ಮದ್ದೂರು: ಸ್ಕ್ಯಾನಿಂಗ್ ಸೆಂಟರ್ ಗೆ ತಹಸೀಲ್ದಾರ್ ಭೇಟಿ ದಾಖಲೆ ಪರಿಶೀಲನೆ

| Published : Aug 24 2025, 02:00 AM IST

ಮದ್ದೂರು: ಸ್ಕ್ಯಾನಿಂಗ್ ಸೆಂಟರ್ ಗೆ ತಹಸೀಲ್ದಾರ್ ಭೇಟಿ ದಾಖಲೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಗರ್ಭಿಣಿ ಮಹಿಳೆ ಹಾಗೂ ಬರುವ ಪೋಷಕರಿಗೆ ಜಾಗೃತಿ ಮೂಡಿಸಲು ಹಾಗೂ ಎಚ್ಚರಿಕೆ ನೀಡಿಲು ಶಿಕ್ಷೆ ಮತ್ತು ದಂಡ ಹಾಗೂ ಹೆಣ್ಣು ಮಕ್ಕಳ ಮಹತ್ವ, ಲಿಂಗ ಪತ್ತೆ ಕಾನುನೂಬಾಹಿರ ಎಂಬ ಸಾರುವ ಜಾಗೃತಿ ಮೂಡಿಸುವ ಸೂಚನ ಫಲಕಗಳನ್ನು ಸ್ಥಳೀಯ ಭಾಷೆಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರದರ್ಶನ ಮಾಡಿ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಡಿ-2 ಡಯಾಗ್ನೋಸ್ಟಿಕ್ ಸೆಂಟರ್‌ಗೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಸ್ಕ್ಯಾನಿಂಗ್ ಸೆಂಟರ್‌ನ ದಾಖಲೆ ಪರಿಶೀಲನೆ ನಡೆಸಿದರು.

ಸ್ಕ್ಯಾನಿಂಗ್ ಮಾಡಿಸಿರುವ ಗರ್ಭಿಣಿ ಮಹಿಳೆಯರ ದಾಖಲೆಗಳು ಮತ್ತು ಫಾರಂಗಳನ್ನು ದಾಖಲೆ ಪರಿಶೀಲನೆ ನಡೆಸಿ, ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಮರ್ಪಕವಾಗಿ ಜಾರಿ ಮತ್ತು ಅನುಷ್ಠಾನಗೊಳಿಸಬೇಕು ಎಂದರು.

ಗರ್ಭಿಣಿ ಮಹಿಳೆ ಹಾಗೂ ಬರುವ ಪೋಷಕರಿಗೆ ಜಾಗೃತಿ ಮೂಡಿಸಲು ಹಾಗೂ ಎಚ್ಚರಿಕೆ ನೀಡಿಲು ಶಿಕ್ಷೆ ಮತ್ತು ದಂಡ ಹಾಗೂ ಹೆಣ್ಣು ಮಕ್ಕಳ ಮಹತ್ವ, ಲಿಂಗ ಪತ್ತೆ ಕಾನುನೂಬಾಹಿರ ಎಂಬ ಸಾರುವ ಜಾಗೃತಿ ಮೂಡಿಸುವ ಸೂಚನ ಫಲಕಗಳನ್ನು ಸ್ಥಳೀಯ ಭಾಷೆಯಲ್ಲಿ ದೊಡ್ಡ ಗಾತ್ರದಲ್ಲಿ ಪ್ರದರ್ಶನ ಮಾಡಲು ಸೂಚಿಸಿದರು.

ದಾಖಲೆಗಳನ್ನು ಕಡ್ಡಾಯವಾಗಿ ಎರಡು ವರ್ಷಗಳವರಗೆ ಇಟ್ಟಿರಬೇಕು. ಬಾಲ ಗರ್ಭಿಣಿ ಕಂಡರೆ ತಾಲೂಕು ಆಡಳಿತಕ್ಕೆ ಮತ್ತು ಆರೋಗ್ಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ದಾಖಲೆ ಪರಿಶೀಲಿಸಲಾಗುವುದು. ಕಾನೂನು ಉಲ್ಲಂಘನೆ ಮಾಡಿದರೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಕ್ರಮ ಕೈಗೊಳುತ್ತೇವೆ ಎಚ್ಚರಿಸಿದರು.

ತಪಾಸಣೆ ವೇಳೆ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಡಿ2 ಸ್ಕ್ಯಾನಿಂಗ್ ಸೆಂಟರ್ ಮಾಲೀಕರಾದ ಡಾ.ದೀಪಕ್ ಗೌತಮ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಆ.೩೦ರಿಂದ ಜನವಾದಿ ಸಂಘಟನೆಯ ರಾಜ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ೧೨ನೇ ರಾಜ್ಯ ಸಮ್ಮೇಳನ ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಆ.೩೦ರಿಂದ ಸೆಪ್ಟೆಂಬರ್ ೧ರ ವರೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ೫೦೦ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗವಹಿಸುವರು. ಸಂಘಟನೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶ್ರಮಿಸಿದ ಹಾದಿ, ನಡೆಸಿದ ಜನಪರ ಹೋರಾಟ, ಕಾರ್ಯಕ್ರಮಗಳನ್ನು ವಿಮರ್ಶೆ ಮಾಡಿಕೊಳ್ಳುವುದರ ಜೊತೆಗೆ ಮುಂದಿನ ಮೂರು ವರ್ಷಗಳಲ್ಲಿ ನಡೆಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಯೋಜನೆ ರೂಪಿಸುವುದರ ಜೊತೆಗೆ ನೂತನ ರಾಜ್ಯ ಸಮಿತಿಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಿಂದ ೭೫ ಪ್ರತಿನಿಧಿಗಳು ಭಾಗವಹಿಸುವರು. ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಸದಸ್ಯತ್ವ ಹೊಂದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿ ಹೋರಾಟ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹದ ವಿರುದ್ಧ ಜನಜಾಗೃತಿ, ಮಹಿಳಾ ಸಮಾನತೆ, ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು.

ಗೋಷ್ಠಿಯಲ್ಲಿ ಡಿ.ಕೆ.ಲತಾ, ಸುಶೀಲಾ, ವಿ.ಕಲಾವತಿ, ಸುನೀತಾ, ಶೋಭಾ, ಪ್ರೇಮಮ್ಮ, ಪ್ರೇಮಾ, ಸವಿತಾ. ಜಯಲಕ್ಷ್ಮಮ್ಮ ಇದ್ದರು.