕ ನೆರವೇರಿದವು.ಪ್ರಮುಖರಾದ ದೊಡ್ಡಬಸವನಗೌಡ ಬಯ್ಯಾಪುರ, ಮಾಜಿ ಶಾಸಕ ಕೆ.ಶರಣಪ್ಪ, ಬಸವರಾಜ ಹಳ್ಳೂರ, ಮಹಾಂತೇಶ ಅಗಸಿಮುಂದಿನ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಎಮ್ಕೆ ಹನುಮಂತಪ್ಪ, ವಿಶ್ವನಾಥ ಕನ್ನೂರ, ರಾಜ್ಯ ಕಾರ್ಯದರ್ಶಿ ದುರುಗೇಶ ಮಡಿವಾಳರ, ಮೈನುದಿನ ಖಾಜಿ, ತಿನಗೌಡ ಪೊಲೀಸಪಾಟೀಲ, ಹನುಮಂತ ಬಿಂಗಿ, ಅಡಿವೆಪ್ಪ ಮಡಿವಾಳರ, ಯಮನೂರ ಮಡಿವಾಳರ, ಸುಭಾಸ ಮಾಡಿವಾಳರ, ಹನುಮಂತ ಮಡಿವಾಳರ, ವೀರಪ್ಪ ಮಡಿವಾಳರ, ಭಗೀರಥಸಾ ಪಾಟೀಲ, ಶಂಕ್ರಪ್ಪ ಸಿನ್ನೂರ, ಸುಚಪ್ಪ ದೇವರಮನಿ, ನಾಗರಾಜ ಕಂದಗಲ್ಲ ಇತರರು ಇದ್ದರು.