ಮಡಿಕೇರಿ: ನವೆಂಬರ್ ೫ರಿಂದ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ತರಬೇತಿ ಶಿಬಿರ

| Published : Oct 26 2024, 12:53 AM IST / Updated: Oct 26 2024, 12:54 AM IST

ಮಡಿಕೇರಿ: ನವೆಂಬರ್ ೫ರಿಂದ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ತರಬೇತಿ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಖೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಮಟ್ಟದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಸಂಸ್ಥೆಯ ಸಹಕಾರದೊಂದಿಗೆ, ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ವತಿಯಿಂದ ಮಡಿಕೇರಿಯಲ್ಲಿ ನ.5 ರಿಂದ 14ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ತರಬೇತಿ ಶಿಬಿರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಖೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಮಟ್ಟದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಸಂಸ್ಥೆಯ ಸಹಕಾರದೊಂದಿಗೆ, ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ವತಿಯಿಂದ ಮಡಿಕೇರಿಯಲ್ಲಿ ನ.5 ರಿಂದ 14ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ತರಬೇತಿ ಶಿಬಿರ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಕಿಕ್ ಬಾಕ್ಸಿಂಗ್ ತರಬೇತಿ ಕಿಂಬರ್ಲಿ ಕೂರ್ಗ್ ನೆರವಿನೊಂದಿಗೆ ನಡೆಯಲಿದೆ ಎಂದರು. ತರಬೇತಿ ಶಿಬಿರದಲ್ಲಿ ಜಿಲ್ಲೆ ಹಾಗೂ ರಾಷ್ಟ್ರದ ವಿವಿಧೆಡೆಗಳ ಆಸಕ್ತ 200 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತರಬೇತಿಯಲ್ಲಿ ರಾಷ್ಟ್ರೀಯ ಮಟ್ಟದ 13 ಹಾಗೂ 3 ಮಂದಿ ಅಂತಾರಾಷ್ಟ್ರೀಯ ತರಬೇತುದಾರರು ಪಾಲ್ಗೊಳ್ಳಲಿದ್ದಾರೆ. ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ 14 ಸಾವಿರ ರು. ಪ್ರವೇಶ ಶುಲ್ಕ ನಿಗದಿಯಾಗಿದ್ದು, ಸ್ಥಳೀಯರಿಗೆ ರಿಯಾಯಿತಿ ಇರಲಿದೆ ಎಂದು ತಿಳಿಸಿದರು.

ಕಿಕ್ ಬಾಕ್ಸಿಂಗ್ ತರಬೇತಿಯಲ್ಲಿ ಪಾಲ್ಗೊಳ್ಳಲು ವಯೋಮಿತಿ 18 ವರ್ಷ ಮೇಲ್ಪಟ್ಟಿರಬೇಕೆಂದು ಸ್ಪಷ್ಟಪಡಿಸಿದರು.

ತರಬೇತಿಯೊಂದಿಗೆ ನ.9ರಿಂದ 13 ರ ವರೆಗೆ ನಗರದ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಇದರಲ್ಲಿ ರಾಷ್ಟ್ರದ ವಿವಿಧೆಡೆಗಳ 70 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಇದು ವರ್ಷದ ಕೊನೆಯ ಹಾಗೂ ಮುಂಬರುವ ರಿಯಾದ್ ಏಷ್ಯನ್ ಗೇಮ್ಸ್ ಪೂರ್ವ ತಯಾರಿಯ ಚಾಂಪಿಯನ್ ಶಿಪ್ ಆಗಿದೆಯೆಂದು ರಾಜಶೇಖರ್ ವಿವರಿಸಿದರು.

ತರಬೇತಿ ಮತ್ತು ಚಾಂಪಿಯನ್‌ಶಿಪ್‌ 6ನೇ ಏಷಿಯನ್ ಇಂಡೋರ್ ಮತ್ತು ಮಾರ್ಷಲ್ ಆರ್ಟ್ಸ್‌ ಗೇಮ್ಸ್ ಮುಂತಾದ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಆಯ್ಕೆಗಾಗಿ ಪ್ರಮುಖ

ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ ಎಂದರು.

ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ಅಧ್ಯಕ್ಷ ಮಹದೇವೇ ಗೌಡ ಹಾಗೂ ಕಿಂಬರ್ಲಿ ಕೂರ್ಗ್‌ ಪ್ರಮುಖ ಕೆ.ಜಿ.ಮದನ್ ಸುದ್ದಿಗೋಷ್ಠಿಯಲ್ಲಿದ್ದರು.