ಸಾರಾಂಶ
ಕಳೆದ 2024 ರ ಸೆಪ್ಟೆಂಬರ್ 22ರಂದು ನಡೆದ ರಾಜ್ಯ ವ್ಯಾಪ್ತಿ ಮುಷ್ಕರದದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆಗಳ ಈಡೇರಿಕೆಗೆ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆ ಒತ್ತಾಯಿಸಿ ಕೇಂದ್ರ ಸಂಘಟನೆ ಕೈಗೊಂಡಿರುವ ಎರಡನೇ ಹಂತದ ಅನಿದಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ತಾಲೂಕಿನ ಗ್ರಾಮ ಲೆಕ್ಕಿಗರು ಸೋಮವಾರದಿಂದ ಧರಣಿ ಆರಂಭಿಸಿದರು.ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಚನ್ನಬಸಪ್ಪ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಹೋಬಳಿಗಳ ನಾಡಕಚೇರಿಗಳ ಗ್ರಾಮಲೆಕ್ಕಿಗರು ಪಾಲ್ಗೊಂಡಿದ್ದರು. ಮುಷ್ಕರದಿಂದ ತಾಲೂಕು ಕಚೇರಿ ಸೇರಿದಂತೆ ನಾಡಕಚೇರಿಗಳಲ್ಲಿ ಸಕಾಲ, ಖಾತೆ ಬದಲಾವಣೆ ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳು ಅಸ್ತವ್ಯಸ್ತಗೊಂಡವು.
ಕಳೆದ 2024 ರ ಸೆಪ್ಟೆಂಬರ್ 22ರಂದು ನಡೆದ ರಾಜ್ಯ ವ್ಯಾಪ್ತಿ ಮುಷ್ಕರದದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆಗಳ ಈಡೇರಿಕೆಗೆ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು ಎಂದು ಸಂಘದ ಅಧ್ಯಕ್ಷ ಚನ್ನಬಸಪ್ಪ ತಿಳಿಸಿದರು.ಆದರೆ, ಸರ್ಕಾರ ನೌಕರರ ಬೇಡಿಕೆ ವಿಚಾರವಾಗಿ ತೃಪ್ತಿಕರವಾದ ಕ್ರಮಗಳನ್ನು ಕೈಗೊಂಡಿಲ್ಲ ಹಾಗೂ ಬೇಡಿಕೆ ಈಡೇರಿಕೆಗೆ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಅನಿದಿಷ್ಟಾವಧಿ ಮುಷ್ಕರ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.
ತಾಲೂಕ ಕಚೇರಿ ಸೇರಿದಂತೆ ಎಲ್ಲಾ ಹೋಬಳಿಗಳ ಗ್ರಾಮಲೆಕ್ಕಿಗರು ಮತ್ತು ವೃಂದ ನೌಕರರುಗಳು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.ಮುಷ್ಕರದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮರುಳಸಿದ್ದೇಶ್ವರ, ಮುಖಂಡರಾದ ಮಂಜುನಾಥ, ನಾಗಮ್ಮ, ಸೇರಿದಂತೆ ವಿವಿಧ ಹೋಬಳಿಗಳ ಗ್ರಾಮಲೆಕ್ಕಿಗರು ಇದ್ದರು.