ಮಹಾ ನಾಯಕ ಕ್ರಿಕೆಟ್ ಪಂದ್ಯಾವಳಿ : ಜ್ಯೋತಿ ಬಾಪುಲೆ ಚಾಂಪಿಯನ್, ಜೈ ಭೀಮ್ ದ್ವಿತೀಯ

| Published : Feb 28 2025, 12:47 AM IST

ಮಹಾ ನಾಯಕ ಕ್ರಿಕೆಟ್ ಪಂದ್ಯಾವಳಿ : ಜ್ಯೋತಿ ಬಾಪುಲೆ ಚಾಂಪಿಯನ್, ಜೈ ಭೀಮ್ ದ್ವಿತೀಯ
Share this Article
  • FB
  • TW
  • Linkdin
  • Email

ಸಾರಾಂಶ

ಪಂದ್ಯಾವಳಿಯಲ್ಲಿ ಹೋಬಳಿ ಮಟ್ಟದ 10 ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಮಡಿಕೇರಿ : ಡಾ.ಬಿ.ಆರ್.ಅಂಬೇಡ್ಕರ್ ಪ್ರೀಮಿಯರ್ ಲೀಗ್ ವತಿಯಿಂದ ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗಾಗಿ ನಡೆದ ಮಹಾ ನಾಯಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜ್ಯೋತಿ ಬಾಪುಲೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಜೈ ಭೀಮ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಪಂದ್ಯಾವಳಿಯಲ್ಲಿ ಪರಿಶಿಷ್ಟ ನಾಯಕರುಗಳ ಹೆಸರನ್ನು ಹೊಂದಿದ್ದ ಹೋಬಳಿ ಮಟ್ಟದ 10 ತಂಡಗಳು ಪಾಲ್ಗೊಂಡಿದ್ದವು.

ದಲಿತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್.ಜನಾರ್ದನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಸಮಾಜದ ಒಗ್ಗಟ್ಟಿಗೆ ಕ್ರೀಡೆ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಸಹಾಯಕ ಶಾಂತಕುಮಾರ್, ಮಾಜಿ ಸೈನಿಕ ವಿಶ್ವನಾಥ್, ಗ್ರಾ.ಪಂ. ಸದಸ್ಯ ಪ್ರಸನ್ನ, ದಲಿತ ಮುಖಂಡರಾದ ಜಗದೀಶ್, ವಸಂತ, ವೀರೇಂದ್ರ, ವೀರಭದ್ರ, ಚಂದ್ರು, ವಸಂತ, ಯುವ ಮುಖಂಡರಾದ ಇಂದ್ರೇಶ್, ಬೋಜರಾಜ್, ನಿಖಿಲ್, ಮಂಜುನಾಥ್, ಸಂತೋಷ್, ಮಂಜಣ್ಣ, ದರ್ಶನ್ ಮತ್ತಿತರರು ಪಾಲ್ಗೊಂಡಿದ್ದರು. ಜ್ಯೋತಿಬಾಪುಲೆ ತಂಡದ ಮಾಲೀಕರಾಗಿ ಜೆ.ಎಲ್.ಜನಾರ್ಧನ ಹಾಗೂ ಜೈ ಭೀಮ್ ತಂಡದ ಮಾಲೀಕರಾಗಿ ಅಭಿಷೇಕ್ ಕಾರ್ಯನಿರ್ವಹಿಸಿದರು.