ಮಹಾಶಿವರಾತ್ರಿಯಂದು ಶಿವನಿಗೆ ವಿಶ್ರಾಂತಿ ಕಾಲ: ಡಾ.ರಾಘವೇಂದ್ರ ಗುರೂಜಿ

| Published : Feb 27 2025, 12:37 AM IST

ಮಹಾಶಿವರಾತ್ರಿಯಂದು ಶಿವನಿಗೆ ವಿಶ್ರಾಂತಿ ಕಾಲ: ಡಾ.ರಾಘವೇಂದ್ರ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲವಾಗಿದೆ. ಮಾಘಮಾಸ ಕೃಷ್ಣಪಕ್ಷ ಚತುರ್ದಶಿಯಂದು ದೇವಲೋಕದಲ್ಲಿ ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ಪಡೆಯುವಾಗ ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದ್ದಾರೆ.

- ವಿಶ್ವಯೋಗ ಮಂದಿರದಲ್ಲಿ ಸರಳ ಶಿವಧ್ಯಾನ ಯೋಗ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲವಾಗಿದೆ. ಮಾಘಮಾಸ ಕೃಷ್ಣಪಕ್ಷ ಚತುರ್ದಶಿಯಂದು ದೇವಲೋಕದಲ್ಲಿ ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ಪಡೆಯುವಾಗ ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದರು.

ಬುಧವಾರ ಪ್ರಾತಃಕಾಲ ನಗರದ ದೇವರಾಜ ಅರಸು ಬಡಾವಣೆಯ ಸಿ ಬ್ಲಾಕ್‌ನಲ್ಲಿರುವ ಆದರ್ಶಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ''''''''ಸರಳ ಶಿವಧ್ಯಾನ ಯೋಗ'''''''' ಎಂಬ ಕಾರ್ಯಕ್ರಮದಲ್ಲಿ ಶಿವರಾತ್ರಿ ಮಹತ್ವ ಕುರಿತು ಅವರು ಮಾತನಾಡಿದರು.

ಮಹಾ ಶಿವರಾತ್ರಿಯಂದು ಶಿವನು ಭೂಲೋಕಕ್ಕೆ ಬಂದು ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುವನು ಎಂಬ ನಂಬಿಕೆ ಇದೆ, ಆದ್ದರಿಂದ ಶಿವತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮಾಡುವ ಉಪಾಸನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ವದ ಲಾಭವು ಸಿಗಲಿದೆ. ದಿನವಿಡೀ ''''''''ಓಂ ನಮಃ ಶಿವಾಯ'''''''' ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುವುದರಿಂದ ಮೋಕ್ಷವನ್ನು ಸಾಧಿಸಬಹುದು. ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ ಶಿವನಿಗೆ ಬಿಳಿಅಕ್ಷತೆ, ಬಿಳಿಹೂವು, ಬಿಲ್ವಪತ್ರೆ ಅರ್ಪಿಸಿ ಶ್ರದ್ಧಾ-ಭಕ್ತಿಯಿಂದ ಪೂಜೆ ಮಾಡಿ, ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಬೇಕು. ಇದರಿಂದ ಸುಃಖ, ನೆಮ್ಮದಿ, ಆರೋಗ್ಯ, ಸಮೃದ್ಧಿಯಾಗುವುದು ಎಂದು ತಿಳಿಸಿದರು.

ಶಿವಧ್ಯಾನದಲ್ಲಿ ಪತ್ರಕರ್ತ ಎಚ್.ಎನ್.ಪ್ರಕಾಶ್, ಅಜಯ್ ಮತ್ತು ಆದಿತ್ಯ ಸೋಲಂಕಿ, ಎಚ್.ಸಂತೋಷ್, ಕೆ.ಎಸ್.ಹರ್ಷ, ಭರತ್ ವದೋನಿ, ಕಾವ್ಯ, ವಿಜಯಲಕ್ಷ್ಮೀ ಇತರರು ಇದ್ದರು.

- - - -26ಕೆಡಿವಿಜಿ37.ಜೆಪಿಜಿ:

ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನದಿಂದ ಶಿವರಾತ್ರಿ ಅಂಗವಾಗಿ ಸರಳ ಶಿವಧ್ಯಾನ ಯೋಗ ಕಾರ್ಯಕ್ರಮ ನಡೆಯಿತು.