ಚೆಟ್ಟಳ್ಳಿ ಕೊಡವ ಸಮಾಜ ಕೈಲ್ ಪೊಳ್ದ್‌ ಒತ್ತೊರ್ಮೆ ಕೂಟ

| Published : Sep 23 2024, 01:32 AM IST / Updated: Sep 23 2024, 01:33 AM IST

ಸಾರಾಂಶ

ಚೆಟ್ಟಳ್ಳಿ ಕೊಡವ ಸಮಾಜ ವತಿಯಿಂದ 4ನೇ ವರ್ಷದ ಮಹಾಸಭೆ ಹಾಗೂ ಕೈಲ್‌ ಪೊಳ್ದ್‌ ಒತ್ತೊರ್ಮೆ ಕೂಟ ನಡೆಯಿತು. ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ 2023-24ನೇ ಸಾಲಿನ 4ನೇ ವರ್ಷದ ಮಹಾಸಭೆ ಹಾಗೂ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಿತು.

ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವರು ಮುಂದೆ ಬಂದರೆ‌‌ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಕೊಡಗಿನ ಹಬ್ಬ ಹರಿದಿನಗಳನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು, ಕೊಡಗಿನ ಜಾಗವನ್ನು ಮಾರಾಟ ಮಾಡುವುದು ನಿಂತರೆ ಮಾತ್ರ ಕೊಡಗು ಉಳಿಯಲು ಸಾದ್ಯ ಎಂದರು.

ಕಳೆದ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಲೆಕ್ಕಪತ್ರ ವರದಿಯನ್ನು ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ ಓದಿ ಅಂಗಿಕರಿಸಲಾಯಿತು.

ಬಲ್ಲಾರಂಡ ರಾಜಪ್ಪ ಮೋಟಯ್ಯ, ಮುಳ್ಳಂಡ ಮಾಯಮ್ಮ ತಮ್ಮಯ್ಯ, ಪುತ್ತರಿರ ರಾಬಿನ್ ಚಂಗಪ್ಪ ಅವರನ್ನು ಸಮಾಜದ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿ ಹಲವು ಕಾರ್ಯಕ್ರಮವನ್ನು ಮಾಡುತ್ತಿದ್ದ ಬಗ್ಗೆ ಸಭೆಯಲ್ಲಿ‌ ಪ್ರಶಂಸಿಸಲಾಯಿತು.

ಸನ್ಮಾನ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾದ ಚೆಟ್ಟಳ್ಳಿ ಕೊಡವ ಸಮಾಜದ ಸದಸ್ಯ ಪುತ್ತರಿರ ಪಪ್ಪುತಿಮಯ್ಯ ಅವರನ್ನು ಸಮಾಜವತಿಯಿಂದ ಸನ್ಮಾನಿಲಾಯಿತು. ಸಮಾಜದ ನಿರ್ದೇಶಕ ಬಟ್ಟೀರ ರಕ್ಷು ಕಾಳಪ್ಪ ವಂದಿಸಿದರು.

ನಂತರದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸದಸ್ಯ ಹಾಗೂ ವಾಯುಪಡೆಯ ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಸಾಂಪ್ರದಾಯಿಕ ಆದ್ಧ ಪೂಜೆ ಹಾಗೂ ಗುರು ಕಾರೋಣನಿಗೆ ಮೀದಿನೀರಿಟ್ಟು ಎಲ್ಲರಿಗೂ ಒಳಿತನ್ನು ಮಾಡಲೆಂದು ಆಶಿಸಿದರು. ಬಿದ್ದಂಡ‌ ಮಾದಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೈಲ್ ಪೊಳ್ದ್ ಒತ್ತೊರ್ಮೆ ಕೂಟಕ್ಕೆ ಚಾಲನೆ ನೀಡಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ ನೆರವೇರಿತು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ನಿರ್ದೇಶಕರಾದ ಬಿದ್ದಂಡ ಮಾದಯ್ಯ, ಬಟ್ಡೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಕಡೇಮಡ ವಿನ್ಸಿ ಅಪ್ಪಯ್ಯ, ಅಡಿಕೇರ ಶಾಂತಿ ಜಯ, ಕೆಚ್ಚಟ್ಟೀರ ರತಿ ಕಾರ್ಯಪ್ಪ ಹಾಜರಿದ್ದರು.