Madiga community education should be given high priority: K.H. Muniyappa

-ಶಿವಶರಣ ಮಾದರ ಚನ್ನಯ್ಯನವರ ಮೂರ್ತಿ ಪ್ರತಿಷ್ಠಾಪನೆ, 975ನೇ ಜಯಂತಿ

--

ಕನ್ನಡಪ್ರಭ ವಾರ್ತೆ ಜೇವರ್ಗಿ

ಅಂಬೇಡ್ಕರ ಅವರು ದಲಿತ್ತೋದ್ಧಾರಕ್ಕಾಗಿ ಮಿಸಲಾತಿ ಕಲ್ಪಿಸಿದ್ದು, ಮಾದಿಗ ಜನಾಂಗಕ್ಕೆ ಒಳಮಿಸಲಾತಿಯು ಲಭ್ಯವಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.

ಮಾದಿಗ ಸಮಾಜದಿಂದ ಆಯೋಜಿಸಿದ್ದ ಮಾದರ ಚನ್ನಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ 975ನೇ ಜಯಂತ್ಯುತ್ಸವ ಹಾಗೂ ಮಾದಿಗರ ಬಹೃತ್ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಫೆಬ್ರುವರಿಯಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.

ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಮಾತನಾಡಿ, ಮಾದಿಗ ಸಮಾಜ ಒಗ್ಗಟ್ಟಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಸಮಾಜವನ್ನು ಒಗ್ಗಟ್ಟಾಗಿ ನಡೆಸಿಕೊಂಡು ಹೋಗಬೇಕೆಂದು ಹೇಳಿದರು.

ಶಾಸಕ ಡಾ.ಅಜಯಸಿಂಗ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತ, ದೀನ ದಲಿತ, ಬಡವರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶೋಷಿತರ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಶಿವಸಿದ್ದಸೋಮೇಶ್ವರ ಶಿವಾಚಾರ್ಯರು, ಬಸವ ಹರಳಯ್ಯ ಮಹಾಸ್ವಾಮೀಜಿ, ಸೊನ್ನದ ಡಾ.ಶಿವಾನಂದ ಮಹಾಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಅರಣುಕುಮಾರ ಪಾಟೀಲ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಜಯಕುಮಾರ ರಾಮಕೃಷ್ಣ, ಗುರಲಿಂಗಪ್ಪಗೌಡ ಪಾಟೀಲ ಆಂದೋಲ, ರಾಜಶೇಖರ ಸೀರಿ, ಶಾಂತಪ್ಪ ಕೂಡಲಗಿ, ಭಾಗಪ್ಪ ಯಲಗೋಡ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ನಾಗರಾಜ ಹಾಲಗೂರ, ಮಾನಪ್ಪ ಗೋಗಿ, ಮಲ್ಲಿಕಾರ್ಜುನ ಬಿಲ್ಲಾರ, ಗೋಪಿಕೃಷ್ಣ, ಶಾಮ ನಾಟೀಕರ್, ಯಲ್ಲಪ್ಪ ಕುಂಟನೂರ, ವಿಜಯಕುಮಾರ ಹಿರೇಮಠ, ದೇವಿಂದ್ರ ದೊಡಮನಿ, ಮಹೇಶ ಕೆಂಭಾವಿ, ಶರಣು ಮ್ಯಾಗೇರಿ, ಶರಣು, ಈಶ್ವರ ಹಿಪ್ಪರಗಿ, ಬಾಲರಾಜ ನಾಲಕಮನ, ಅನಿಲಕುಮಾರ ದೊಡಮನಿ, ಶರಣು ಹಾದಿಮನಿ, ಅಂಬರೇಷ ಡೊಳ್ಳೆ ಇದ್ದರು. ಭೀಮು ಖಾದ್ಯಾಪೂರ ಸ್ವಾಗತಿಸಿದರು, ಡಾ. ಧರ್ಮಣ್ಣ ಬಡಿಗೇರ ನಿರೂಪಿಸಿದರು.