ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ವತಿಯಿಂದ ಶ್ರೀ ಮಹಾ ಗಣಪತಿ ಸಂಕಷ್ಟ ಚತುರ್ಥಿ ಪ್ರಯುಕ್ತ ಶ್ರೀಮಹಾಗಣಪತಿ ಹೋಮ ಹಾಗೂ ವಿಶೇಷ ಪೂಜಾ ಮಹೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವು ಶಾಸಕ ಎಚ್.ಡಿ.ರೇವಣ್ಣ ಅವರ ಉಪಸ್ಥಿತಿಯಲ್ಲಿ ವೈಭವದಿಂದ ನಡೆಯಿತು.
ಬುಧವಾರ ಮುಂಜಾನೆ ಶ್ರೀ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ಶ್ರೀ ಗಣಪತಿ ಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ನೆರವೇರಿಸಲಾಯಿತು. ವಿಶೇವವಾಗಿ ರಚಿಸಿದ್ದ ಮಂಡಲದ ಪಕ್ಕದಲ್ಲಿ ನಿರ್ಮಿಸಿದ್ದ ಹೋಮ ಕುಂಡಕ್ಕೆ ಪುಣ್ಯಹವಾಚನೆ, ಕಳಸ ಪೂಜೆ, ಪಂಚಗವ್ಯ, ಅಗ್ನಿ ಪ್ರತಿಷ್ಠೆ ಮಾಡಲಾಯಿತು. ನಂತರ ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ನಕ್ಷತ್ರ ಹೋಮ, ಆಯುಷ್ಯ ಹೋಮ ಹಾಗೂ ಪೂರ್ಣಹುತಿ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀಥ ಪ್ರಸಾದ ವಿನಿಯೋಗ ಹಾಗೂ ಪ್ರಸಾದ ರೂಪದಲ್ಲಿ ೧೫ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಶ್ರೀ ರಾಘವೇಂದ್ರ ಮಠದ ಆಡಳಿತಾಧಿಕಾರಿ ಶ್ರೀಷಾಚಾರ್ ನೇತೃತ್ವದಲ್ಲಿ ರಮೇಶ್ ಐತಾಳ್, ಪವನ್, ರಂಗಣ್ಣ, ರಾಮಮೂರ್ತಿ, ಮುರಳಿ, ಮಧು ಹಾಗೂ ಆಧ್ಯಾತ್ಮ ಕಾರ್ಯಾಲಯದ ವೇದ ವಿದ್ಯಾರ್ಥಿಗಳು ಪೂಜಾ ಕೈಂಕರ್ಯ ನೆರವೇರಿಸಿದರು. ತಹಸೀಲ್ದಾರ್ ರೇಣುಕುಮಾರ್, ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷ ಟಿ.ಶಿವಕುಮಾರ್, ಕಾರ್ಯಧ್ಯಕ್ಷ ಪುಟ್ಟಸ್ವಾಮಪ್ಪ, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಉಪಾಧ್ಯಕ್ಷೆ ಸಾವಿತ್ರಮ್ಮ, ಸಮಿತಿಯ ವೈ.ವಿ.ಚಂದ್ರಶೇಖರ್, ದೊಡ್ಡಮಲ್ಲೇಗೌಡ, ಎಚ್.ವಿ.ಸುರೇಶ್ ಕುಮಾರ್, ಎಚ್.ಟಿ.ನರಸಿಂಹಶೆಟ್ಟಿ, ಎಸ್.ಗೋಕುಲ್, ಎಚ್.ಎಸ್.ಸುದರ್ಶನ್, ಪುರಸಭೆ ಮಾಜಿ ಅಧ್ಯಕ್ಷರಾದ ಸುದಾನಳಿನಿ ದೊಡ್ಡಮಲ್ಲೇಗೌಡ, ಕೆ.ಶ್ರೀಧರ್, ಜ್ಯೋತಿ ಮಂಜುನಾಥ್, ಸದಸ್ಯರಾದ ಎ.ಜಗನ್ನಾಥ್, ಶಿವಣ್ಣ, ಮಧು ಹಾಗೂ ಕುಮಾರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಪಿಎಚ್‌ಇ ವೆಂಕಟೇಶ್, ಅಕ್ರಾಂತ್ ರವಿಕುಮಾರ್, ಎಚ್.ಸಿ.ಅಶೋಕ್, ಮುರಳಿಧರ ಗುಪ್ತ, ಕಾದಲನ್ ಕೃಷ್ಣ, ಡಿಶ್ ಗೋವಿಂದ, ಶಿವಕುಮಾರ್, ಶಂಕರ್, ಕಾಂತರಾಜು, ನಿ. ಯೋಧ ಈಶ್ವರ್, ಮಂಜುನಾಥ್, ಕಿಶೋರ್, ಗುರುರಾಜ್, ಕಾಂತರಾಜು, ಶಿವಾನಂದ, ಎಚ್.ಬಿ.ವೆಂಕಟೇಶ್, ರಾಧಾಕೃಷ್ಣ, ವಿಶ್ವನಾಥ್, ಎಚ್.ವಿ.ರವಿಕುಮಾರ್ ಹಾಗೂ ಮಂಜುನಾಥ್, ಬಸವರಾಜು, ಕೃಷ್ಣಪ್ಪ, ಇತರರು ಭಾಗವಹಿಸಿದ್ದರು.