ಸಾರಾಂಶ
₹65.04 ಲಕ್ಷ ಲಾಭ ಗಳಿಸಿದೆ. ಅಲ್ಲದೆ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯಿಂದ “ಅತ್ಯುತ್ತಮ ಸಹಕಾರ ಸಂಘ” ಪ್ರಶಸ್ತಿ
ಹುಬ್ಬಳ್ಳಿ: ನಗರದ ಮಹಾರಾಜಾ ಅಗ್ರಸೇನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ. 16ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಶನಿವಾರ ನಡೆಯಿತು.
ಸೊಸೈಟಿ ಅಧ್ಯಕ್ಷ ಅಮಿತ ವಿಜಯಕುಮಾರ ಮಹಾಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾರಾಜಾ ಅಗ್ರಸೇನ ಸೊಸಾಯಿಟಿಯು ತಮ್ಮೆಲ್ಲರ ಸಹಕಾರದಿಂದ ಅಭಿವೃದ್ದಿ ಹೊಂದುತ್ತಿದ್ದು, ಮಾರ್ಚ್ 31ಕ್ಕೆ ₹47.07 ಕೋಟಿ ದುಡಿಯುವ ಬಂಡವಾಳ, ₹ 34.30 ಕೋಟಿ ಠೇವಣಿ, ಅಲ್ಲದೆ ₹10.94 ಕೋಟಿ ಸಾಲ ನೀಡಿದೆ. ₹65.04 ಲಕ್ಷ ಲಾಭ ಗಳಿಸಿದೆ. ಅಲ್ಲದೆ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯಿಂದ “ಅತ್ಯುತ್ತಮ ಸಹಕಾರ ಸಂಘ” ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು.ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತದ ಉಪಾಧ್ಯಕ್ಷೆ ಗೀತಾ ಎಸ್ ಕುಂಬಿ ಮಾತನಾಡಿ, ಸೊಸೈಟಿ ಧಾರವಾಡ ಜಿಲ್ಲೆಯಲ್ಲಿಯೇ ಒಂದು ಮಾದರಿಯಾಗಿದೆ. ಅಲ್ಪ ಅವಧಿಯಲ್ಲಿ ₹47.07 ಕೋಟಿ ದುಡಿಯುವ ಬಂಡವಾಳ ಹೊಂದಿ ₹65.04 ಲಕ್ಷ ಲಾಭ ಮಾಡಿದ್ದು ಸಂತೋಷದ ವಿಷಯ ಎಂದು ತಿಳಿಸಿದರು.
ಸೊಸೈಟಿ ಉಪಾಧ್ಯಕ್ಷ ಶ್ರೀ ಭರತಭೂಷಣ ಬನ್ಸಲ್ ಲಾಭ-ಹಾನಿ ಪತ್ರಿಕೆ ಹಾಗೂ ಅಢಾವೆ ಪತ್ರಿಕೆ ವಿವರ ನೀಡಿದರು. ಮುಕೇಶ ಎಲ್. ಅಗ್ರವಾಲ 2024-25ನೇ ಸಾಲಿನ ನಿವ್ವಳ ಲಾಭಾಂಶ ವಿಲೇವಾರಿ ಹಾಗೂ ಶೇ.11 ಡಿವ್ಹಿಡೆಂಡ್ ಘೋಷಿಸಿದರು.ನಿರ್ದೇಶಕಿ ಅನಿತಾ ಎಸ್. ಮಹಾಜನ, ಸುಜಿತ ಯಾದುಕಾರ, ವ್ಯವಸ್ಥಾಪಕ ಎಲ್.ಎಸ್. ಬೋಗಾರ, ಸಂಸ್ಥಾಪಕ ಅಧ್ಯಕ್ಷ ಸುಭಾಶ ಆರ್. ಮಹಾಜನ ಮಾತನಾಡಿದರು.