ಮಡಿಕೇರಿ: ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್

| Published : Aug 03 2024, 12:35 AM IST

ಮಡಿಕೇರಿ: ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ನಗರದ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಈ ಬಾರಿಯ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪ ಸಮಿತಿ ಅಧ್ಯಕ್ಷರಾಗಿ ಜಿ.ಸಿ.ಜಗದೀಶ್ ಆಯ್ಕೆಗೊಂಡಿದ್ದಾರೆ. ನಗರದ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಕಳೆದ ಬಾರಿಯ ಅಧ್ಯಕ್ಷ ಎಚ್.ಮಂಜುನಾಥ್, ಜಿ.ಸಿ.ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ, ಎಲ್ಲ ಮಂಟಪ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ದಸರಾ ಉತ್ಸವ ಆಚರಿಸಲಾಗವುದು. ಮಂಟಪಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಎಚ್.ಮಂಜುನಾಥ್ ಮಾತನಾಡಿ, ಜಿಲ್ಲಾಡಳಿತ, ದಸರಾ ಸಮಿತಿ, ಶಾಸಕರ ಸಹಕಾರದಿಂದ ಕಳೆದ ಬಾರಿ ದಸರಾವನ್ನು ಉತ್ತಮವಾಗಿ ನಡೆಸಲಾಗಿದೆ. ದಸರಾ ಸಮಿತಿಯಿಂದ ದಶಮಂಟಪ ಸಮಿತಿಗೆ ಸೂಕ್ತ ಮಾನ್ಯತೆ ಸಿಗಬೇಕು ಎಂದರು.

ದಸರಾ ಸಮಿತಿ ಕಾಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೋಟೆ ಗಣಪತಿ ದೇವಾಲಯದ ಬಿ.ಎಂ.ರಾಜೇಶ್, ಕರವಲೆ ಭಗವತಿ ದೇವಾಲಯದ ಗಜೇಂದ್ರ, ಕೋಟೆ ಗಣಪತಿ ದೇವಾಲಯದ ವಿಕ್ಕಿ, ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುಂಡ, ಕೋದಂಡರಾಮ ದೇವಾಲಯದ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲ್, ಮಾಜಿ ಅಧ್ಯಕ್ಷ ಗೋಪಿನಾಥ್, ದಶಮಂಟಪ ಸಮಿತಿ ಖಜಾಂಚಿ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಇದ್ದರು.