ಸಾರಾಂಶ
ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿರುವ ಶ್ರೀ ಗುರು ಮಹಾರುದ್ರ ಸ್ವಾಮಿಯ ಮಹಾ ಶಿವರಾತ್ರಿ ಮಹೋತ್ಸವವು ಫೆಬ್ರವರಿ 26ರಿಂದ 28ರ ವರೆಗೆ ತಾವರೆಕೆರೆ ಶಿಲಾಮಠದ ಮಠಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದ್ದಾರೆ.
ಚನ್ನಗಿರಿ: ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿರುವ ಶ್ರೀ ಗುರು ಮಹಾರುದ್ರ ಸ್ವಾಮಿಯ ಮಹಾ ಶಿವರಾತ್ರಿ ಮಹೋತ್ಸವವು ಫೆಬ್ರವರಿ 26ರಿಂದ 28ರ ವರೆಗೆ ತಾವರೆಕೆರೆ ಶಿಲಾಮಠದ ಮಠಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದ್ದಾರೆ.
ಫೆಬ್ರವರಿ 26ರ ಬುಧುವಾರ ರಾತ್ರಿ 8ಗಂಟೆಯಿಂದ ಜಾಗರಣೆ ಪ್ರಾರಂಭವಾಗಲಿದ್ದು ಶ್ರೀ ಮಠದ ಮನೆಯಿಂದ ರಾತ್ರಿ 10.30ಕ್ಕೆ ವಿವಿಧ ಪುಪ್ಪಗಳಿಂದ ಅಲಂಕೃತಗೊಂಡ ಶ್ರೀ ಗುರು ಮಹಾರುದ್ರಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವವು ವಿವಿಧ ವಾಧ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶ್ರೀ ಮಠಕ್ಕೆ ಬೆಳಗಿನ ಜಾವ 4 ಗಂಟೆಗೆ ಆಗಮಿಸಲಾಗುವುದು ಎಂದು ತಿಳಿಸಿದ್ದಾರೆ.ನಂತರ ಬೆಳಗಿನ ಜಾವ 4 ಗಂಟೆಯಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಅಷ್ಟೋತ್ತರ, ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ, ಶತನಾಮವಳಿ ಸ್ತೋತ್ರ, ಪಾದಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿದೆ.
ಫೆ.27ರ ಗುರುವಾರ ಬೆಳಿಗ್ಗೆ 8ಗಂಟೆಗೆ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದ್ದು ಸ್ವಾಮಿಯ ಮಹಾ ಪೂಜೆ, ಮಂಗಳಾರತಿ ನಡೆದು ಪ್ರಸಾದ ವಿನಿಯೋಗ ಸೇವಾ ಕಾರ್ಯಗಳು ಜರುಗಲಿದೆ.ಫೆಬ್ರವರಿ 28ರ ಶುಕ್ರವಾರ ಬೆಳಿಗ್ಗೆ 11.30ರಿಂದ ಅಮ್ಮನವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದಿದ್ದಾರೆ.