ಮಡಿಕೇರಿ: ವರ್ಷಾಂತ್ಯದ ಸೂರ್ಯಾಸ್ತ ಕಣ್ತುಂಬಿಕೊಂಡ ಜನತೆ

| Published : Jan 01 2025, 12:00 AM IST

ಮಡಿಕೇರಿ: ವರ್ಷಾಂತ್ಯದ ಸೂರ್ಯಾಸ್ತ ಕಣ್ತುಂಬಿಕೊಂಡ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ರಾಜಾಸೀಟ್‌ನಲ್ಲಿ ಪ್ರವಾಸಿಗರು ವರ್ಷಾಂತ್ಯದ ಸೂರ್ಯಾಸ್ಥಮಕ್ಕಾಗಿ ಕಾದು ಕುಳಿತಿದ್ದರು. ಕೆಂಬಣ್ಣ ಚೆಲ್ಲುತ್ತಾ ಬೆಟ್ಟ ಶ್ರೇಣಿಗಳ ನಡುವೆ ನೇಸರ ಮರೆಯಾಗುವ ಸಂದರ್ಭ ಮಂಗಳವಾರ ಸಂಜೆ ಪ್ರವಾಸಿಗರು ಏಕಕಾಲದಲ್ಲಿ 2024ಕ್ಕೆ ಗುಡ್ ಬೈ ಹೇಳುವ ಮೂಲಕ ವರ್ಷಾಂತ್ಯದ ನೇಸರನನ್ನು ಬೀಳ್ಕೊಟ್ಟರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಪ್ರಮುಖ ಪ್ರವಾಸಿತಾಣಗಳಲ್ಲೊಂದಾದ ರಾಜಾಸೀಟ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪ್ರವಾಸಿಗರು ವರ್ಷಾಂತ್ಯದ ಸೂರ್ಯಾಸ್ಥಮಕ್ಕಾಗಿ ಕಾದು ಕುಳಿತಿದ್ದರು. ಕೆಂಬಣ್ಣ ಚೆಲ್ಲುತ್ತಾ ಬೆಟ್ಟ ಶ್ರೇಣಿಗಳ ನಡುವೆ ನೇಸರ ಮರೆಯಾಗುವ ಸಂದರ್ಭ ಮಂಗಳವಾರ ಸಂಜೆ ಪ್ರವಾಸಿಗರು ಏಕಕಾಲದಲ್ಲಿ 2024ಕ್ಕೆ ಗುಡ್ ಬೈ ಹೇಳುವ ಮೂಲಕ ವರ್ಷಾಂತ್ಯದ ನೇಸರನನ್ನು ಬೀಳ್ಕೊಟ್ಟರು.

ಪ್ರಕೃತಿಯ ಮಡಿಲಲ್ಲಿ ಜಾರುತ್ತಿದ್ದ ಸೂರ್ಯನ ವಿಹಂಗಮ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಮೊಬೈಲ್, ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹೊಸ ವರ್ಷಾಚರಣೆ ಸಂಭ್ರಮಿಸಲು ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡು ಬಂತು.

ರಸ್ತೆ ಬದಿ, ಪ್ರವಾಸಿ ತಾಣಗಳು, ಫಾಲ್ಸ್ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಪಾರ್ಟಿ ಮಾಡದಂತೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿತ್ತು. ಪ್ರವಾಸಿಗರು ತಂಗುವ ಸ್ಥಳದಲ್ಲಿ ವರ್ಷಾಚರಣೆ ಆಚರಿಸಬೇಕು. ಅಲ್ಲಿಯೂ ಅಕ್ಕಪಕ್ಕದವರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದರು.

ಅಂತಹ ಪ್ರಕರಣ ಗೊತ್ತಾದರೆ ಹೋಂಸ್ಟೇ ರೆಸಾರ್ಟ್ ಗಳ ಪರವಾನಗಿ ಶಾಶ್ವತ ರದ್ದಾಗುತ್ತದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.