ಸಾರಾಂಶ
ಮಾಗಡಿ: ಶ್ರೀ ರಂಗನಾಥಸ್ವಾಮಿ ದನಗಳ ಜಾತ್ರೆ ಆರಂಭವಾಗಿದ್ದು ಈ ಬಾರಿ ಬಿರು ಬಿಸಿಲಿನ ನಡುವೆಯೂ ದನಗಳ ಜಾತ್ರೆಗೆ ಅದ್ಧೂರಿ ಆರಂಭವಾಗಿದೆ.
ಮಾಗಡಿ: ಶ್ರೀ ರಂಗನಾಥಸ್ವಾಮಿ ದನಗಳ ಜಾತ್ರೆ ಆರಂಭವಾಗಿದ್ದು ಈ ಬಾರಿ ಬಿರು ಬಿಸಿಲಿನ ನಡುವೆಯೂ ದನಗಳ ಜಾತ್ರೆಗೆ ಅದ್ಧೂರಿ ಆರಂಭವಾಗಿದೆ.
ಯುಗಾದಿ ಹಬ್ಬ ಮುಗಿಸಿಕೊಂಡು ಕೆಲ ರೈತರು ರಾಸುಗಳೊಂದಿಗೆ ಜಾತ್ರೆಗೆ ಆಗಮಿಸುತ್ತಿದ್ದು, ಮತ್ತಷ್ಟು ರಾಸುಗಳು ಹೊಸತಡಕು ಮುಗಿಸಿಕೊಂಡು ಆಗಮಿಸಲಿದ್ದು ಈ ಬಾರಿ ಬೇಸಿಗೆ ತಾಪಮಾನ ಹೆಚ್ಚಾಗಿದ್ದರೂ ತಮ್ಮ ರಾಸುಗಳನ್ನು ಮಾರಾಟ ಮಾಡಲು ಹೊಸ ರಾಸುಗಳನ್ನು ಕೊಂಡುಕೊಳ್ಳಲು ಮಾಗಡಿ ದನಗಳ ಜಾತ್ರೆ ಹೆಸರುವಾಸಿಯಾಗಿದೆ. ಒಂದು ವಾರ ನಡೆಯುವ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ರಾಸುಗಳನ್ನು ತಂದಿದ್ದು ಭರ್ಜರಿ ಜಾತ್ರೆ ಪ್ರಾರಂಭವಾಗಿದೆ.ಉಚಿತ ನೀರಿನ ವ್ಯವಸ್ಥೆ: ಮಾಗಡಿ ದನಗಳ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಸ್ಥಳೀಯರು ಉಚಿತ ನೀರಿನ ವ್ಯವಸ್ಥೆ ಮಾಡಿದ್ದು ಪುರಸಭೆಯಿಂದಲೂ ಟ್ಯಾಂಕರ್‌ಗಳಲ್ಲಿ ಉಚಿತ ನೀರು ಸರಬರಾಜು ಮಾಡುತ್ತಿದ್ದು ಯಾವುದೇ ರೀತಿ ತೊಂದರೆಯಾಗದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿದೆ.
ಪಶು ಇಲಾಖೆ ಈಗಾಗಲೇ ತಾಲೂಕಾದ್ಯಂತ ಕಾಲು, ಬಾಯಿ, ಜ್ವರದ ಲಸಿಕೆ ಹಾಕಿಸುತ್ತಿದ್ದು, ವಿಶೇಷ ವೈದ್ಯರ ತಂಡ ಜಾತ್ರೆಯಲ್ಲಿ ಲಸಿಕೆ ಹಾಕಿಸಿದ ರಾಸುಗಳಿಗೆ ಸ್ಥಳದಲ್ಲೇ ಹಾಕಿಸಲು ಪಶು ಇಲಾಖೆ ಸಕಲ ರೀತಿ ಸಜ್ಜಾಗಿದೆ.ಹಳ್ಳಿಕಾರ್ ತಳಿಗೆ ಬಾರಿ ಬೇಡಿಕೆ:
ಮಾಗಡಿಯಲ್ಲಿ ನಡೆಯುವ ದನಗಳ ಜಾತ್ರೆಗೆ ಹಳ್ಳಿಕಾರ್ ತಳಿಯೇ ಆಕರ್ಷಣೀಯವಾಗಿದೆ. ಮಾಗಡಿ ಹಳ್ಳಿಕಾರ್ ತಳಿ ಕೊಂಡುಕೊಳ್ಳಲು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಾರೆ. ಮಾಗಡಿಯಲ್ಲಿ ಹಳ್ಳಿಕಾರ್ ತಳಿಯನ್ನು ಉಳಿಸಿಕೊಂಡು ಬರುತ್ತಿರುವ ಇಲ್ಲಿನ ವಿಶೇಷ. ಜಾತ್ರೆಯಲ್ಲಿ ಈ ತಳಿಯ ಪ್ರದರ್ಶನ ಹಾಗೂ ಮೇರವಣಿಗೆ ಮಾಡಿ ಮಾಗಡಿ ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಲೀಕರು ಮಾಡಿಕೊಂಡಿದ್ದು ದನಗಳ ಜಾತ್ರೆ ವೈಭವದಿಂದ ಆರಂಭವಾಗಿದೆ.ರಾಸುಗಳನ್ನು ಕೊಳ್ಳಲು ಮತ್ತು ಮಾರಾಟ ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶಗಳಿಂದಲೂ ಜಾತ್ರೆಗೆ ರೈತರು ಆಗಮಿಸಲಿದ್ದು, ಈ ಜಾತ್ರೆ ನೋಡುವುದೇ ಕಣ್ಣಿಗೆ ಹಬ್ಬ. ಯುಗಾದಿಯಿಂದ ಒಂದು ವಾರ ಅದ್ಧೂರಿ ದನಗಳ ಜಾತ್ರೆ ನಡೆಯುತ್ತಿದ್ದು ಈ ಬಾರಿ ತಾಲೂಕು ರೈತ ಸಂಘದ ವತಿಯಿಂದ ಉತ್ತಮ 10 ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ತಾಲಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದ್ದಾರೆ.
ಪೋಟೋ 10ಮಾಗಡಿ1:ಮಾಗಡಿ ಶ್ರೀರಂಗನಾಥ ಸ್ವಾಮಿ ದನಗಳ ಜಾತ್ರೆಗೆ ಸೇರಿರುವ ರಾಸುಗಳು.