ಸಾರಾಂಶ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ೪೭ನೇ ವಾರ್ಷಿಕ ಮಹಾಸಭೆ ಭಾನುವಾರ ಬ್ಯಾಂಕಿನ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ಜರುಗಿತು. ಬ್ಯಾಂಕಿನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ ೧೩,೭೩,೪೩೬ ರು. ಚೆಕ್‌ನ್ನು ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ೪೭ನೇ ವಾರ್ಷಿಕ ಮಹಾಸಭೆ ಭಾನುವಾರ ಬ್ಯಾಂಕಿನ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ಜರುಗಿತು.
ಈ ಸಂದರ್ಭ ಮಾತನಾಡಿದ ಯಶ್ಪಾಲ್ ಸುವರ್ಣ, ಶೇ.15 ಡಿವಿಡೆಂಡ್ ಘೋಷಿಸಿ, ನಿರಂತರ ೧೫ ವರ್ಷಗಳಿಂದ ಅತೀಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ. ಮುಂದೆ ರಾಜ್ಯಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಖೆ ಆರಂಭಿಸುವ ಬಗ್ಗೆ ಆಡಳಿತ ಮಂಡಳಿಯು ಕಾರ್ಯಪ್ರವೃತ್ತವಾಗಿದೆ ಎಂದರು.ಬ್ಯಾಂಕಿನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ ೧೩,೭೩,೪೩೬ ರು. ಚೆಕ್‌ನ್ನು ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಹಸ್ತಾಂತರಿಸಿದರು.ಮುಖ್ಯ ಅತಿಥಿಯಾಗಿದ್ದ ಡಾ. ಜಿ. ಶಂಕರ್ ಮಾತನಾಡಿ, ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಿರಂತರವಾಗಿ ಲಾಭದಾಯಕ ಸಂಸ್ಥೆಯಾಗಿ ಮೂಡಿಬರುತ್ತಿರುವುದು ಅಭಿನಂದನಾರ್ಹವಾಗಿದ್ದು, ಬ್ಯಾಂಕಿಗೆ ಸದಾ ಸಹಕಾರವನ್ನು ವ್ಯಕ್ತಪಡಿಸಿದರು.ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಸುವರ್ಣ ಅವರನ್ನು ಅಭಿನಂದಿಸಲಾಯಿತು. ೨೧೬ ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವದಾಖಲೆ ಮಾಡಿರುವ ವಿದುಷಿ ದೀಕ್ಷಾ, ಯೋಗರತ್ನ ಪುರಸ್ಕೃತೆ ತನುಶ್ರೀ ಪಿತ್ರೋಡಿ, ಆಪತ್ಭಾಂದವ ಈಶ್ವರ ಮಲ್ಪೆ, ರಾಷ್ಟ್ರಮಟ್ಟದ ಬಾಕ್ಸಿಂಗ್‌ಪಟು ಮಾನ್ಸಿ ಜೆ. ಸುವರ್ಣ, ಸಿಎ ಪರೀಕ್ಷೆ ತೇರ್ಗಡೆಗೊಂಡ ಶಮಾ ಕುಂದರ್, ಶ್ರೇಯಾ ಶಶಿಧರ್ ಹಾಗೂ ರ್‍ಯಾಂಕ್ ವಿಜೇತೆ ಚೈತ್ರಾಲಿ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೀನುಗಾರ ಮುಖಂಡರಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ರಾಮಚಂದ್ರ ಕುಂದರ್, ಶಿವಪ್ಪ ಟಿ. ಕಾಂಚನ್, ಮೋಹನ್ ಬೆಂಗ್ರೆ, ಉದಯ ಹಟ್ಟಿಯಂಗಡಿ, ಅನಿಲ್ ಬೆಂಗ್ರೆ, ಚೇತನ್ ಬೆಂಗ್ರೆ, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಭಾಸ್ಕರ ಬೈಕಂಪಾಡಿ ಭಾಗವಹಿಸಿದ್ದರು.ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕರಾದ ಶಶಿಕಾಂತ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ವಿನಯ ಕರ್ಕೇರ, ನಾರಾಯಣ ಅಮೀನ್, ಸುರೇಶ್ ಬಿ ಕರ್ಕೇರ, ಶಿವರಾಮ ಕುಂದರ್, ವನಜಾ ಜೆ ಪುತ್ರನ್, ವನಜ ಕಿದಿಯೂರು, ಸದಾನಂದ ಬಳ್ಕೂರು, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್.ಕೆ., ಸಿಎ ಅಜಿತ್ ಕುಮಾರ್ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ್ ಉಪಸ್ಥಿತರಿದ್ದರು...........................1000 ಕೋಟಿ ರು. ಠೇವಣಿ ಗುರಿ
ಮಹಾಲಕ್ಷ್ಮೀ ಬ್ಯಾಂಕ್ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ೧೦೦ ಕೋಟಿ ರು. ಪಾಲು ಬಂಡವಾಳ, ೧೦೦೦ ಕೋಟಿ ಠೇವಣಿ ಸಂಗ್ರಹ ಹಾಗೂ ೧ ಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ರಾಜ್ಯದ ಮಾದರಿ ಪಟ್ಟಣ ಸಹಕಾರಿ ಬ್ಯಾಂಕಾಗಿ ಗುರುತಿಸಿಕೊಳ್ಳುವ ಧ್ಯೇಯ ಆಡಳಿತ ಮಂಡಳಿ ಹೊಂದಿದೆ ಎಂದು ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಹೇಳಿದರು.