ಮಡಿಕೇರಿ: ಶ್ರೀ ಆದಿ ಶಂಕರಾಚಾರ್ಯ ಜಯಂತಿ

| Published : May 02 2025, 11:46 PM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಡಿಕೇರಿ ಗಾಂಧಿ ಭವನದಲ್ಲಿ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆದಿ ಶಂಕರಾಚಾರ್ಯರು ಕೇರಳದ ಕಾಲಡಿಯ ಪೂರ್ಣ ನದಿ ತೀರದಲ್ಲಿ ಒಂದು ಸರಳವಾದ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಶಿಶು ಹಾಗೂ ಅವರು ಸೌಂದರ್ಯ ಲಹರಿಯಲ್ಲಿ ದ್ರಾವಿಡ ಶಿಶು ಎಂದು ಕರೆದುಕೊಳ್ಳುತ್ತಾರೆ ಎಂದು ಆಧ್ಯಾತ್ಮಿಕ ಚಿಂತಕ ಯಸಳೂರು ಉದಯ್ ಕುಮಾರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆದಿ ರಂಗ, ಮಧ್ಯ ರಂಗ, ಅಂತರಂಗ ಮೂರು ರಂಗನಾಥಗಳಿವೆ. ಕಾವೇರಿಯನ್ನು ಫಲ ಮತ್ತು ಬೆಳಕನ್ನು ಕೊಡುವ ಮಹಾತಾಯಿ ಎಂದು ಹೇಳುತ್ತಾರೆ. ಫಲ ಎಂದರೆ ಅನ್ನ, ಇಡೀ ಕರ್ನಾಟಕ, ತಮಿಳುನಾಡಿನಲ್ಲಿ ಕಾವೇರಿ ತಾನು ಹರಿದು ಕಡಲನ್ನು, ಸಮುದ್ರವನ್ನು ಸೇರುವ ವರೆಗೆ ಹನಿ ಹನಿ ನೀರಿಗೆ ತೆನೆ ತೆನೆ ಭತ್ತವನ್ನು ಬೆಳೆಯುತ್ತಾರೆ. ಆ ಅನ್ನವನ್ನು ತಿಂದವರು ಬಲವನ್ನು ಬೆಳೆಸುತ್ತಾರೆ ಎಂದು ಹೇಳಿದರು.ಪತ್ರಕರ್ತ ಬಿ.ಜಿ.ಅನಂತಶಯನ ಮಾತನಾಡಿ, ಶಂಕರಾಚಾರ್ಯರ ಬೋಧನೆಯ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅದಕ್ಕೆ ಸಾರ್ಥಕತೆ ಇರುತ್ತದೆ. ವ್ಯಕ್ತಿಯಾಗಿ ವ್ಯಕ್ತಿತ್ವವನ್ನು ಇಟ್ಟುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಮತ್ತು ಆಧ್ಯಾತಿಕತೆಯಲ್ಲಿ ಸಹ ತೊಡಗಿಸಿಕೊಳ್ಳಬೇಕು. ಆದಿ ಶಂಕರಾಚಾರ್ಯರು ೮ನೇ ಶತಮಾನದಲ್ಲಿ ಜೀವಿಸಿದಂತಹ ಅತ್ಯಂತ ಪ್ರಸಿದ್ಧವಾದಂತಹ ಒಬ್ಬ ತತ್ವಜ್ಞಾನಿ ಎಂದರು.ಮಡಿಕೇರಿ ಬ್ರಾಹ್ಮಣ ಸಮಾಜದ ಎಸ್.ಎಸ್.ಸಂಪತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.