Madhwara: A new day for people with disabilities
- ತೆಲಂಗಾಣ ಮೂಲದ 25 ವರ್ಷದ ಮಾನಸಿಕ ಅಸ್ವಸ್ಥ ಯುವತಿ ಜಿಲ್ಲಾ ಆಸ್ಪತ್ರೆಯ ಆರೈಕೆ ಕೇಂದ್ರಕ್ಕೆ ಸ್ಥಳಾಂತರಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಅಸೋಶಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ (ಎಪಿಡಿ) ಸಂಸ್ಥೆಯಿಂದ ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ತೆಲಂಗಾಣ ಮೂಲದ 25 ವರ್ಷದ ಅಪರಿಚಿತ ಮಾನಸಿಕ ಅಸ್ವಸ್ಥ ಯುವತಿಯನ್ನು ಸಂರಕ್ಷಿಸಿ ಯಾದಗಿರಿಯ ಜಿಲ್ಲಾ ಆಸ್ಪತ್ರೆಯ (ಯಿಮ್ಸ್) ಮನೋವೃಕ್ಷದ (ಇ.ಸಿ.ಆರ್.ಸಿ) ತುರ್ತು ಮಾನಸಿಕ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ಕೆಲ ದಿನಗಳಿಂದ ಮಾಧ್ವಾರ ಬಸ್ ನಿಲ್ದಾಣದಲ್ಲಿ ತಂಗಿದ್ದ 25 ವರ್ಷದ ಮಾನಸಿಕ ಅಸ್ವಸ್ಥ ಯುವತಿಯನ್ನು ಗಮನಿಸಿದ ರವಿಂದ್ರ ಕಲಾಲ, ಕೆ.ಕೆ.ಆರ್.ಟಿ.ಸಿ.ಯ ವಿಭಾಗೀಯ ನಿಯಂತ್ರಕರು ಎಪಿಡಿ ಸಂಸ್ಥೆಯ ಗಮನಕ್ಕೆ ತಂದರು. ಇದಕ್ಕೆ ತುರ್ತಾಗಿ ಸ್ವಂದಿಸಿದ ಸಂಸ್ಥೆಯು ಕಾನೂನಿನ ಚೌಕಟ್ಟಿನ ಅನ್ವಯ ಜಿಲ್ಲಾ ಆಸ್ಪತ್ರೆ ಯ (ಯಿಮ್ಸ್) ನ ಮನೋವೃಕ್ಷ (ಇ.ಸಿ.ಆರ್.ಸಿ) ಮಾನಸಿಕ ತುರ್ತು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವುದರ ಮೂಲಕ ವಿನೂತನವಾಗಿ ಡಿ.3 ರ ವಿಕಲಚೇತನ ದಿನಾಚರಣೆಯನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು. ಎಪಿಡಿ ಸಂಸ್ಥೆಯು ಈ ತರಹದ 21 ವಿಕಲಚೇತನರ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಯಾದ್ಯಂತ ಕಳೆದ 3 ವರ್ಷಗಳಿಂದ ಕೆಲಸ ನಿರ್ವಹಿಸುವುದರ ಮೂಲಕ ವಿಕಲಚೇತನವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ.
ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯು ಒಂದು ವಿಕಲತೆಯಾಗಿದ್ದು, ಇತ್ತೀಚಿನ ಅಧ್ಯಯನದ ವರದಿ ಪ್ರಕಾರ ಭಾರತದಲ್ಲಿ ಪ್ರತಿ 11 ಜನರಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯವು, ಆರೋಗ್ಯದ ಒಂದು ಅವಿಭಾಜ್ಯ ಅಂಗ, ಮಾನಸಿಕ ಆರೋಗ್ಯ ಇಲ್ಲದೆ, ಆರೋಗ್ಯವೇ ಇಲ್ಲ. ಮಾನಸಿಕ ಕಾಯಿಲೆ ಬರಲು ಒಂದಕ್ಕಿಂತ ಅಧಿಕ ಕಾರಣಗಳಿವೆ, ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳು, ಮಾದಕ ವಸ್ತುಗಳ ಸೇವನೆ , ಕಷ್ಟ ನಷ್ಟಗಳು ನೋವು, ನಿರಾಸೆ, ಕುಟುಂಬ ,ಹಣಕಾಸು, ಉದ್ಯೋಗ ಸಮಸ್ಯೆಗಳು, ಸಾಮಾಜಿಕ ಅವ್ಯವಸ್ಥೆ, ಕೌಟುಂಬಿಕ ಸಮಸ್ಯೆ, ಸಾಮಾಜಿಕ ತಾರತಮ್ಯಗಳು ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆಗಳಲ್ಲಿ ಖಿನ್ನತೆ , ಆತಂಕ, ಸ್ಕೀಜೋಫ್ರಿನಿಯಾ, ಬೈಪೋಲಾರ್, ಮನೋವಿಕಲತೆ, ಚಿತ್ತವಿಕಲತೆ, ಇನ್ನೂ ಅಧಿಕ ವಿಧಗಳಿವೆ. ಹೆಚ್ಚಿನ ಮಾಹಿತಿಗಾಗಿ 24*7 ಟೆಲಿ ಮಾನಸ ದೂರವಾಣಿ ಸಂಖ್ಯೆ 14416 ಅಥವಾ 1800-89-14416 ಕರೆ ಮಾಡಬಹುದು. ಮಾನಸಿಕ ಅಸ್ವಸ್ಥರನ್ನು ನಾವೆಲ್ಲರೂ ಪ್ರೀತಿಸಿಬೇಕು. ಗೌರವಿಸಿಬೇಕು ಹಾಗೂ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಕೈಲಾದ ಸಹಾಯ ಮಾಡಿ, ಕಡೆಗಣಿಸದಿರಿ. ಅಪಹಾಸ್ಯ ಮಾಡದೆ ಅವರಿಗೆ ಸೂಕ್ತವಾದ ವೈದ್ಯಕೀಯ ನೆರವು, ಕುಟುಂಬದ ಆರೈಕೆ, ಆಸರೆಯಿದ್ದರೆ ಖಂಡಿತವಾಗಿಯೂ ಅವರು ಗುಣಮುಖರಾಗುತ್ತಾರೆ. ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕೆಂದು ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕರು ವಿರುಪಾಕ್ಷಪ್ಪ ಗೌಡ ಮಾಲಿಪಾಟೀಲ್ ವಿವರಿಸಿದರು.ಸಂಸ್ಥೆಯ ಸಿಬ್ಬಂದಿಗಳಾದ ಸುರೇಶ, ಗೌರಮ್ಮ, ರವೀಂದ್ರ ಕಲಾಲ್ ನಿಯಂತ್ರಕರು ಅಂಬುಲೆನ್ಸ್ ಸಿಬ್ಬಂದಿಯಾದ ಶ್ರೀನಿವಾಸ್ ಕಲಾಲ್, ಪೊಲೀಸ್, ಅಂಬ್ಯುಲೆನ್ಸ್ ವೈದ್ಯಕೀಯ ಸಿಬ್ಬಂದಿಗಳು, ಗ್ರಾಮಸ್ಥರು ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು.
-9ವೈಡಿಆರ್5 : ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ತೆಲಂಗಾಣ ಮೂಲದ 25 ವರ್ಷದ ಅಪರಿಚಿತ ಮಾನಸಿಕ ಅಸ್ವಸ್ಥ ಯುವತಿಯನ್ನು ಸಂರಕ್ಷಿಸಿ, ಜಿಲ್ಲಾ ಆಸ್ಪತ್ರೆಯ (ಯಿಮ್ಸ್) ಮನೋವೃಕ್ಷದ (ಇ.ಸಿ.ಆರ್.ಸಿ) ತುರ್ತು ಮಾನಸಿಕ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
---000---