ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಹಲವು ಪಂದ್ಯಗಳಲ್ಲಿ ಮಾಚಿಮಂಡ, ನಂಬುಡುಮಾಡ, ಬಿದ್ದಂಡ, ಬಲ್ಲಚಂಡ, ಕುಪ್ಪಂಡ ನಾಂಗಾಲ, ಅಮ್ಮಣಿಚಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಹಲವು ಪಂದ್ಯಗಳಲ್ಲಿ ಮಾಚಿಮಂಡ, ನಂಬುಡುಮಾಡ, ಬಿದ್ದಂಡ, ಬಲ್ಲಚಂಡ, ಕುಪ್ಪಂಡ ನಾಂಗಾಲ, ಅಮ್ಮಣಿಚಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು.

ಮಾಚಿಮಂಡ ಮತ್ತು ಕೆಟೋಳಿರ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಿಮಂಡ ಕೇಟೋಳಿರ ವಿರುದ್ಧ 6-0 ಅಂತರದ ಗೆಲುವು ಸಾಧಿಸಿತು. ನಂಬುಡುಮಾಡ ಚೇಂದ್ರಿಮಾಡ(ಬಲ್ಯಮನೆ) 5-0 ಅಂತರದ ಗೆಲುವು ಸಾಧಿಸಿತು. ಬಿದ್ದಂಡ ಮತ್ತು ಕೈಪಟ್ಟೀರ ವಿರುದ್ಧ 6-1 ಅಂತರದ ಗೆಲುವು ಸಾಧಿಸಿತು. ಬಲ್ಲಚಂಡ ಪಟ್ಟಡ

ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರೆ, ಕುಪ್ಪಂಡ (ನಾಂಗಾಲ) ಚೆರಿಯಂಡ ವಿರುದ್ಧ 5-1ರಲ್ಲಿ, ಅಮ್ಮಣಿಚಂಡ ಮುಂಡಂಡ ವಿರುದ್ಧ 5-0 ರಲ್ಲಿ ಜಯ ಸಾಧಿಸಿದವು.

ಉಳಿದಂತೆ ನೆರವಂಡ ಕಾಂಗೀರ ವಿರುದ್ಧ 4-0 ರಲ್ಲಿ, ಅಪ್ಪನೆರವಂಡ ಅಪ್ಪುಮಣಿಯಂಡ ವಿರುದ್ಧ -3-0 ರಲ್ಲಿ, ಮೇಚಿಯಂಡ ಮತ್ತು ಕೋಡಿರ ವಿರುದ್ಧ 2-1ರಲ್ಲಿ, ಕೋದಂಡ ಮೂವೇರ ವಿರುದ್ಧ 1-0ರಲ್ಲಿ, ಮೇಚಂಡ ಬಟ್ಟೀರ ವಿರುದ್ದ 3-0ರಲ್ಲಿ, ಉದ್ದಿನಾಡಂಡ ಅಮ್ಮಾಟಂಡ ವಿರುದ್ಧ 3-1ರಲ್ಲಿ, ಕರವಟ್ಟೀರ ಚೋಕಿರ ವಿರುದ್ಧ

1-0ರಲ್ಲಿ, ಮುರುವಂಡ ಐನಂಡ ವಿರುದ್ಧ 3-0ರಲ್ಲಿ, ಕಲಿಯಂಡ ಕಲ್ಕಂಡ ವಿರುದ್ಧ 2-0 ರಲ್ಲಿಮುನ್ನಡೆ ಸಾಧಿಸಿದವು. ಪುಟ್ಟಿಚಂಡ ಅನ್ನಡಿಯಂಡ ವಿರುದ್ಧ 4-0 ಗೆಲುವು ಸಾಧಿಸಿತು.

ಚೆರುವಾಳಂಡ ಮತ್ತು ಮಚ್ಚಮಾಡ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಮಚ್ಚಮಾಡ ತಂಡ

5-4 ಅಂತರದಲ್ಲಿ ಜಯಭೇರಿ ಬಾರಿಸಿತು. ಕಲ್ಯಾಟಂಡ ಮತ್ತು ಬಡುವಮಂಡ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲು

ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಕಲ್ಯಾಟಂಡ ತಂಡ 4-2 ಅಂತರದಲ್ಲಿ ಜಯಭೇರಿ ಬಾರಿಸಿತು. ತೀತಿಮಾಡ ಮತ್ತು ತೆಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ತೀತಿಮಾಡ ತಂಡ 3-1ರಲ್ಲಿ ತೆಕ್ಕಡ ವಿರುದ್ಧ ಗೆಲುವು ಸಾಧಿಸಿತು.

---------------------------------------------------

ಚೇನಂಡ ಕಪ್ ಹಾಕಿ ಉತ್ಸವದ ನಡುವೆ ಚೇನಂಡ ಕುಟುಂಬ ಹಾಗೂ ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಕಾಫಿ ಮಾಹಿತಿ ಕಾರ್ಯಾಗಾರ ನಡೆಯಿತು. ಮಣ್ಣು ಪರೀಕ್ಷೆ , ಸುಣ್ಣ ಗೊಬ್ಬರ ಬಳಕೆ , ಕಾಫಿ ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಮಂಡಳಿಯ ಯೋಜನೆಗಳು , ಕಾಫಿ ಮಾರಾಟ ಮುಂತಾದ ವಿಚಾರಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ಬೆಳೆಗಾರರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಾಫಿ ಮಂಡಳಿಯ ಪ್ರಮುಖರಾದ ಡಾ.ಜೀನಾ, ಡಾ. ನಡಾಫ್, ಡಾ.ಲಕ್ಷ್ಮಿಕಾಂತ್ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾಹಿತಿ ಒದಗಿಸಿದರು. ಆಯೋಜಕರು, ಬೆಳೆಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

------------------------------------------------------ಇಂದಿನ ಪಂದ್ಯಗಳು:

ಮೈದಾನ19ಕ್ಕೆಮುಕ್ಕಾಟಿರ (ಪುಲಿಕೋಟು) ಮತ್ತು ಮಾಪಂಗಡ10ಕ್ಕೆ ಗಾಡಂಗಡ ಮತ್ತು ಸೋಮೆಯಂಡ11ಕ್ಕೆಕನ್ನಂಡ ಮತ್ತು ಬಲ್ಟಿಕಾಳಂಡ

12ಕ್ಕೆ ಐಚೆಟ್ಟೀರ ಮತ್ತು ಕುಂಡ್ರಂಡ 1ಕ್ಕೆ ಚಿಮ್ಮಣಮಾಡ ಮತ್ತು ಕನ್ನಿಕಂಡ 2ಕ್ಕೆ ಕುಲ್ಲೇಟೀರ ಮತ್ತು ಮುಂಡೋಟಿರ 3ಕ್ಕೆ ಬೊವೇರಿಯಂಡ ಮತ್ತು ಬಾಳೆಕುಟ್ಟೀರ

ಮೈದಾನ29ಕ್ಕೆ ಚಂಗುಲಂಡ ಮತ್ತು ಆಪಾಡಂಡ 10ಕ್ಕೆ ಪಾಲಂದೀರ ಮತ್ತು ಪಳಂಗಂಡ 11ಕ್ಕೆ ಮುಂಡಿಯೋಳಂಡ ಮತ್ತು ಅಲ್ಲಾರಂಡ 12ಕ್ಕೆಶಿವಚಾಳಿಯಂಡ ಮತ್ತು ಕರ್ತಚೀರ 1ಕ್ಕೆ ಮೈಂದಪಂಡ ಮತ್ತು ಕೇತಿರ

2ಕ್ಕೆ ಕೊಂಗೆಟೀರ ಮತ್ತು ಬಡ್ಡೀರ 3ಕ್ಕೆಕೊಟ್ಟಂಗಡ ಮತ್ತು ಮಾತಂಡ

ಮೈದಾನ39ಕ್ಕೆ ಅಜ್ಜಮಾಡ ಮತ್ತು ಮಣವಟ್ಟೀರ10ಕ್ಕೆ ಕೇಲೇಟಿರ ಮತ್ತು ಬೇಪಡಿಯಂಡ11ಕ್ಕೆ ಬಿದ್ದಾಟಂಡ ಮತ್ತು ಚಪ್ಪಂಡ 12ಕ್ಕೆಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮಲ್ಲಾಜಿರ 1ಕ್ಕೆ ಪಾಡೆಯಂಡ ಮತ್ತು ಬಾದುಮಂಡ 2ಕ್ಕೆ ಸುಳ್ಳಿಮಾಡ ಮತ್ತು ಉಳ್ಳಿಯಡ 3ಕ್ಕೆ ಮಾಣಿರ ಮತ್ತು ಮಾರ್ಚಂಡ