ಹರಿಹರ ಬಿಜೆಪಿ ಶಾಸಕ ವಿರುದ್ಧ ಮಾಡಾಳ್‌ ಮಲ್ಲಿಕಾರ್ಜುನ ವಾಗ್ದಾಳಿ

| Published : Jun 18 2024, 12:48 AM IST

ಹರಿಹರ ಬಿಜೆಪಿ ಶಾಸಕ ವಿರುದ್ಧ ಮಾಡಾಳ್‌ ಮಲ್ಲಿಕಾರ್ಜುನ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಒಂದು ಕ್ರಿಮಿಯಾಗಿದ್ದು, ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡು ನನ್ನ ಹಾಗೂ ನನ್ನ ತಂದೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

- ನಮ್ಮ ತಂದೆ, ಕುಟುಂಬ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಹೇಳಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಒಂದು ಕ್ರಿಮಿಯಾಗಿದ್ದು, ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡು ನನ್ನ ಹಾಗೂ ನನ್ನ ತಂದೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದರು.

ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿ ಬಂದು, ದಾವಣಗೆರೆ ಕಾರ್ಯಕ್ರಮದಲ್ಲೂ ತಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದು, ಅದರಿಂದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದಿದ್ದಾಗಿ ಹೇಳಿರುವುದು ಸರಿಯಲ್ಲ ಎಂದರು.

ತಂದೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಇದ್ದ ಪ್ರಕರಣ ನ್ಯಾಯಾಲಯದಲ್ಲಿ ರದ್ದಾಗಿದೆ. ಇದೇ ವಿಚಾರವನ್ನು ಹೇಳಿದೆ. ಇಲ್ಲವಾದರೆ, ಜನರೇ ನಮ್ಮ ಹುಚ್ಚು ಬಿಡಿಸುತ್ತಾರೆಂದು ಹೇಳಿದ್ದು ನಿಜ. ತಮ್ಮ ತಂದೆಯ ವ್ಯಕ್ತಿತ್ವ ಏನು? ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಹರೀಶ ಯಾರು ಎಂದು ಮಲ್ಲಿಕಾರ್ಜುನ ಪ್ರಶ್ನಿಸಿದರು.

ಹರಿಹರದ ಜನತೆ ಹರೀಶ್‌ಗೆ ಮತ ಹಾಕಿ, ಗೆಲ್ಲಿಸಿದ್ದಾರೆ. ಹರೀಶ ತಮ್ಮ ಕ್ಷೇತ್ರದ ಜನರ ಸೇವೆ ಮಾಡಲಿ. ಅದನ್ನು ಬಿಟ್ಟು ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡಿದರೆ ಸರಿ ಇರುವುದಿಲ್ಲ ಎಂದು ಶಾಸಕ ಬಿ.ಪಿ.ಹರೀಶ್‌ಗೆ ಮಾಡಾಳ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.