ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ವರ್ಷ 21 ದಿನ ಮಹಾದಾಸೋಹ

| Published : Jan 05 2024, 01:45 AM IST

ಸಾರಾಂಶ

ಮಹಾದಾಸೋಹ ಸುಮಾರು 6 ಎಕರೆ ವಿಸ್ತಾರ ಪ್ರದೇಶದಲ್ಲಿ ಜರುಗಲಿವೆ. ಏಕಕಾಲಕ್ಕೆ ಸುಮಾರು 5-6 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ 15 ದಿನ ನಡೆಯುತ್ತಿದ್ದ ಮಹಾದಾಸೋಹ ಸೇವೆಯನ್ನು ಈ ವರ್ಷ 21 ದಿನಗಳಿಗೆ ವಿಸ್ತರಿಸಲಾಗಿದೆ. ರಥೋತ್ಸವ ಮುನ್ನಾದಿನ ಆರಂಭವಾಗಿ ಅಮವಾಸ್ಯೆಗೆ ಕೊನೆಗೊಳ್ಳುತ್ತಿದ್ದ ದಾಸೋಹ ಈ ವರ್ಷ ವಾರ ಮೊದಲೇ ಆರಂಭಿಸುವ ಮೂಲಕ ಸುಮಾರು 21 ದಿನ ನಡೆಯಲಿದೆ.ಜ.21ರಿಂದಲೇ ಮಹಾದಾಸೋಹ ಆರಂಭವಾಗಲಿದೆ. ಅಮವಾಸ್ಯೆಯಂದು ಕೊನೆಗೊಳ್ಳಲಿದೆ. ಅಮವಾಸ್ಯೆ ನಂತರ ದಾಸೋಹ ನಿತ್ಯ ನಿರಂತರವಾಗಿ ಇದ್ದೇ ಇರುತ್ತದೆ.6 ಎಕರೆ ವಿಸ್ತಾರ:ಮಹಾದಾಸೋಹ ಸುಮಾರು 6 ಎಕರೆ ವಿಸ್ತಾರ ಪ್ರದೇಶದಲ್ಲಿ ಜರುಗಲಿವೆ. ಏಕಕಾಲಕ್ಕೆ ಸುಮಾರು 5-6 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.ರೊಟ್ಟಿ ಕೋಣೆ: ಅಜ್ಜನ ಜಾತ್ರೆ ರೊಟ್ಟಿ ಜಾತ್ರೆಯೆಂದೇ ಪ್ರಸಿದ್ಧ. ಬೃಹಾದಾಕಾರದ 45*50 ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಭರದಿಂದ ಸಾಗಿದೆ.ನೀರಿನ ವ್ಯವಸ್ಥೆ: 70 ನೀರಿನ ನಲ್ಲಿ ಇರುವ ಎರಡು ನೀರಿನ ಕಟ್ಟೆಗಳು, 50 ನೀರಿನ ನಲ್ಲಿ ಇರುವ ಕಟ್ಟೆಯೊಂದನ್ನು ಸಿದ್ಧಪಡಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸಾದ ನಿಲಯದ ಸುತ್ತ ಪೋಲಿಸ್ ಕಣ್ಗಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ.