ಜಾತಿ ರಹಿತ, ವರ್ಗರಹಿತ, ತಾರತಮ್ಯ ರಹಿತ ಸಮಾನ ಸಮಾಜ ನಿರ್ಮಾಣ ಅಂಬೇಡ್ಕರ್ ಅವರ ಕನಸಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾನ ಸಮಾಜ ನಿರ್ಮಾಣ ಮಾಡಬೇಕಾದರೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೇ ಪಾಲಿಸುವುದು ನಮಗೆ ಇರುವ ಏಕೈಕ ದಾರಿ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಎಂ. ಅಬ್ದುಲ್ ರಹಿಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಆಡಿಯೋ ವಿಶ್ವದಲ್ಲಿ ಸಾಂಸ್ಕೃತಿಕ ಸಮಿತಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 135 ನೇ ಜನ್ಮದಿನೋತ್ಸವದ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತಿ ರಹಿತ, ವರ್ಗರಹಿತ, ತಾರತಮ್ಯ ರಹಿತ ಸಮಾನ ಸಮಾಜ ನಿರ್ಮಾಣ ಅಂಬೇಡ್ಕರ್ ಅವರ ಕನಸಾಗಿತ್ತು. ಅದಕ್ಕಾಗಿ ಅವರು ಸಂವಿಧಾನವನ್ನು ರಚಿಸಿದರು. ಸಂವಿಧಾನದಲ್ಲಿ ಇರುವ ತತ್ವಗಳು ಸಮಾನ ಸಮಾಜದ ಆಶಯಗಳನ್ನು ಹೊತ್ತಿವೆ. ಹಾಗಾಗಿ, ಸಂವಿಧಾನದ ತತ್ವಗಳನ್ನು ಪಾಲಿಸಿದರೆ ಮಾತ್ರವೇ ಅಂಬೇಡ್ಕರ್ ಅವರು ಕನಸಿದ ಸಮಾನ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಮುಖ್ಯಅತಿಥಿಯಾಗಿ ಕಾಲೇಜಿನ ರೇಷ್ಮೆಕೃಷಿ ಪ್ರಾಧ್ಯಾಪಕ ಎಂ.ಎನ್. ಶ್ರೀನಿವಾಸ್ ಮಾತನಾಡಿ, ಸಂವಿಧಾನ ಸಂಪೂರ್ಣ ಜಾರಿಯಾದರೆ ಸಮಾನತೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದರೆ, ಕೆಲವರು ಮಾತ್ರ ಸಮಾನತೆಯನ್ನು ಅನುಭವಿಸುತ್ತಾರೆ. ಇದು ವ್ಯವಸ್ಥೆಯ ದುರಂತ. ಇದು ಬದಲಾಗಬೇಕು. ಹಾಗಾಗಬೇಕಾದರೆ, ಜನರ ಮನಸ್ಥಿತಿ ಬದಲಾಗಬೇಕು.

ಆಗ ಮಾತ್ರ ಸಮ ಸಮಾಜ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಶೈಕ್ಷಣಿಕ ಡೀನ್ ಪ್ರಾಧ್ಯಾಪಕ ಶ್ರೀಪಾದ್ ಮಾತನಾಡಿ, ಜಗತ್ತಿನ ಆದರ್ಶ ಮಹಾ ಪುರುಷ ಅಂಬೇಡ್ಕರ್ ಎಂದು ಬಣ್ಣಿಸಿದರು.

ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಜಿ. ಕೀರ್ತನಾ ಮಾತನಾಡಿ, ಜಾತಿರಹಿತ ವರ್ಗರಹಿತ ಸಮಾನ ಸಮಾಜದ ಅಂಬೇಡ್ಕರ್ ಅವರ ಆಶಯಗಳ ಕುರಿತು ಅವರು ಮಾತನಾಡಿದರು. ಪತ್ರಾoಕಿತ ವ್ಯವಸ್ಥಾಪಕಿ ಆರ್. ಮೀನಾಕ್ಷಿ ಮಾತನಾಡಿದರು.ಅಧ್ಯಾಪಕ ಕೆ.ಎಲ್‌. ರಮೇಶ ಅಂಬೇಡ್ಕರ್ ಕುರಿತು ಗೀತೆ ಹಾಡಿದರು. ಕ್ರೀಡಾ ಕಾರ್ಯದರ್ಶಿ ಕೆ.ಎಸ್‌. ಲಕ್ಷ್ಮೀ ನಿರೂಪಿಸಿದರು. ಡಿ. ರಮ್ಯಾ ಸ್ವಾಗತಿಸಿದರು, ಜೆ. ಪೂಜಿತಾ ವಂದಿಸಿದರು.ಸಾಂಸ್ಕೃತಿಕ ಸಮಿತಿಯ ಸಂಚಾಲಕ ಗೋವಿಂದರಾಜು, ಖಜಾಂಚಿ ಎನ್. ಬೃಂದಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎ. ಬೃಂದಾ, ವಿದ್ಯಾರ್ಥಿ ಸಂಸತ್ತಿನ ಎಸ್. ಪೂಜಾ, ಎಚ್.ವಿ. ತೇಜಸ್ವಿನಿ, ಎನ್. ನವ್ಯಶ್ರೀ, ಮಮತಾ ಎಂ. ಯತ್ನಟ್ಟಿ, ಜೆ. ಜರೀನಾ, ಟಿ.ಎಚ್. ಅಮೃತಾ, ಸಂಜನಾ ಮತ್ತು ಸಂಜನಾ, ಆಫ್ರಿನ್, ಎನ್.ಸಿಸಿ, ಎನ್.ಎಸ್.ಎಸ್, ರೆಂಜರ್ಸ್, ಕ್ರೀಡೆ ಪದಾಧಿಕಾರಿಗಳು, ಅಧ್ಯಾಪಕರು ಅಧ್ಯಾಪಕೇತರ , ವಿದ್ಯಾರ್ಥಿಗಳು ಇದ್ದರು.