ಸಾರಾಂಶ
ಮಾಗಡಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂಕು ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಕಳೆದ ಬಾರಿ ಫಲಿತಾಂಶಕ್ಕಿಂತಲೂ ಕಡಿಮೆ ಫಲಿತಾಂಶ ಬಂದಿದ್ದು ಈ ಬಾರಿ ಶೇಕಡ 71.14ರಷ್ಟು ತಾಲೂಕುವಾರು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.2024ರ ಫಲಿತಾಂಶದಲ್ಲಿ ಮಾಗಡಿ ತಾಲೂಕು 8.36ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ 71.14ಕ್ಕೆ ಇಳಿದಿದೆ. ಅನುದಾನ ರಹಿತ ಪ್ರೌಢಶಾಲೆಯಲ್ಲಿ ಸಿಎನ್‌ಎಸ್ ದೋಣಕುಪ್ಪೆ ಶಾಲೆ, ವೆಂಕಟ್ ಇಂಟರ್‌ನ್ಯಾಷನಲ್ ಜಮಾಲ್ ಸಾಬ್ ಪಾಳ್ಯ ಶಾಲೆ, ಬಾಲಾಜಿ ಪ್ರೌಢಶಾಲೆ, ಬ್ರಿಲಿಯಂಟ್ ವ್ಯಾಲಿ ಶಾಲೆ, ಸೋಲೂರು ಶೇ. 100 ಫಲಿತಾಂಶ ಪಡೆದಿವೆ.
ಸರ್ಕಾರಿ ಶಾಲೆಗಳು ಶೇ. 71.6%, ಅನುದಾನಿತ 58.48%, ಅನುದಾನ ರಹಿತ 87.62% ಫಲಿತಾಂಶ ಬಂದಿದ್ದು ಒಟ್ಟು ತಾಲೂಕಿಗೆ ಶೇ.71.14ರಷ್ಟು ಫಲಿತಾಂಶದಿಂದ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.ಅತಿ ಹೆಚ್ಚು ಅಂಕ ಪಡೆದವರು: ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲೂಕಿನ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದು ಮಾಗಡಿ ಪಟ್ಟಣದ ವಾಸವಿ ಶಾಲೆಯ ಟಿ.ಎಚ್.ಯತಿಕಾ 623, ಶೇ.99.68, ಕುದೂರು ಗುರುಕುಲ ವಿದ್ಯಾಮಂದಿರ ಶಾಲೆಯ ಯವನಶ್ರೀ 623, ಶೇ.99.68, ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಸವಿ ಶಾಲೆಯ ಜಿ.ಎಸ್.ಆದಿತ್ಯ ಶಮಿತ್ 622 ಶೇ. 99.52 ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಾಸವಿ ಶಾಲೆಯ ಡಿ.ರಚನಾ 621 ಶೇ.99.36 ಅಂಕ ಪಡೆದು 3ನೇ ಸ್ಥಾನ ಗಳಿಸಿದ್ದಾರೆ. ಕುದೂರು ನವ ಕರ್ನಾಟಕ ಪಬ್ಲಿಕ್ ಶಾಲೆಯ ವಿನುತಾ 618 ಶೇಕಡ 98.88 ಅಂಕ ಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಮಾಜಿ ಶಾಸಕ ಎ. ಮಂಜುನಾಥ್ ಅಭಿನಂದನೆ ಸಲ್ಲಿಸಿದ್ದಾರೆ.