ಸಾರಾಂಶ
ಕುಷ್ಟಗಿ: ಮಡಿವಾಳ ಮಾಚಿದೇವರು ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತ ಕಾಣಿಕೆ ನೀಡಿದ್ದಾರೆ ಎಂದು ಗ್ರಾಪಂ ಸದಸ್ಯ ಉಮೇಶ ಮಡಿವಾಳರ ಹೇಳಿದರು.ತಾಲೂಕಿನ ಕೇಸೂರು ಗ್ರಾಪಂ ಕಾರ್ಯಾಲಯದಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯವೆಂದು ತೋರಿಸಿಕೊಟ್ಟಿದ್ದಾರೆ. ಮಾಚಿದೇವರು ಸುಮಾರು 354 ವಚನಗಳನ್ನು ಬರೆದಿದ್ದಾರೆ ಎಂದರು.ಈ ಸಂದರ್ಭದಲ್ಲಿ ವೀರಯ್ಯ ಮಳಿಮಠ, ಶುಖಮುನಿ ಈಳಗೇರ, ಬಸವರಾಜ ಜಲಕಮಲದಿನ್ನಿ, ಶೇಖಪ್ಪ ಪೂಜಾರ, ಮಲ್ಲಿಕಾರ್ಜುನಗೌಡ ಪಾಟೀಲ, ಈರನಗೌಡ ಟೆಂಗುಂಟಿ, ನೀಲಪ್ಪ ರಾಠೋಡ, ಯಂಕಪ್ಪ ದಾಸರ, ರಮೇಶ ಗಡಾದ, ಗುರುನಗೌಡ ಪಾಟೀಲ, ಅಮರೇಶ ಗೋನಾಳ, ಬಸನಗೌಡ ಗೌಡರ ಸೇರಿದಂತೆ ಇತರರು ಇದ್ದರು.