ಮೇ 30ಕ್ಕೆ ಮದ್ದೂರು ತಾಲೂಕು ಆರ್ಯ ಈಡಿಗರ ಸಮಾವೇಶ

| Published : May 06 2025, 12:22 AM IST

ಸಾರಾಂಶ

ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಂಘದ ಉದ್ಘಾಟನೆ ಮತ್ತು ಸಮಾವೇಶವನ್ನು ಈಡಿಗ ಜನಾಂಗದ ಗುರುಗಳಾದ ಶ್ರೀವಿಕ್ಯಾತಾನಂದ ಶ್ರೀಗಳು ಮತ್ತು ರೇಣುಕಾನಂದ ಶ್ರೀಗಳ ಸಾನಿಧ್ಯದಲ್ಲಿ ಸಮಾವೇಶವನ್ನು ರಾಜ್ಯ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ಡಾ.ತಿಮ್ಮೇಗೌಡ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನಲ್ಲಿ ಆರ್ಯ ಈಡಿಗರ ಜನಾಂಗವನ್ನು ಹೆಚ್ಚು ಸಂಘಟನೆ ಮಾಡುವ ಉದ್ದೇಶದಿಂದ ಮೇ 30ರಂದು ಸಂಘದ ಉದ್ಘಾಟನೆ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಶಿವಪುರದ ಅಣ್ಣೇಗೌಡ ಕಾಂಪ್ಲೆಕ್ಸ್ ನಲ್ಲಿ ಸಮಾವೇಶ ಕುರಿತ ಪದಾಧಿಕಾರಿಗಳ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಂಘದ ಉದ್ಘಾಟನೆ ಮತ್ತು ಸಮಾವೇಶವನ್ನು ಈಡಿಗ ಜನಾಂಗದ ಗುರುಗಳಾದ ಶ್ರೀವಿಕ್ಯಾತಾನಂದ ಶ್ರೀಗಳು ಮತ್ತು ರೇಣುಕಾನಂದ ಶ್ರೀಗಳ ಸಾನಿಧ್ಯದಲ್ಲಿ ಸಮಾವೇಶವನ್ನು ರಾಜ್ಯ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ಡಾ.ತಿಮ್ಮೇಗೌಡ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢ ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಜನಾಂಗದ ಹಿರಿಯ ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶಿವಪುರ ಧ್ವಜ ಸತ್ಯಾಗ್ರಹ ಸೌಧದಿಂದ ಆವರಣದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರದೇಶ ಆರ್ಯಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸೌಮ್ಯ ಶ್ರೀನಿವಾಸ್, ತಾಲೂಕು ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಎಂ.ಎಲ್.ತಮ್ಮಯ್ಯ, ಉಪಾಧ್ಯಕ್ಷ ರಾಧಾ ಎ.ನಾರಾಯಣಸ್ವಾಮಿ, ಓಬಳಿ ರಂಗ, ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿ ಕೆ.ಶ್ರೀನಿವಾಸ್, ಖಜಾಂಚಿ ಶ್ರೀನಿವಾಸು, ಮುಖಂಡರಾದ ಮೋಹನ್, ಸುರೇಶ್, ಪುಟ್ಟಪ್ಪ, ಗೋವಿಂದರಾಜು, ಕೃಷ್ಣಪ್ಪ, ಶ್ರೀನಿವಾಸ್‌, ಲಕ್ಷ್ಮಣ, ರಾಜೇಶ್, ಪುರುಷೋತ್ತಮ್ ಸೇರಿದಂತೆ ಈಡಿಗ ಜನಾಂಗದ ಹಲವು ಮುಖಂಡರು ಇದ್ದರು.