ಡಾ. ಆಚಾರ್ಯ ಬುದ್ಧರಖ್ಖಿತ ಭಂತೇಜಿ ಜನ್ಮದಿನದಂದು ರಜೆ ಘೋಷಿಸಲು ಮನವಿ

| Published : Mar 16 2025, 01:52 AM IST

ಡಾ. ಆಚಾರ್ಯ ಬುದ್ಧರಖ್ಖಿತ ಭಂತೇಜಿ ಜನ್ಮದಿನದಂದು ರಜೆ ಘೋಷಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪೂಜ್ಯ ಬುದ್ಧ ರಖ್ಖಿತ ಭಂತೇಜಿ ಅವರು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ ಮತ್ತು ಪ್ರಪಂಚದಾದ್ಯಂತ ಅತ್ಯಂತ ಗೌರವಾನ್ವಿತ ಬೌದ್ಧ ಸನ್ಯಾಸಿಗಳಲ್ಲಿ ಒಬ್ಬರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುಡಾ. ಆಚಾರ್ಯ ಬುದ್ಧರಖ್ಖಿತ ಭಂತೇಜಿ ಜನ್ಮದಿನ (ಧಮ್ಮಪದ ಉತ್ಸವ) ದ ಗೌರವಾರ್ಥ ಪ್ರತಿ ವರ್ಷ ಮಾ. 14 ರಂದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಜಾ ದಿನ ಎಂದು ಘೋಷಿಸಬೇಕು ಎಂದು ಮಹಾಬೋಧಿ ಶಾಲೆಯ ಸಿಇಒ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಜಿಕ್ಮೆಟ್ ವಾಂಗ್ಡಸ್ ಜ್ಯೋತಿ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಮನವಿ ಮಾಡಿದ್ದಾರೆ.ನಗರದ ಮಹಾಬೋಧಿ ಶಾಲೆಯಲ್ಲಿ ಮಹಾಬೋಧಿ ಮೈತ್ರಿ ಮಂಡಲದ ವತಿಯಿಂದ ಏರ್ಪಡಿಸಿದ್ದ ಡಾ. ಆಚಾರ್ಯ ಬುದ್ಧರಖ್ಖಿತ ಭಂತೇಜಿಯವರ 103ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೂಜ್ಯ ಬುದ್ಧ ರಖ್ಖಿತ ಭಂತೇಜಿ ಅವರು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾ ಮತ್ತು ಪ್ರಪಂಚದಾದ್ಯಂತ ಅತ್ಯಂತ ಗೌರವಾನ್ವಿತ ಬೌದ್ಧ ಸನ್ಯಾಸಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.ಬೌದ್ಧಧರ್ಮ, ಶಿಕ್ಷಣ ಮತ್ತು ಮಾನವೀಯ ಸೇವೆಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಮತ್ತು ಏಷ್ಯಾದ ಅನೇಕ ಭಾಗಗಳಲ್ಲಿ ಅವರ ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದರು.1956ರಲ್ಲಿ ಬೆಂಗಳೂರಿನಲ್ಲಿ ಮಹಾಬೋಧಿ ಸೊಸೈಟಿಯ ಸ್ಥಾಪಕರಾಗಿ, ಅವರ ದೂರದೃಷ್ಟಿಯ ಫಲವಾಗಿ ಭಾರತದಲ್ಲಿನ 22 ಶಾಖೆ ಆರಂಭಿಸಿದರು. ಆ ಮೂಲಕ ಶಾಲೆಗಳು, ವಿಶ್ವವಿದ್ಯಾಲಯಗಳು, ಸನ್ಯಾಸಿಗಳ ತರಬೇತಿಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಮಾನವ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾಗಿ ಅವರು ಹೇಳಿದರು.----------------eom/mys/dnm/