ವೀರಶೈವ-ಲಿಂಗಾಯತ ಒಳ ಪಂಗಡಗಳನ್ನು ಮಹಾಸಭೆ ಒಗ್ಗೂಡಿಸಿದೆ: ಮಹದೇವಸ್ವಾಮಿ

| Published : Aug 15 2024, 01:47 AM IST

ವೀರಶೈವ-ಲಿಂಗಾಯತ ಒಳ ಪಂಗಡಗಳನ್ನು ಮಹಾಸಭೆ ಒಗ್ಗೂಡಿಸಿದೆ: ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ-ಲಿಂಗಾಯತ ಧರ್ಮವು ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಿದ್ದು, ಸಂಘಟನೆ ಬಲಿಷ್ಠಗೊಳಿಸಲು ಎಲ್ಲರು ಶ್ರಮಿಸೋಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ ತಿಳಿಸಿದರು. ಚಾಮರಾಜನಗರದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಬಸವಾದಿ ಶರಣರು ೧೨ನೇ ಶತಮಾನದಲ್ಲಿ ಸ್ಥಾಪನೆ ಮಾಡಿದ್ದ ವೀರಶೈವ-ಲಿಂಗಾಯತ ಧರ್ಮವು ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಿದ್ದು, ಸಂಘಟನೆ ಬಲಿಷ್ಠಗೊಳಿಸಲು ಎಲ್ಲರು ಶ್ರಮಿಸೋಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ ತಿಳಿಸಿದರು. ತಾಲೂಕಿನ ಸಂತೇಮರಹಳ್ಳಿಯಲ್ಲಿ ಎನ್‌ರಿಚ್ ಅಭಿಮಾನಿಗಳ ಬಳಗದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ೨೫ ವರ್ಷಗಳಿಂದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಸಕ್ರಿಯ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಸಂಘಟನೆ ಮಾಡಿದ ಪರಿಣಾಮ, ಮಠಾಧೀಶರು, ಹಿರಿಯರು, ಮಹಾಸಭಾದ ರಾಜ್ಯ ಮತ್ತು ಕೇಂದ್ರ ಸಮಿತಿಯ ವರಿಷ್ಠರು ಕೇಂದ್ರ ಸಮಿತಿಯ ಸದಸ್ಯನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಐದು ತಾಲೂಕು ಕೇಂದ್ರಗಳಲ್ಲಿ ಬಸವ ಭವನ ನಿರ್ಮಾಣ, ಸದಸ್ಯತ್ವವನ್ನು ಹೆಚ್ಚು ಮಾಡುವುದು ಹಾಗೂ ವೀರಶೈವ ಲಿಂಗಾಯತ ಬಂಧುಗಳಿಗೆ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಎಲ್ಲರು ಒಗ್ಗಟ್ಟಿನಿಂದ ಮಾಡೋಣ ಎಂದರು.

ಮಹಾಸಭೆಯು ತಾಲೂಕಿನಿಂದ ಕೇಂದ್ರ ಸಮಿತಿ ದೆಹಲಿಯವರೆಗೆ ಒಂದೇ ವಿಚಾರ ಹಾಗೂ ಸಂಘಟನೆ ಪ್ರಥಮ ಆದ್ಯತೆ. ವೈಯಕ್ತಿಕ ವಿಚಾರ ಇತರೇ ಭಿನ್ನಾಭಿಪ್ರಯಗಳನ್ನು ಬದಿಗಿಟ್ಟು ಸಮಾಜದ ಸಂಘಟನೆಗೆ ಒತ್ತು ನೀಡೋಣ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ಯುವ ಪೀಳಿಗೆ ಬಹಳಷ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿರುವ ವೀರಶೈವ ಲಿಂಗಾಯತ ಧರ್ಮದ ರಥವನ್ನು ಮುಂದಿನ ಪೀಳಿಗೆಗೆ, ಅವರ ವಚನ ಸಾರಗಳು, ಶರಣರ ಆಶಯ, ಅನ್ನ ದಾಸೋಹ, ಅಕ್ಷರ ದಾಸೋಹ ಸಮಾನತೆಯನ್ನು ಜಗತ್ತಿಗೆ ಸಾರೋಣ ಎಂದರು. ಬಸವಣ್ಣ ಎಲ್ಲ ಜಾತಿ, ವರ್ಗ ಸೇರಿಸಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಅದರೊಟ್ಟಿಗೆ ಸಮ ಸಮಾಜದ ನಿರ್ಮಾಣ ಕನಸು ಕಂಡವರು. ಅವರ ಅನುಯಾಯಿಗಳು ಈ ನಿಟ್ಟಿನಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಬಸವ ಧರ್ಮ ಪರಿಪಾಲನೆ ಮಾಡಿ ಮಠಗಳನ್ನು ನಿರ್ಮಾಣ ಮಾಡಿದರು. ಈ ನಿಟ್ಟಿಯಲ್ಲಿ ಯುವಕರು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸಮಾಜಕ್ಕೆ ಅನ್ಯಾಯದಂತಹ ಸಂದರ್ಭದಲ್ಲಿ ಖಂಡಿಸುವ, ಪ್ರತಿಭಟಿಸುವ ಹಕ್ಕು ನಮ್ಮದಾಗಿದೆ. ನಾವೆಲ್ಲರೂ ಮೊದಲು ವೀರಶೈವ ಲಿಂಗಾಯತರಾಗೋಣ ನಂತರ ಇತರೇ ವಿಚಾರಗಳು ಎಂಬುದನ್ನು ಪ್ರತಿ ಮನೆ ಮನೆಗೆ ತಲುಪಿಸಿ, ಗ್ರಾಮ, ಗ್ರಾಮಗಳಲ್ಲಿ ಪ್ರಚಾರ ಮಾಡೋಣ ಎಂದು ಮಹದೇವಸ್ವಾಮಿ ಹೇಳಿದರು.ಕೊಳ್ಳೇಗಾಲ ತಾ.ಮಹಾಸಭಾದ ಅಧ್ಯಕ್ಷ ತಿಮ್ಮರಾಜಿಪುರದ ಪುಟ್ಟಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್‌ರಿಚ್ ಮಹದೇವಸ್ವಾಮಿ ಅವರಿಗೆ ಕೇಂದ್ರ ಸಮಿತಿ ಸದಸ್ಯ ಸ್ಥಾನ ದೊರೆತಿರುವುದು ಜಿಲ್ಲೆಗೆ ಹೆಚ್ಚಿನ ಬಲ ಬಂದಿದೆ ಎಂದರು. ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್‌ಕುಮಾರ್ ಮಾತನಾಡಿ, ಸಂತೇಮರಹಳ್ಳಿ ಭಾಗದಲ್ಲಿ ಹೆಗ್ಗವಾಡಿಪುರ ವಿಶಿಷ್ಟ ಗ್ರಾಮವಾಗಿದ್ದು ಈಗ ಎನ್‌ರಿಎಚ್ ಮಹದೇವಸ್ವಾಮಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಕೇಂದ್ರ ಸಮಿತಿಯ ಸದಸ್ಯರಾಗಿ, ದೆಹಲಿ ಮಟ್ಟಕ್ಕೆ ಹೋಗಿರುವುದು ಹೆಮ್ಮೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸದಸ್ಯರಾದ ಎನ್‌ರಿಚ್ ಮಹದೇವಸ್ವಾಮಿ ಅವರಿಗೆ ಮೈಸೂರು ಪೇಟಾ ತೊಡಿಸಿ, ಭಾರಿ ಗಾತ್ರದ ಹಾರ ಹಾಕಿ ಅಭಿನಂದಿಸಲಾಯಿತು. ಜಿಲ್ಲೆ ಘಟಕ, ತಲೂಕು ಘಟಕಗಳ ಮಹಾಸಭಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರಾದ ಹೊಸೂರು ನಟೇಶ್, ಎನ್.ಆರ್. ಪುರುಷೋತ್ತಮ್, ಮೂಡ್ಲುಪುರ ಮಂಜೇಶ್, ಮುರುಡೇಶ್ವರಸ್ವಾಮಿ, ಸ್ಟೈಲ್ ಮಂಜು, ಕೊಳ್ಳೇಗಾಲ ತಾಲೂಕು ನಿಕಟಪೂರ್ವ ಅಧ್ಯಕ್ಷ ಮಹದೇವಪ್ರಸಾದ್, ಬಸಪ್ಪದೊಡ್ಡಿ ಬಸವರಾಜು, ಸಿ.ಡಿ. ಪ್ರಕಾಶ್, ದೊಡ್ಡರಾಯಪೇಟೆ ಗಿರೀಶ್, ಕಾವುದವಾಡಿ ಶ್ರೀಕಂಠಮೂರ್ತಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುಂದ್ರಪ್ಪ, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಪಿ. ಶಮಿತ್ ಕುಮಾರ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಶಂಕರ್, ಡಿ.ಎಸ್. ಶಂಕರಮೂರ್ತಿ, ವೇದಮೂರ್ತಿ, ನಲ್ಲೂರು ಮಹದೇವಪ್ಪ, ಬಿಸಲವಾಡಿ ಕುಮಾರ್ ಮೊದಲಾದವರು ಇದ್ದರು.