12ನೇ ಶತಮಾನದ ಶಿವಶರಣರಲ್ಲಿ ಒಬ್ಬರಾದ ಶ್ರೀ ಮಡಿವಾಳ ಮಾಚಿದೇವ ಅವರು ಖಡ್ಗವನ್ನು ಹಿಡಿದು ಹೋರಾಟ ಮಾಡಿ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ವೀರ ಮಡಿವಾಳ ಮಾಚಿದೇವರಾಗಿದ್ದಾರೆ. ಇಂತಹ ಮಹಾನ್ ಶರಣನಿಂದ ವಚನ ಸಾಹಿತ್ಯ ಉಳಿದು ಇಂದಿಗೂ ಜೀವಂತವಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.

- ಹಿರೇಮಳಲಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ

- - -

ಚನ್ನಗಿರಿ: 12ನೇ ಶತಮಾನದ ಶಿವಶರಣರಲ್ಲಿ ಒಬ್ಬರಾದ ಶ್ರೀ ಮಡಿವಾಳ ಮಾಚಿದೇವ ಅವರು ಖಡ್ಗವನ್ನು ಹಿಡಿದು ಹೋರಾಟ ಮಾಡಿ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ವೀರ ಮಡಿವಾಳ ಮಾಚಿದೇವರಾಗಿದ್ದಾರೆ. ಇಂತಹ ಮಹಾನ್ ಶರಣನಿಂದ ವಚನ ಸಾಹಿತ್ಯ ಉಳಿದು ಇಂದಿಗೂ ಜೀವಂತವಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಶನಿವಾರ ತಾಲೂಕಿನ ಹಿರೇಮಳಲಿ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಶಾಸಕನಾಗಿದ್ದ ಸಂದರ್ಭ ಚನ್ನಗಿರಿ ಪಟ್ಟಣ ಮತ್ತು ನಲ್ಲೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿಕೊಳ್ಳಲು ನಿವೇಶನಗಳನ್ನು ನೀಡಿದ್ದೆ. ಕೋಗಲೂರು ಗ್ರಾಮದ ದೇವಾಲಯದ ಅಭಿವೃದ್ಧಿಗೆ ಅನುಧಾನ ನೀಡಿದ್ದೆ. ಮಡಿವಾಳ ಸಮಾಜಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ಇರಲಿ ಬಿಡಲಿ ಈ ಸಮಾಜಕ್ಕೆ ಕೈಲಾದ ಕೆಲಸ ಮಾಡಿಕೊಡುತ್ತೇನೆ ಎಂದರು.

ಜೀವವೈವಿಧ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್ ಮಾತನಾಡಿ, ಸಮಾಜದ ಸಂಘಟನೆಗೆ ಇಂತಹ ಜಯಂತ್ಯುತ್ಸವಗಳು ಸಹಕಾರಿಯಾಗಿವೆ. ಮಾಚಿದೇವ ಶರಣರ ವಿಚಾರಧಾರೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.

ತುಮ್ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, ಯಾವುದೇ ಸಮಾಜ ಪ್ರಗತಿಯಾಗಲು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಮಡಿವಾಳ ಸಮುದಾಯದವರು ಮಕ್ಕಳಿಗೆ ಉತ್ತಮ, ಉನ್ನಡ ಶಿಕ್ಷಣ ಕಲ್ಪಿಸಲು ಶ್ರಮಿಸಬೇಕು ಎಂದರು.

ಸಮಾರಂಭಕ್ಕೂ ಮುನ್ನ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿಟ್ಟು ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಡಿವಾಳ ಮಾಚಿದೇವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಹಾಂತೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ, ಜಿಪಂ ಮಾಜಿ ಸದಸ್ಯ ಎಂ.ಲೋಕೇಶ್, ತಾಪಂ ಮಾಜಿ ಸದಸ್ಯ ಮಾವಿನಕಟ್ಟೆ ಶ್ರೀಕಾಂತ್, ಜಿಲ್ಲಾ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯರಂಬಳ್ಳಿ ಉಮಾಪತಿ, ತಾಲೂಕು ಅಧ್ಯಕ್ಷ ಕೆ.ಎಚ್. ಗುಡ್ಡಪ್ಪ, ಪ್ರಾಚಾರ್ಯ ಡಿ.ಆರ್. ಹಾಲಸಿದ್ದಪ್ಪ, ಬಸವರಾಜಪ್ಪ, ಸುಕನ್ಯಾ ನಾಗರಾಜ್, ರಮೇಶ್ ಕುಮಾರ್, ಕೃಷ್ಣಮೂರ್ತಿ, ಜಯಪ್ಪ, ಸಮಾಜ ಬಾಂಧವರು ಹಾಜರಿದ್ದರು.

- - -

-7ಕೆಸಿಎನ್‌ಜಿ3.ಜೆಪಿಜಿ:

ಚನ್ನಗಿರಿ ತಾಲೂಕಿನ ಹಿರೇಮಳಲಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.