ನಾಳೆ.... ಮಹರ್ಷಿ ವಾಲ್ಮೀಕಿ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

| Published : Oct 07 2024, 01:32 AM IST

ಸಾರಾಂಶ

Maharshi Valmiki Jayanti is decided to celebrate grandly

-ಸುರಪುರ ತಹಸೀಲ್ದಾರ್‌ ಕಚೇರಿಯಲ್ಲಿ ಜಯಂತಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ

----

ಕನ್ನಡಪ್ರಭ ವಾರ್ತೆ ಸುರಪುರ

ನಗರದ ತಹಸೀಲ್ದಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಎಚ್.ಎ. ಸರಕಾವಸ್, ನಗರದ ಡೊಣ್ಣಿಗೇರಿಯ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯೂ ಹಳೆ ಮಾರ್ಗ, ಗೋಪಾಲ ಸ್ವಾಮಿ ದೇಗುಲ, ದರಬಾರ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಸಭೆ ಆಯೋಜಿಸಬೇಕು. ಉತ್ತಮ ಅಂಕ ಪಡೆದ ಎಸ್‌ಎಸ್‌ಎಲ್ ಸಿ, ಪಿಯು ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರ ತಂಡಗಳು ಭಾಗವಹಿಸಲಿವೆ. ನಗರ ಮತ್ತು ಪಟ್ಟಣ ಹಾಗೂ ಗ್ರಾಮಗಳಲಿರುವ ವಾಲ್ಮೀಕಿ ವೃತ್ತಗಳನ್ನು ದೀಪಾಲಂಕಾರ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದರು.

ವಾಲ್ಮೀಕಿ ಸಮುದಾಯದ ವಿವಿಧ ಮುಖಂಡರು ಮಾತನಾಡಿ, ಹಳೆ ಬಸ್ ನಿಲ್ದಾಣದ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ತೆರವುಗೊಳಿಸಿ ನೂತನ ಮೂರ್ತಿ ಪ್ರತಿಷ್ಠಾಪಿಸಿ ಉದ್ಘಾಟಿಸಲು ನಗರಸಭೆ ಪೌರಾಯಕ್ತರಿಗೆ ಸೂಚಿಸಬೇಕು ಎಂದು ತಹಸೀಲ್ದಾರ್ ಅವರನ್ನು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ರಾಜಾ ಪಿಡ್ಡ ನಾಯಕ, ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ ಹೆಮನೂರು, ಭೀಮನಾಯಕ್ ಮಲ್ಲಿಭಾವಿ, ಅಯ್ಯಣ್ಣ ಹಾಲಬಾವಿ, ಅಪ್ಪಯ್ಯ ನಾಯಕ, ಗಂಗಾಧರ ನಾಯಕ್ ತಿಂಥಣಿ, ರಮೇಶ್ ದೊರೆ, ವೆಂಕಟೇಶ್ ಬೇಟೆಗಾರ, ಶಿವರಾಜ್ ಬೊಮ್ಮನಹಳ್ಳಿ, ದತ್ತು ಗುತ್ತೇದಾರ್, ಚಂದ್ರಶೇಖರ ದೊರೆ, ಪರಮಣ್ಣ ವಡಕೇರಿ, ಶಂಕರಗೌಡ ಕೋಳಿಹಾಳ, ನಾಗರಾಜ್ ಪ್ಯಾಪ್ಲಿ, ಬುಚ್ಚಪ್ಪ ನಾಯಕ್, ವಿನಯ ಕರಡಕಲ್, ವೆಂಕಟೇಶ ಪರಸನಹಳ್ಳಿ, ಶಂಕರಗೌಡ ಕೋಳಿಹಾಳ, ಚಂದ್ರಶೇಖರ ಬಿಚ್ಚಿಗತ್ತಿಕೇರಿ, ಮಲ್ಲನಗೌಡ ಗೋಡಿಹಾಳ ಸೇರಿದಂತೆ ಇತರರಿದ್ದರು. ------

ಫೋಟೊ: 5ವೈಡಿಆರ್5 ಸುರಪುರ ನಗರದ ತಹಸೀಲ್ದಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.