ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮಾದೇಶ್

| Published : Oct 24 2024, 12:36 AM IST / Updated: Oct 24 2024, 12:37 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಅಯೋಜಿಸಿದ್ದ ಒಕ್ಕಲಿಗರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಮಾಜಿ ಶಾಸಕ ನರೇಂದ್ರ, ಮಾದೇಶ್ ಇದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಯಳಂದೂರು, ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕಂಡಾಯನಪಾಳ್ಯ ಮಾದೇಶ್ ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಪಿಎಸ್ಐ ಸಿದ್ದಲಿಂಗೇಗೌಡ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಜಿ.ವಿ.ಗೌಡ ಕಾಲೇಜಿನಲ್ಲಿ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆರ್.ನರೇಂದ್ರ ರಾಜೂಗೌಡರವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ನೂತನ ಅಧ್ಯಕ್ಷರಾಗಿ ಕಂಡಾಯನಪಾಳ್ಯ ಕೆ.ಸಿ.ಮಾದೇಶ್, ಉಪಾಧ್ಯಕ್ಷರಾಗಿ ಬನ್ನಿಸಾರಿಗೆ ಶಂಕರ್, ಗುಂಬಳ್ಳಿ ಸೋಮೇಶ್ ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಪಿಎಸ್ಐ ಸಿದ್ದಲಿಂಗೇಗೌಡ ಅವರನ್ನು ಸಂಘದ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು.

ಬಳಿಕ ಸಂಘದ ಗೌರವಧ್ಯಕ್ಷ ಮತ್ತು ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಇಂದು ಒಕ್ಕಲಿಗರ ಸಂಘದ ಎಲ್ಲಾ ನಿರ್ದೇಶಕರ ಒಮ್ಮತ್ತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಹೆಮ್ಮಯ ಸಂಗತಿ. ಸಂಘವನ್ನು ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸೋಣ. ಮುಂದಿನ ದಿನಗಳಲ್ಲಿ ಬಡ ಮಕ್ಕಳು ಹಾಗೂ ನಮ್ಮ ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಹ ಕೆಲಸವನ್ನು ಮಾಡಲು ಶ್ರಮಿಸಬೇಕು, ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಸಂಘದ ರಾಜೂಗೌಡ, ಪ್ರಸನ್ನ ಎನ್ ತೆಳ್ಳನೂರು, ಸಿಂಗನಲ್ಲೂರು ಡಿ.ಕೃಷ್ಣೇಗೌಡ, ಸಿದ್ದೇಗೌಡ, ಶ್ರೀನಿವಾಸ.ಜಿ, ಕೆ.ಭಾಸ್ಕರ, ಮಾದೇಗೌಡ (ಶೇಖರ್), ಮಂಜೇಶ್.ಎಸ್, ಆನಂದ್ ಕುಮಾರ್, ಡಿ.ಸತೀಶ್, ಮಾದೇಶ್, ಕೆ.ನಾಗರಾಜು ಅರೇಪಾಳ್ಯ, ಸುಂದ್ರಪ್ಪ, ಮನು.ಎಂ, ಜೆ.ಬಸವರಾಜು, ಮಾಜಿ ಕಾರ್ಯದರ್ಶಿ ಬಸವೇಗೌಡ, ಮಾಜಿ ನಿರ್ದೇಶಕ ನಾಗೇಂದ್ರ, ಸುಂದರ, ಶ್ರೀನಿವಾಸ್,ಕಾಳೇಗೌಡ, ತಾಲ್ಲೂಕು ಮಾಜಿ ಅಧ್ಯಕ್ಷ ಮತ್ತು ಚಾ.ನಗರ, ಮೈಸೂರು ಜಿಲ್ಲಾ ನಿರ್ದೇಶಕ ಎ.ಕುಮಾರ್, ಜಿಲ್ಲಾ ನಿರ್ದೇಶಕರು ರಾಜಣ್ಣ ಪಣ್ಯದಹುಂಡಿ ಇದ್ದರು.