ಜೆಇಇ ಮೇನ್ಸ್ ಪರೀಕ್ಷೆ: ಮಾಗನೂರು ಬಸಪ್ಪ ಪಿಯು ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್

| Published : Apr 26 2024, 12:59 AM IST / Updated: Apr 26 2024, 08:08 AM IST

examination
ಜೆಇಇ ಮೇನ್ಸ್ ಪರೀಕ್ಷೆ: ಮಾಗನೂರು ಬಸಪ್ಪ ಪಿಯು ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರದ ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ 2024ರಲ್ಲಿ ನಡೆಸಲಾದ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ದಾವಣಗೆರೆಯ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ಎಸ್. ಶ್ರೀವರುಣ್ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್‌ ಪಡೆದಿದ್ದಾರೆ.

ದಾವಣಗೆರೆ: ರಾಷ್ಟ್ರದ ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ 2024ರಲ್ಲಿ ನಡೆಸಲಾದ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ಎಸ್. ಶ್ರೀವರುಣ್ ರಾಷ್ಟ್ರಮಟ್ಟದಲ್ಲಿ 144ನೇ ರ‍್ಯಾಂಕ್‌ ಪಡೆದಿದ್ದಾರೆ.

ಎಚ್.ಆರ್. ಭರತ್ 197ನೇ ರ‍್ಯಾಂಕ್, ಬಿ.ಪಿ. ಭರತ್ 230ನೇ ರ‍್ಯಾಂಕ್, ಕೆ.ಎಲ್. ಚಂದನ 239ನೇ ರ‍್ಯಾಂಕ್, ಎಚ್.ಜಿ. ಅಲಂಕಾರ್ 264ನೇ ರ‍್ಯಾಂಕ್, ಎಂ.ಅಪೇಕ್ಷ 298ನೇ ರ‍್ಯಾಂಕ್, ಜಿ.ಶಶಿಧರ 333ನೇ ರ‍್ಯಾಂಕ್, ಸಂಜಯ್‌ಕುಮಾರ್ ಯರೆಶೀಮೆ 370ನೇ ರ‍್ಯಾಂಕ್‌ ಪಡೆದಿದ್ದಾರೆ.

500 ರ‍್ಯಾಂಕ್ ಒಳಗೆ 09 ವಿದ್ಯಾರ್ಥಿಗಳು, 2000 ರ‍್ಯಾಂಕ್ ಒಳಗೆ 13 ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಮಾಗನೂರು ಬಸಪ್ಪ ಕಾಲೇಜಿನ ಒಟ್ಟು 29 ವಿದ್ಯಾರ್ಥಿಗಳು ಜೆ.ಇ.ಇ.-ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್ವರ ಗೌಡ, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ. ಪ್ರಸಾದ್ ಎಸ್. ಬಂಗೇರ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.