ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಮಹರ್ಷಿ ವಾಲ್ಮೀಕಿ ಋಷಿಗಳು ಶ್ರೀರಾಮನ ಬದುಕಿನ ಆದಶ೯ ಮೌಲ್ಯ, ಸಾಹಸಗಳನ್ನು ಪ್ರತಿಬಿಂಬಿಸಿ ಎಲ್ಲರಿಗೂ ಸ್ಫೂರ್ತಿಯಾಗಬಲ್ಲ. ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಜ್ಞಾನದ ಖನಿಜವಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಹರ್ಷಿ ವಾಲ್ಮೀಕಿ ಋಷಿಗಳು ಶ್ರೀರಾಮನ ಬದುಕಿನ ಆದಶ೯ ಮೌಲ್ಯ, ಸಾಹಸಗಳನ್ನು ಪ್ರತಿಬಿಂಬಿಸಿ ಎಲ್ಲರಿಗೂ ಸ್ಫೂರ್ತಿಯಾಗಬಲ್ಲ. ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಜ್ಞಾನದ ಖನಿಜವಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ೨೪,೦೦೦ ಶ್ಲೋಕ್‌ಗಳು ಹಾಗೂ ೪,೮೦,೦೦೨ ಪದಗಳಿಂದ ಕೂಡಿದ ರಾಮಾಯಣವು ನಮ್ಮ ಭಾರತದ ಮಹಾಕಾವ್ಯಗಳಲ್ಲಿ ಒಂದು ಎಂದು ಹೇಳುವುದು ಭಾರತೀಯರಾದ ನಮಗೆ ತುಂಬಾ ಅಭಿಮಾನದ ಸಂಗತಿ ಎಂದರು.ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಶರದ್ ಪೂರ್ಣಿಮೆಯ ದಿನದಂದು ಆಚರಿಸಲ್ಪಡುವ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ದಿನವಾದ ಇಂದು ನಾವೆಲ್ಲ ನಮ್ಮಲ್ಲಿರುವ ಅಂಧಕಾರ ಮತ್ತು ಅಜ್ಞಾನವನ್ನು ಹೋಗಲಾಡಿಸಲು ರಾಮಾಯಣದ ಮೂಲ ತತ್ವಗಳಾದ ಧಮ೯, ಪ್ರೀತಿ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾತನಾಡಿ, ವಾಲ್ಮೀಕಿಯವರು ನೀಡಿ ಹೋದ ಜ್ಞಾನ ಮತ್ತು ಬೋಧನೆಗಳು ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಿ. ಅಷ್ಟೆ ಅಲ್ಲದೇ ಅವರು ಬಿತ್ತಿ ಹೋದ ಸತ್ಯ, ಸದ್ಗುಣ ಮತ್ತು ಸಹಾನುಭೂತಿಯನ್ನು ಸದಾಚಾರ ಮಾಗ೯ದಲ್ಲಿ ನಡೆಯಲು ನಮಗೆಲ್ಲ ಪ್ರೇರಣೆಯಾಗಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಕಲ್ಯಾಣಶೆಟ್ಟಿ, ವಿಜಯಲಕ್ಷಿ ಹಳಕಟ್ಟಿ, ಮುಜೀಬ್ ರಿಸಾಲದಾರ, ರಾಜಶೇಖರ ಹಿರೇಮಠ, ಶೋಭಾ ಮೇಡೆದಾರ, ಕಮಲಾ ಮುರಾಳ, ರಾಹುಲ ಚವ್ಹಾಣ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಬಿ.ಎಂ.ಅಜೂರ, ಕೆ.ಎಸ್.ಹಣಮಾಣಿ, ಟಿ.ಆರ್.ಹಾವಿನಾಳ, ಭಾಗೀರಥಿ ಸಿಂದೆ, ಎ.ಡಿ.ಮುಲ್ಲಾ, ಬಸವರಾಜ ಬಿರಾದಾರ, ಸವಾ೯ನಂದ ಕೂಬರಡ್ಡಿ ಮುಂತಾದವರು ಉಪಸ್ಥಿತರಿದ್ದರು.